ಚಂದ್ರನ ಮೇಲ್ಮೆöÊ ವೀಡಿಯೋ ಸೆರೆಹಿಡಿದ ವಿಕ್ರಮ್ ಲ್ಯಾಂಡರ್
ನವದೆಹಲಿ, ಆ. ೧೮: ಇಸ್ರೋ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಕ್ರಮ್ ಲ್ಯಾಂಡರ್ ಸೆರೆ ಹಿಡಿದಿರುವ ಚಂದ್ರನ ಮೇಲ್ಮೆöÊಯ ಹೊಸ ವೀಡಿಯೋವನ್ನು ಬಿಡುಗಡೆ ಮಾಡಿದೆ. ವಿಕ್ರಮ್ ಲ್ಯಾಂಡರ್‌ನಲ್ಲಿ ಅಳವಡಿಸಿರುವ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ ಈ ವೀಡಿಯೋವನ್ನು ಸೆರೆಹಿಡಿದಿದೆ. ವಿಕ್ರಮ್ ಲ್ಯಾಂಡರ್‌ನ ಕೆಳಭಾಗದಲ್ಲಿ ಕ್ಯಾಮರ ಅಳವಡಿಸಲಾಗಿದೆ. ವಿಕ್ರಮ್ ತನಗಾಗಿ ಸರಿಯಾದ ಮತ್ತು ಸಮತಟ್ಟಾದ ಲ್ಯಾಂಡಿAಗ್ ಸ್ಥಳವನ್ನು ಕಂಡು ಕೊಳ್ಳಲು ಇದನ್ನು ಸ್ಥಾಪಿಸಲಾಗಿದೆ. ಈ ಕ್ಯಾಮೆರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಯಾವುದೇ ಉಬ್ಬು ಪ್ರದೇಶಕ್ಕೆ ಇಳಿಯುತ್ತಿಲ್ಲ ಎಂಬುದನ್ನು ನೋಡಬಹುದು. ಲ್ಯಾಂಡಿAಗ್‌ಗೂ ಮೊದಲು ಈ ಕ್ಯಾಮೆರಾವನ್ನು ಮತ್ತೆ ಆನ್ ಮಾಡಬಹುದು. ಏಕೆಂದರೆ ಈಗ ಬಂದಿರುವ ಚಿತ್ರವನ್ನು ನೋಡಿದರೆ ಈ ಕ್ಯಾಮೆರಾವನ್ನು ಪ್ರಯೋಗಕ್ಕಾಗಿ ಆನ್ ಮಾಡಲಾಗಿದೆ ಎಂದು ತೋರುತ್ತದೆ. ಇದರಿಂದ ಅದು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಚಿತ್ರಗಳು ಅಥವಾ ವೀಡಿಯೋಗಳಿಂದ ತಿಳಿಯಬಹುದು. ಈ ಸಂವೇದಕವನ್ನು ಚಂದ್ರಯಾನ-೨ ರಲ್ಲೂ ಬಳಸಲಾಗಿತ್ತು.
ಸುಧಾಮ್ ದಾಸ್ ನೇಮಕಕ್ಕೆ ಸಚಿವರ ಆಕ್ಷೇಪ
ನವದೆಹಲಿ, ಆ. ೧೮: ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸುಧಾಮ್ ದಾಸ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರದ ನಾಲ್ವರು ಹಿರಿಯ ಸಚಿವರು ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಸುಧಾಮ್ ದಾಸ್ ಹೆಸರನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಮಾಜಿ ಸಚಿವರಾದ ಉಮಾಶ್ರೀ, ಎಂ.ಆರ್. ಸೀತಾರಾಂ ಮತ್ತು ಸುಧಾಮ್ ದಾಸ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಒಪ್ಪಿಗೆ ನೀಡಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಯಾಗಿದ್ದ ಸುಧಾಮ್ ದಾಸ್ ಮಾರ್ಚ್ನಲ್ಲಿ ಮಾಹಿತಿ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅವರ ಹೆಸರನ್ನು ಮೇಲ್ಮನೆಗೆ ಪರಿಗಣಿಸುವುದಕ್ಕೆ ನಮ್ಮ ಬಲವಾದ ಆಕ್ಷೇಪವಿದೆ ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಸದ್ಯಕ್ಕಿಲ್ಲ
ಬೆಂಗಳೂರು, ಆ. ೧೮: ಹೊಸ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಸದ್ಯಕ್ಕೆ ಅನುಮತಿ ನೀಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಶುಕ್ರವಾರ ಹೇಳಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಹಾರ ಸಚಿವರು, ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ನಾವೇ ಓಪನ್ ಮಾಡಿಲ್ಲ. ಅದಕ್ಕೆ ಕಾರಣ ಏನು ಅಂತಾ ಸದ್ಯದಲ್ಲೇ ಹೇಳುತ್ತೇನೆ. ಇನ್ನೂ ಒಂದಿಷ್ಟು ದಿನ ಎಪಿಎಲ್, ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದರು. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಹೊಸ ಕಾರ್ಡುಗಳಿಗೆ ಅನುಮತಿ ನೀಡದಿರುವ ಇಲಾಖೆಯ ನಿರ್ಧಾರ ಹಲವರಿಗೆ ನಿರಾಸೆ ತಂದಿದೆ.
