ಭಾರತದ ಅತ್ಯಾಧುನಿಕ ಮತ್ತು ಸೆಮಿ ಹೈಸ್ಪೀಡ್ ರೈಲು ಎಂಬ ಹೆಗ್ಗಳಿಕೆಯ ವಂದೇ ಭಾರತ್ ಚಾಲನೆಗೊಂಡು ೧೦ ತಿಂಗಳಿನಲ್ಲಿಯೇ ಅತ್ಯಧಿಕ ಜನಪ್ರಿಯತೆ ಪಡೆದುಕೊಂಡಿದೆ. ಕೊಡಗು ಜಿಲ್ಲೆಗೆ ಚೆನ್ನೆöÊ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಲೂ ವಂದೇ ಭಾರತ್ ಕಾರಣವಾಗಿದೆ. ಹಳಿಗಳ ಮೇಲಿನ ಐಷಾರಾಮಿ ರೈಲು ಎಂಬ ಹೆಗ್ಗಳಿಕೆಯ ವಂದೇ ಭಾರತ್ ಭಾರತೀಯ ರೈಲುಗಳಿಗಿದ್ದ ಅಭಿಪ್ರಾಯವನ್ನೇ ಬದಲಿಸಿ, ರೈಲು ಪ್ರಯಾಣ ಈಗ ಅತ್ಯಂತ ಆರಾಮದಾಯಕ ಎಂಬ ಹೆಮ್ಮೆಯ ಅನಿಸಿಕೆ ವ್ಯಕ್ತವಾಗುವಂತೆ ಮಾಡಿದೆ.
ವಂದೇ ಬಾರತ್ ರೈಲಿನ ಒಳವಿನ್ಯಾಸ ಕೂಡ ಇದರ ವೇಗದಂತೆಯೇ ಪ್ರಯಾಣಿಕರ ಮೆಚ್ಚುಗೆ ಗಳಿಸಿದೆ. ದೇಶದ ೫ ನೇ ಮತ್ತು ದಕ್ಷಿಣ ಭಾರತದ ೫ನೇ ವಂದೇ ಭಾರರತ್ ರೈಲು ಮೈಸೂರಿನಿಂದ ಚೆನ್ನೆöÊಗೆ ಸಂಚರಿಸುತ್ತಿದ್ದು, ಪ್ರಯಾಣಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಶತಾಬ್ಧಿ ಹೊರತು ಪಡಿಸಿದಂತೆ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಅತ್ಯಾಧುನಿಕ ಸೌಕರ್ಯಗಳ ಮತ್ತೊಂದು ರೈಲಾಗಿರುವ ವಂದೇ ಭಾರತ್ ವೇಗ ಮತ್ತು ಐಷಾರಾಮಿ ವ್ಯವಸ್ಥೆಗಳಲ್ಲಿ ಶತಾಬ್ಧಿಯನ್ನೂ ಮೀರಿಸಿದೆ.
ಗಂಟೆಗೆ ೧೬೦ ಕಿ.ಮೀ ವೇಗದ ಸಾಮರ್ಥ್ಯವಿರುವ ವಂದೇ ಭಾರತ್ ಮೈಸೂರು-ಚೆನ್ನೆöÊ ನಡುವೆ ೧೨೦ ಕಿ.ಮೀ. ವೇಗದೊಂದಿಗೆ ಸಂಚರಿಸುತ್ತಿದೆ. ರೈಲಿನಲ್ಲಿ ಏರೋಡೈನಾಮಿಕ್ಸ್ ಸೌಲಭ್ಯವಿರುವುದರಿಂದ ಗಾಳಿಯ ಪ್ರಬಲ ವೇಗವನ್ನೂ ಭೇದಿಸಿ ರೈಲು ವೇಗವಾಗಿ ಸಾಗುತ್ತದೆ. ಬೇರೆ ರೈಲಿನಂತೆ ಪ್ರತ್ಯೇಕ ಇಂಜಿನ್ ಹೊಂದಿರದ ವಂದೇಭಾರತ್ ರೈಲಿನ ಮುಂಬದಿಯೇ ಆಕರ್ಷಕ ವಿನ್ಯಾಸದೊಂದಿಗೆ ಮೇಡ್ ಇನ್ ಇಂಡಿಯಾ ಪರಿಕಲ್ಪನೆಗೆ ಸಾಕ್ಷಿ ಹೇಳುತ್ತಿದೆ. ಹೊರವಿನ್ಯಾಸದಂತೆ ರೈಲಿನ ಒಳವಿನ್ಯಾಸವೂ ಪ್ರಯಾಣಿಕರ ಮೆಚ್ಚುಗೆಗೆ ಕಾರಣವಾಗಿದೆ.
