ರಾಜ್ಯದಲ್ಲಿ ಎನ್.ಇ.ಪಿ. ರದ್ದಿಗೆ ಕೇಂದ್ರ ಕಿಡಿ
ನವದೆಹಲಿ, ಆ. ೧೭: ರಾಜ್ಯದಲ್ಲಿ ರಾಷ್ಟಿçÃಯ ಶಿಕ್ಷಣ ನೀತಿಯನ್ನು (ಎನ್ಇಪಿ) ರದ್ದುಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರ ರಾಜಕೀಯ ಪ್ರೇರಿತ ಎಂದಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಶಿಕ್ಷಣವು ಪ್ರಗತಿಯ ದಾರಿದೀಪವಾಗಬೇಕು. ರಾಜಕೀಯ ಕೈಗೊಂಬೆಯಾಗ ಬಾರದು ಎಂದು ಹೇಳಿದ್ದಾರೆ. ರಾಷ್ಟಿçÃಯ ಶಿಕ್ಷಣ ನೀತಿ ೨೦೨೦ ಅನ್ನು ರದ್ದುಗೊಳಿಸುವ ಕರ್ನಾಟಕ ಮುಖ್ಯಮಂತ್ರಿ ನಿರ್ಧಾರ ರಾಜಕೀಯ ಪ್ರೇರಿತ ಮತ್ತು ಇದರಿಂದ ತೀವ್ರ ನಿರಾಶೆಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆಗೆ ವಿಕಸನ ಬೇಕು. ಎನ್.ಇ.ಪಿ. ಹಲವು ವರ್ಷಗಳ ಸಮಾಲೋಚನೆಗಳ ಫಲಿತಾಂಶವಾಗಿದ್ದು, ಇದು ಎಲ್ಲರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನ್ ತಿಳಿಸಿದ್ದಾರೆ. ಈ ನಿರ್ಧಾರವು ಕಾಂಗ್ರೆಸ್ನ ಸುಧಾರಣೆ-ವಿರೋಧಿ, ಭಾರತೀಯ ಭಾಷಾ ವಿರೋಧಿ ಮತ್ತು ಕರ್ನಾಟಕ ವಿರೋಧಿ ನೀತಿಯನ್ನು ಬಹಿರಂಗಪಡಿಸುತ್ತದೆ. ವಿದ್ಯಾರ್ಥಿಗಳನ್ನು ಮುಂದಿಟ್ಟುಕೊAಡು ಕ್ಷುಲ್ಲಕ ರಾಜಕೀಯ ಮಾಡುವುದನ್ನು ನಿಲ್ಲಿಸೋಣ! ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿ ಧರ್ಮೇಂದ್ರ ಪ್ರಧಾನ್ ಅವರು ಟ್ವೀಟ್ ಮಾಡಿದ್ದಾರೆ.
ನಿಯಮ ಉಲ್ಲಂಘನೆ ಆರೋಪ-ನಟ ಗಣೇಶ್ಗೆ ನೋಟೀಸ್
ಚಾಮರಾಜನಗರ, ಆ. ೧೭: ಚಾಮರಾಜನಗರ ಜಿಲ್ಲೆಯ ಬಂಡಿಪುರ ಸಮೀಪದ ಪರಿಸರ ಸೂಕ್ಷö್ಮ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅರಣ್ಯ ಇಲಾಖೆ ನೊಟೀಸ್ ಜಾರಿ ಮಾಡಿದ್ದು, ತಕ್ಷಣ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದೆ. ನಟ ಗಣೇಶ್ ಅವರು ಗುಂಡ್ಲುಪೇಟೆ ತಾಲೂಕು ಹಂಗಳ ಹೋಬಳಿಯ ಜಕ್ಕಹಳ್ಳಿಯ ಸರ್ವೆ ನಂಬರ್ ೧೦೫ ರಲ್ಲಿ ೧ ಎಕರೆ ೨೪ ಗುಂಟೆ ಜಮೀನು ಹೊಂದಿದ್ದು, ಮನೆ ಹಾಗೂ ತೋಟಗಾರಿಕೆ ಉದ್ದೇಶಕ್ಕಾಗಿ ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿದ್ದಾರೆ. ಆದರೆ ಅರಣ್ಯ ಸೂಕ್ಷö್ಮ ಪರಿಸರ ವಲಯದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಪರಿಸರ ವಾದಿಗಳು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಂಡಿಪುರ ಹುಲಿಧಾಮ ನಿರ್ದೇಶಕ ಡಾ. ಪಿ. ರಮೇಶ್ ಕುಮಾರ್ ಅವರು ಗಣೇಶ್ ಅವರಿಗೆ ನೊಟೀಸ್ ಜಾರಿಗೊಳಿಸಿದ್ದಾರೆ.