ಪಿತ್ರಾರ್ಜಿತ ಆಸ್ತಿ : ತೀರ್ಪು ಕಾಯ್ದಿರಿಸಿದ ಸುಪ್ರೀಂ
ನವದೆಹಲಿ, ಆ. ೧೮: ಮದುವೆಗೂ ಮುನ್ನ ಜೋಡಿಗೆ ಜನಿಸಿದ ಮಕ್ಕಳಿಗೆ ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಪಿತ್ರಾರ್ಜಿತ ಆಸ್ತಿ ಹಕ್ಕು ಕುರಿತ ಅರ್ಜಿಗೆ ಸಂಬAಧಿಸಿದ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ ಕಾಯ್ದಿರಿಸಿತು. ಅರ್ಜಿಗೆ ಸಂಬAಧಿಸಿ ಹಲವು ವಕೀಲರು ಮಂಡಿಸಿದ ವಾದಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ಟೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಆಲಿಸಿತು. ವಿವಾಹವಾಗುವುದಕ್ಕೂ ಮುನ್ನ ಜೋಡಿಗೆ ಜನಿಸಿದ ಮಕ್ಕಳು ಹಿಂದೂ ವಿವಾಹ ಕಾಯ್ದೆ ಸೆಕ್ಷನ್ ೧೬(೩)ರಡಿ ಪಾಲಕರ ಸ್ವಯಾರ್ಜಿತ ಆಸ್ತಿ ಮೇಲಷ್ಟೆ ಹಕ್ಕು ಹೊಂದಿದ್ದಾರೆಯೇ ಎಂಬ ಬಗ್ಗೆಯೂ ನ್ಯಾಯಪೀಠ ನಿರ್ಧಾರ ಪ್ರಕಟಿಸಲಿದೆ. ಈ ವಿಷಯ ಕುರಿತ ಅರ್ಜಿ ೨೦೧೧ರಿಂದ ಬಾಕಿ ಉಳಿದಿದೆ. ವಿಚಾರಣೆ ನಡೆಸಿದ್ದ ಇಬ್ಬರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ, ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿ ೨೦೧೧ರ ಮಾರ್ಚ್ ೩೧ ರಂದು ಆದೇಶಿಸಿತ್ತು.
ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧವಿರಿ:ಮೋದಿ
ಗಾಂಧಿನಗರ, ಆ. ೧೮: ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ನವೀನ ಅವಿಷ್ಕಾರಗಳು ಹಾಗೂ ತಂತ್ರಜ್ಞಾನದ ಸಮಾನ ಲಭ್ಯತೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಿ ೨೦ ಶೃಂಗದ ಸದಸ್ಯ ರಾಷ್ಟçಗಳಿಗೆ ಕರೆ ನೀಡಿದರು. ಇಲ್ಲಿ ನಡೆದ ಜಿ ೨೦ ಸದಸ್ಯ ರಾಷ್ಟçಗಳ ಆರೋಗ್ಯ ಸಚಿವರ ಸಭೆ ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಮುಂದಿನ ಆರೋಗ್ಯ ತುರ್ತು ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಸರ್ವರೂ ಸಜ್ಜಾಗಿರಬೇಕು ಎಂದು ಅಭಿಪ್ರಾಯಪಟ್ಟರು. ಡಿಜಿಟಲ್ ಪರಿಹಾರ ಕ್ರಮಗಳು, ನವೀನ ಅನ್ವೇಷಣೆಗಳು ನಮ್ಮ ಪ್ರಯತ್ನಗಳು ಸಮಾನವಾಗಿ ತಲುಪಲು, ಸೇರ್ಪಡೆಯುಕ್ತ ಕ್ರಮದಲ್ಲಿ ಜಾರಿಗೊಳಿಸಲು ಅನುಕೂಲಕರ. ತಂತ್ರಜ್ಞಾನದ ನೆರವು ಎಲ್ಲರಿಗೂ ತಲುಪುವಂತಹ ವ್ಯವಸ್ಥೆ ರೂಪಿಸೋಣ. ಇದು, ಜಾಗತಿಕ ಅರೋಗ್ಯ ರಕ್ಷಣೆ ಗುರಿಯತ್ತ ನಮ್ಮನ್ನು ಕರೆದೊಯ್ಯುತ್ತದೆ ಎಂದರು.