ಹಳಿಯ ಮೇಲೆ ವೇಗದಿಂದ ಸಾಗುವ ವಿಮಾನದ ಅನುಭವ ತರಬಲ್ಲ ವಂದೇಭಾರತ್ ವಿಮಾನ ದಂತೆ ಎಲ್ಲಾ ಐಷಾರಾಮಿ ಸೌಲಭ್ಯ ವನ್ನೂ ತನ್ನಲ್ಲಿ ಹೊಂದಿರುವುದು ಕೂಡ ಪ್ರಯಾಣಿಕರ ಮೆಚ್ಚುಗೆ ಗಳಿಸಿದೆ. ಸಂಪೂರ್ಣ ಹವಾನಿಯಂತ್ರಿತ ವಾಗಿರುವ ೧೬ ಬೋಗಿಗಳಲ್ಲಿ ೧೨೩೦ ಮಂದಿ ಹಾಯಾಗಿ ಕೂರಬಹು ದಾಗಿದೆ. ಹಾಯಾಗಿ ಕೂರಬಹುದಾದ ಐಷಾರಾಮಿ ಆಸನವೂ ವಂದೇಭಾರತ್ ಆಕರ್ಷಣೆಯಾಗಿದ್ದು, ವೈಫೈ ಸೌಲಭ್ಯವಿ ರುವುದರಿಂದ ಉದ್ಯೋಗಿಗಳಿಗೆ ವರ್ಕ್ ಫ್ರಂ ಟ್ರೇನ್ ಕೂಡ ಸುಲಭ ಸಾಧ್ಯವಾಗಿದೆ. ಚಾರ್ಜಿಂಗ್ ಪಾಯಿಂಟ್, ಮಿನಿ ರೀಡಿಂಗ್ ಲೈಟ್ ಕೂಡ ಆಸನದ ಬಳಿಯಿದೆ. ಬ್ರೆöÊಲ್ ಲಿಪಿ, ವಿಶೇಷಚೇತನರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕೂಡ ವಂದೇ ಭಾರತ್ ವಿಶೇಷತೆ.
ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಅಳವಡಿಸಲಾಗಿರುವ ೩೬೦ ಡಿಗ್ರಿ ತಿರುಗ ಬಲ್ಲ ಸುಸಜ್ಜಿತ ಆಸನಗಳು ಪ್ರಯಾಣಿಕರಿಗೆ ಹೊಸ ಅನುಭವ ನೀಡುತ್ತಿದೆ. ಬೋಗಿಯಿಂದ ಬೋಗಿಯ ಮಧ್ಯೆ ಸ್ವಯಂಚಾಲಿತ ಬಾಗಿಲು, ಸಿಸಿ ಕ್ಯಾಮರ, ಬಯೋಟಾಯ್ಲೆಟ್ ಕೂಡ ವಂದೇ ಭಾರತ್‌ನಲ್ಲಿದೆ.
ಮೈಸೂರಿನಿಂದ ಮಧ್ಯಾಹ್ನ ೧.೦೫ ಗಂಟೆಗೆ ಹೊರಟು ಬೆಂಗಳೂರಿಗೆ ೨.೫೫ ಕ್ಕೆ ತಲುಪಿ ಚೆನ್ನೆöÊಗೆ ೭.೨೫ ಗಂಟೆಗೆ ತಲುಪುವ ವಂದೇ ಭಾರತ್ ಚೆನ್ನೆöÊನಿಂದ ಮುಂಜಾನೆ ೫.೫೦ ಗಂಟೆಗೆ ಹೊರಟು ಬೆಂಗಳೂರಿಗೆ ೧೦.೨೫ ಗಂಟೆಗೆ ತಲುಪಿ, ಮೈಸೂರಿಗೆ ಮಧ್ಯಾಹ್ನ ೧೨.೧೫ ಗಂಟೆಗೆ ತಲುಪುತ್ತದೆ. ಬೆಂಗಳೂರಿನಲ್ಲಿ ಕೇವಲ ೫ ನಿಮಿಷ ಮಾತ್ರ ನಿಲುಗಡೆಯಾಗಿ ಮತ್ತೆ ಮುಂದೋಡುತ್ತದೆ. ತಾಂತ್ರಿಕವಾಗಿಯೂ ಉತ್ತಮವಾಗಿರುವ ಈ ರೈಲು ಪ್ರಯಾಣಿಕರಿಗೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಐಷಾರಾಮಿ ಸೌಲಭ್ಯ ಕಲ್ಪಿಸಿರುವುದೂ ವಂದೇ ಭಾರತ್ ರೈಲು ಜನಪ್ರಿಯವಾಗಿರುವುದಕ್ಕೆ ಪ್ರಮುಖ ಕಾರಣ.
