ನಾಪೋಕ್ಲು, ಆ. ೧೮: ಮೇಯಲು ಬಿಟ್ಟ ಹಸುವೊಂದು ವಿದ್ಯುತ್ ಸ್ಪರ್ಶದಿಂದ ದುರ್ಮರಣಗೊಂಡ ಘಟನೆ ಸಮೀಪದ ಕಿರುಂದಾಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದೇವಜನ ಪಳಂಗಪ್ಪ ತಮ್ಮ ಹಸುವನ್ನು ಗುರುವಾರ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭ ಗದ್ದೆಯಲ್ಲಿ ಬಿದ್ದಿರುವ ವಿದ್ಯುತ್ ತಂತಿ ಸ್ಪರ್ಶಿಸಿ ಹಸು ಮೃತಪಟ್ಟಿದೆ. ಕಳೆದ ಒಂದೂವರೆ ತಿಂಗಳಿನಿAದ ವಿದ್ಯುತ್ ತಂತಿ ನೇತಾಡುತಿತ್ತು. ಇದರ ಮೇಲೆ ಮರ ಬಿದ್ದು ತಂತಿ ನೆಲವನ್ನು ಸ್ಪರ್ಶಿಸಿದೆ. ಈ ಬಗ್ಗೆ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷö್ಯತನದಿಂದ ಸುಮಾರು ೫೦ ಸಾವಿರ ಮೌಲ್ಯದ ಹಸು ಮರಣ ಹೊಂದಿದ್ದು, ನಷ್ಟಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂದು ಪಳಂಗಪ್ಪ ಒತ್ತಾಯಿಸಿದ್ದಾರೆ. -ದುಗ್ಗಳ.