ಮುಳ್ಳೂರು, ಆ. ೧೭: ಕೊಡಗು ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಒಂದಾದ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯಲ್ಲಿರುವ ಮುಳ್ಳೂರು ತ್ರಿವಳಿ ಜೈನ ಬಸದಿ ಕೇಂದ್ರ ರಾಜ್ಯದಲ್ಲಿ ಅಪರೂಪವಾಗಿರುವ ತ್ರಿವಳಿ ಜೈನ ಬಸದಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರವಾಸಿ ತಾಣವಾಗಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಸ್ಥಳೀಯರು ಸೇರಿದಂತೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಸೇರಿದಂತೆ ಅಧ್ಯಯನ ಪ್ರವಾಸಿಗರು ಸಹ ಬರುತ್ತಾರೆ. ಈ ಜೈನ ಬಸದಿ ಕೇಂದ್ರ ಸರಕಾರದ ಪುರಾತತ್ವ ಇಲಾಖೆಗೆ ಒಳಪಟ್ಟಿದೆ.

ತ್ರಿವಳಿ ಜೈನ ಬಸದಿ ಕೇಂದ್ರಕ್ಕೆ ಮುಳ್ಳೂರು ಜಂಕ್ಷನ್‌ದಿAದ ಒಂದೂವರೆ ಕಿ.ಮೀ. ದೂರ ಇದ್ದು ಇಲ್ಲಿಗೆ ಹೋಗುವ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯನ್ನು ಸುಮಾರು ೩೦ ವರ್ಷಗಳ ಹಿಂದೆ ಡಾಂಬರು ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗಿತ್ತು. ಮಳೆಗಾಲದಲ್ಲಿ ಈ ಭಾಗದಲ್ಲಿ ಹೆಚ್ಚಾಗಿ ಮಳೆ ಬೀಳುವುದರಿಂದ ರಸ್ತೆ ಡಾಂಬರಿಕರಣಗೊಳಿಸಿದ ೧೦ ವರ್ಷದಲ್ಲೆ ಹಾಳಾಗುತ್ತಾ ಬಂದಿತು. ಕಳೆದ ೧೫ ವರ್ಷಗಳಿಂದ ರಸ್ತೆ ಡಾಂಬರಿ ಕಿತ್ತು ಹೋಗಿ ರಸ್ತೆ ಮಧ್ಯದಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿದ್ದು ಈ ರಸ್ತೆಯಲ್ಲಿ ಸ್ಥಳೀಯರು ವಾಹನಗಳಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಗ್ರಾಮಸ್ಥರು ಜೈನ ಬಸದಿ ರಸ್ತೆಯನ್ನು ಮತ್ತೆ ಡಾಂಬರಿಕರಣಗೊಳಿಸುವAತೆ ಕಳೆದ ಕೆಲ ವರ್ಷಗಳಿಂದಲೂ ಸರಕಾರ, ಸಂಬAಧಪಟ್ಟ ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಜೈನ ಬಸದಿಗೆ ಹೋಗುವ ರಸ್ತೆ ಹಾಳಾಗಿರುವ ಹಿನ್ನೆಲೆ ಇಲ್ಲಿಗೆ ಬರಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಕೆಲವೊಮ್ಮೆ ಹೊರ ರಾಜ್ಯದಿಂದ ತ್ರಿವಳಿ ಜೈನ ಬಸದಿ ನೋಡಲು ಬರುವ ಪ್ರವಾಸಿಗರು ವಾಹನವನ್ನು ಮುಳ್ಳೂರು ಜಂಕ್ಷನ್‌ನಲ್ಲಿ ನಿಲ್ಲಿಸಿ ನಡೆದುಕೊಂಡು ಹೋಗುವ ಪರಿಸ್ಥಿಗೆ ಬಂದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಮುಳ್ಳೂರು ಜಂಕ್ಷನ್‌ನಿAದ ಜೈನ ಬಸದಿಗೆ ಒಂದೂವರೆ ಕಿ.ಮೀ.ದೂರ ಇದ್ದು ಈ ಪೈಕಿ ಕಳೆದ ಅವಧಿಯಲ್ಲಿ ಅಲ್ಲಲ್ಲಿ ತಲಾ ೧೦೦ ಮೀಟರ್‌ನಷ್ಟು ದೂರದಂತೆ ಕಾಂಕ್ರಿಟ್ ರಸ್ತೆಯನ್ನು ಅಭಿವೃದ್ಧಿಗೊಳಿಸಿದ್ದನ್ನು ಹೊರತು ಪಡಿಸಿದಂತೆ ಇನ್ನು ೧ ಕಿ.ಮೀ.ದೂರದ ವರೆಗೆ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಈಗ ಹೊಸ ಸರಕಾರ ಅಧಿಕಾರಕ್ಕೆ ಬಂದಿದ್ದು ಸರಕಾರ ತೀರಾ ದುಸ್ಥಿತಿಯಲ್ಲಿರುವ ಜೈನ ಬಸದಿ ರಸ್ತೆಯನ್ನು ಡಾಂಬರಿ ಅಥವಾ ಕಾಂಕ್ರಿಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಬೇಕಿದೆ.

- ಭಾಸ್ಕರ್ ಮುಳ್ಳೂರು