ನವದೆಹಲಿ-ವಾರಣಾಸಿ, ನವದೆಹಲಿ-ವೈಷ್ಮೋದೇವಿ, ಗಾಂಧಿ ನಗರ -ಮುಂಬೈ, ನವದೆಹಲಿ-ಉನಾ, ಮೈಸೂರ-ಚೆನ್ನೆöÊ, ಗೋವಾ, ಮುಂಬೈ ಮಾರ್ಗ ಸೇರಿದಂತೆ ಪ್ರಸ್ತುತ ಭಾರತದ ಅನೇಕ ಪ್ರಮುಖ ª
ÀiÁರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿದೆ. ಕರ್ನಾಟಕದಲ್ಲಿ ಚೆನ್ನೆöÊ-ಮೈಸೂರು ಮತ್ತು ಬೆಂಗಳೂರು-ಧಾರವಾಡ ನಡುವೆ ಇದೀಗ ಸಂಚರಿಸು ತ್ತಿರುವ ವಂದೇಭಾರತ್ ಸದ್ಯದಲ್ಲಿಯೇ ಬೆಂಗಳೂರು- ಹೈದರಾಬಾದ್ ಹಾಗೂ ಮಂಗಳೂರು-ಗೋವಾ ನಡುವೆಯೂ ಪ್ರಯಾಣ ಆರಂಭಿಸಲಿದೆ.
ವಿಮಾನದಲ್ಲಿ ತೆರಳುತ್ತಿದ್ದ ಉದ್ಯಮಿಗಳು, ಗಣ್ಯರು ಇದೀಗ ವಂದೇ ಭಾರತ್ ಮೂಲಕ ಅತೀ ಕಡಿಮೆ ಅವಧಿ, ಕಡಿಮೆ ವೆಚ್ಚದಲ್ಲಿ ಐಷಾರಾಮಿ ಪಯಣ ಮಾಡಲು ಸಾಧ್ಯವಾಗಿದೆ. ಬುಧವಾರ ಹೊರತುಪಡಿಸಿ ವಾರದ ಬೇರೆಲ್ಲಾ ದಿನಗಳೂ ಶತಾಬ್ಧಿ ಸಮಯಕ್ಕಿಂತ ಕೆಲವು ನಿಮಿಷಗಳ ಮುನ್ನ ವಂದೇ ಭಾರತ್ ಮುಂದೋಡುತ್ತಿದೆ. ಎಲ್ಲಾ ರೈಲುಗಳನ್ನೂ ಹಿಂದಿಕ್ಕಿ ಭಾರತದ ರೈಲ್ವೇ ಕ್ಷೇತ್ರದ ಸಾಧನೆಯ ಪ್ರತೀಕವಾಗಿ ವಂದೇ ಭಾರತ್ ಕಂಗೊಳಿ ಸುತ್ತಾ ಅರಮನೆ ನಗರಿಯಿಂದ ಕಡಲ ತೀರದ ನಗರಿಯವರೆಗೂ ಸಾಗುತ್ತಿದೆ.
ವಿದೇಶಗಳಲ್ಲಿ ವೇಗ, ಐಷಾರಾಮಿ ರೈಲು ನೋಡಿ ಮನ ಸೋತಿ ದ್ದವರು ಖಂಡಿತಾ ವಂದೇ ಭಾರತ್ ನೋಡಿದರೆ. ನವ ಭಾರತದ ಕನಸು ಸಾಕಾರಗೊಳ್ಳುತ್ತಿದೆ ಎಂಬ ಭಾವನೆ ಬಂದೇ ಬರುತ್ತದೆ.
-ಅನಿಲ್ ಹೆಚ್. ಟಿ., ಮಡಿಕೇರಿ.