ವಿಮಾನ ಪತನ - ೧೦ ಮಂದಿ ಸಾವು
ಕೌಲಾಲಂಪುರ್, ಆ. ೧೭: ಮಲೇಷ್ಯಾದ ಸೆಂಟ್ರಲ್ ಸೆಲಂಗೊರ್ ರಾಜ್ಯದಲ್ಲಿ ಲಘು ವಿಮಾನವೊಂದು ಗುರುವಾರ ರಸ್ತೆಯಲ್ಲೇ ಪತನಗೊಂಡಿದ್ದು, ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಎಂಟು ಜನ ಹಾಗೂ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಸದ್ಯಕ್ಕೆ, ವಿಮಾನ ದುರಂತದಲ್ಲಿ ಕನಿಷ್ಟ ೧೦ ಜನ ಸಾವನ್ನಪ್ಪಿದ್ದಾರೆ. ಇಬ್ಬರು ವಾಹನ ಚಾಲಕರು-ಕಾರಿನಲ್ಲಿದ್ದ ಒಬ್ಬರು ಮತ್ತು ಮೋಟಾರ್ ಸೈಕಲ್ನಲ್ಲಿದ್ದ ಒಬ್ಬರು ಹಾಗೂ ವಿಮಾನದಲ್ಲಿದ್ದ ಎಂಟು ಮಂದಿ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ. ಕೇಂದ್ರ ಪಹಾಂಗ್ ರಾಜ್ಯದ ವಸತಿ ಮತ್ತು ಪರಿಸರ ಉಸ್ತುವಾರಿ, ರಾಜ್ಯ ಅಸೆಂಬ್ಲಿ ಸದಸ್ಯ ಜೊಹರಿ ಹರುನ್ ಅವರು ಸಹ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರ:ಪಿಸ್ತೂಲ್, ಮದ್ದುಗುಂಡುಗಳ ವಶ
ಇಂಫಾಲ್, ಆ. ೧೭: ಹಿಂಸಾಚಾರ ಪೀಡಿತ ಮಣಿಪುರದ ವಿವಿಧ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಬುಧವಾರ ಶೋಧ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ಎಂಟು ಪಿಸ್ತೂಲ್ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷ್ಣುಪುರ, ಚುರಚಾಂದ್ಪುರ, ತೆಂಗ್ಪಾಲ್, ಕಂಗೋಕ್ಷಿ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಶೋಧಕಾರ್ಯ ನಡೆಸಿದವು. ಈ ವೇಳೆ ಆರು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ತೆಂಗ್ಪಾಲ್ ಜಿಲ್ಲೆಯಲ್ಲಿ ಆರು ಅಡಗುದಾಣಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ. ಹಠಾತ್ ಆಗಿ ನಡೆಯುವ ಗುಂಡಿನ ದಾಳಿ ಮತ್ತು ಪ್ರತಿಭಟನಾನಿರತರು ಒಂದೆಡೆ ಸೇರುವ ಕಾರಣ ರಾಜ್ಯದಲ್ಲಿ ಆತಂಕಕಾರಿ ಪರಿಸ್ಥಿತಿ ಮುಂದುವರೆದಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.