ಮಡಿಕೇರಿ, ಆ. ೧೭: ಮುಂಬ ರುವ ದಿನಗಳಲ್ಲಿ ಎದುರಾಗಲಿರುವ ಸಹಕಾರ ಸಂಘ, ಜಿಲ್ಲಾ ಪಂಚಾ ಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ಈಗಿ ನಿಂದಲೇ ಸಜ್ಜಾಗುವಂತೆ ಬಿಜೆಪಿ ಪಕ್ಷದ ನಾಯಕರುಗಳು ಕಾರ್ಯ ಕರ್ತರಿಗೆ ಕರೆ ನೀಡಿದರು.

ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅನಿರೀಕ್ಷಿತವೆಂಬAತೆ ಪಂಚಾಯಿತಿ ಅಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದಿದೆ. ಇದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸಹಕಾರ ಸಂಘ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಜಯಶಾಲಿಯನ್ನಾ ಗಿಸಲು ಕಾರ್ಯಕರ್ತರು ಶ್ರಮವಹಿ ಸಬೇಕು. ಕೇವಲ ೧೦-೧೨ ಮಂದಿ ಕಾರ್ಯಕರ್ತರಿದ್ದ ಬಿಜೆಪಿ ಪಕ್ಷ ಇಂದು ಸಾವಿರಾರು ಕಾರ್ಯ ಕರ್ತರನ್ನೊಳಗೊಂಡಿದೆ. ಎಲ್ಲರೂ ಒಗ್ಗ ಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ ಮಾತನಾಡಿ; ಸದ್ಯದಲ್ಲೇ ಎದುರಾಗಲಿರುವ ಸಹಕಾರ ಸಂಘದ ಚುನಾವಣೆಯಲ್ಲಿ ಪಕ್ಷ ಬೆಂಬಲಿ ತರನ್ನು ಆಯ್ಕೆ ಮಾಡಬೇಕಿದೆ. ತಾ.ಪಂ., ಜಿ.ಪಂ. ಚುನಾವಣೆ ಯತ್ತಲೂ ಗಮನಹರಿಸಬೇಕು. ಯುವ ಪೀಳಿಗೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ದರೊಂದಿಗೆ ಜವಾಬ್ದಾರಿ ವಹಿಸಿಕೊ ಳ್ಳಲು ಮುಂದಾಗಬೇಕೆAದು ಕರೆ ಮಾಡಿದರು. ಚುನಾವಣೆಯಲ್ಲಿ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿ ಗಳನ್ನು ಆಯ್ಕೆ ಮಾಡುವದರೊಂದಿಗೆ ಕಾರ್ಯತಂತ್ರ ರೂಪಿಸಬೇಕೆಂದು ಸಲಹೆ ಮಾಡಿದರು.

ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎನ್.ರಮೇಶ್ ಮಾತನಾಡಿ; ಚುನಾವಣೆ ಎದುರಿಸಲು ಮೊದಲೇ ಸಿದ್ಧರಾಗಿ ರಬೇಕು. ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವದರೊAದಿಗೆ ಜನರ ಮನಸನ್ನು ಗೆಲ್ಲಬೇಕು. ಹಣದಿಂದ ಮತ ಗಳಿಸಲು ಸಾಧ್ಯವಿಲ್ಲವೆಂದು ಹೇಳಿದರು. ಪಕ್ಷದಲ್ಲಿಯೂ ಹಿರಿಯರು ಎರಡನೇ ದರ್ಜೆಯ ನಾಯಕರು ಗಳನ್ನು ಬೆಳೆಸಬೇಕು, ಯುವಕರು ಮುಂದೆ ಬರಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಕ್ಕಂದೂರು, ಉದಯಗಿರಿ, ಹೆಮ್ಮೆತ್ತಾಳು, ಮೇಘತ್ತಾಳು ಗ್ರಾಮದ ಗ್ರಾಮಸ್ಥರು, ಮುಕ್ಕೋಡ್ಲು ಶ್ರೀ ಭದ್ರಕಾಳೇಶ್ವರಿ ದೇವಾಲಯ ಸಮಿತಿಯವರು ನೂತನ ಅಧ್ಯಕ್ಷ ಬಿ.ಎನ್. ರಮೇಶ್, ಉಪಾಧ್ಯಕ್ಷೆ ಬಿ.ಎಸ್. ವಿಮಲ ರವಿ ಅವರುಗಳನ್ನು ಸನ್ಮಾನಿಸಿ, ಗೌರವಿಸಿದರು.

ಶಕ್ತಿ ಕೇಂದ್ರದ ಪ್ರಮುಖ್ ತೂಟೇರ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹ ಪ್ರಮುಖ್ ಮಡ್ಲಂಡ ಲವ, ಗ್ರಾ.ಪಂ.ಸದಸ್ಯೆ ಸುನಂದ, ಮಾಜಿ ಅಧ್ಯಕ್ಷ ಕುಂಬಗೌಡನ ಮಧುಗೋಪಾಲ, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎ. ಹರೀಶ್, ಪಕ್ಷದ ಹಿರಿಯರಾದ ಉಕ್ಕೇರಂಡ ನಾಣಯ್ಯ, ಹುದೇರಿ ಕಾಳಪ್ಪ, ಚೌಕಿ ರಘುತಿಮ್ಮಯ್ಯ, ಬಿ.ಎಸ್. ಚಂದ್ರಶೇಖರ್ ಯುವ ಮೋರ್ಚಾ ಅಧ್ಯಕ್ಷ ಬಿ.ಎಸ್. ಸಂದೀಪ್ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.