ವರ ಐನ್‌ಮನೆಯ ಮೆಟ್ಟಿಲು ಇಳಿದ ನಂತರ ಪೋಷಕರು, ಕುಟುಂಬದವರು ಹಾಗೂ ತನ್ನ ಅರುವನೊಂದಿಗೆ (ಅರುವ ಎಂದರೆ ಆ ಕುಟುಂಬದ ಯೋಗಕ್ಷೇಮ ಹಾಗೂ ಜವಾಬ್ದಾರಿಯನ್ನು ಹೊತ್ತಿರುವ ಮತ್ತೊಂದು ಕುಟುಂಬದ ಪ್ರಮುಖ) ಹೆಣ್ಣಿನ ಮನೆಗೆ ತೆರಳುತ್ತಾನೆ.

ಹೆಣ್ಣಿನ ಮನೆಯಲ್ಲಿ ವಿವಾಹ:

ಸಾಮಾನ್ಯವಾಗಿ ಕೊಡವರ ವಿವಾಹ ಗಂಡು ಹಾಗೂ ಹೆಣ್ಣಿನ ಬಲ್ಯಮನೆ ಗಳಲ್ಲಿ ಪ್ರತ್ಯೇಕವಾಗಿ ನಡೆಯುತ್ತದೆ. ನಂತರ ಗಂಡು ಮೆರವಣಿಗೆಯಲ್ಲಿ ಹೆಣ್ಣಿನ ಮನೆಗೆ ತೆರಳಿ ಹೆಣ್ಣನ್ನು ತನ್ನ ಮನೆಗೆ ಕರೆ ತರುತ್ತಾನೆ. ಕುತ್ತಿಕ್ ನಿಪ್ಪೊ ಪದ್ಧತಿ ವಿಭಿನ್ನವಾಗಿದ್ದು, ಇಲ್ಲಿ ಗಂಡಿನ ಮನೆಯಲ್ಲಿ ವಿವಾಹ ಸಮಾರಂಭ ನಡೆಯದೆ ಹೆಣ್ಣಿನ ಮನೆಯಲ್ಲಿ ಜರುಗುತ್ತದೆ. ಒಂದೇ ಮುಹೂರ್ತದಲ್ಲಿ ವಿವಾಹವಾಗುತ್ತದೆ. ಈ ಕಾರ್ಯಕ್ರಮಕ್ಕೆ ಗಂಡಿನ ಮನೆಯವರೂ ಹೆಣ್ಣಿನ ಮನೆಗೆ ಆಗಮಿಸುತ್ತಾರೆ. ಗಂಡಿನ ಅರುವ ಇರಲೇ ಬೇಕು. ದಂಪತಿ ಮುಹೂರ್ತ ಮುಗಿದ ನಂತರ ಗಂಡು ಹೆಣ್ಣಿನ ಕೈ ಹಿಡಿದು ಮುಹೂರ್ತದಿಂದ ಎಬ್ಬಿಸುತ್ತಾನೆ. ನಂತರ ``ಸಮ್ಮಂಧ ಅಡಕುವೊ’’ ಕಾರ್ಯಕ್ರಮ ಇತರ ವಿವಾಹದಂತೆ ನಡೆದರೂ ಹೇಳುವ ರೀತಿ ಅಥವಾ ಸಮ್ಮಂಧ ಕೊಡುವ ರೀತಿ ವಿಭಿನ್ನವಾಗಿರುತ್ತದೆ. ಗಂಡಿಗೆ ಹೆಣ್ಣಿನ ಮನೆಯಲ್ಲಿ ಹಕ್ಕು ನೀಡುವುದು ಹಾಗೂ ಗಂಡು ಹೆಣ್ಣಿನ ಕುಟುಂಬದ ಭಾಗವಾಗುವುದು ಇದರ ವಿಶೇಷ.

ಸಮ್ಮಂಧ ಪರಚೆ: ಕೊಡವರ ವಿವಾಹದ ವಿಶೇಷವೇನೆಂದರೆ ಅವರು ಹೆಣ್ಣಿಗೆ ತಾಳಿ ಕಟ್ಟುವುದಿಲ್ಲ. ತಾಯಿ ಮಗಳಿಗೆ ಹಾಗೂ ಮಗನಿಗೆ ಮಾಲೆ ಹಾಕುವ ಶಾಸ್ತçವಿದೆ. ಅವರಲ್ಲಿರುವ ``ಸಮ್ಮಂಧ ಪರಚೆ’’ ಎನ್ನುವುದೇ ವಿವಾಹಕ್ಕೆ ಸಾಕ್ಷಿ. ನೆಲ್ಲಕ್ಕಿ ನಡುಬಾಡೆಯಲ್ಲಿ ನಿಂತು ಕಾರೊಣನ (ಕುಟುಂಬದ ಮೂಲ ಪುರುಷ) ಆತ್ಮ ಸಾಕ್ಷಿಯಾಗಿ ಈ ಒಪ್ಪಂದ ನಡೆಯುತ್ತದೆ. ಕಾರೊಣ ನೆಲೆಯಲ್ಲಿ ನಿಂತು ಅವರು ಹೇಳುವ ಮಾತೇ ಅಂತಿಮ. ಅದೇ ಅಲಿಖಿತ ಒಪ್ಪಂದ ಹಾಗೂ ಶಾಸನ. ನೆಲ್ಲಕ್ಕಿ ದೀಪದ ಮುಂದೆ ಅವರು ಹೇಳುವ ಒಂದೊAದು ಮಾತು ಕೂಡ ಆತ್ಮಸಾಕ್ಷಿಯಾಗಿರುತ್ತದೆ. ಅದನ್ನು ಯಾವುದೇ ಕಾಲಕ್ಕೂ ಮೀರುವಂತಿಲ್ಲ. ಕೊಡವರಲ್ಲಿ ವಿವಾಹದ ಬರಹದ ದಾಖಲೆ, ಸಹಿ ಇರುವುದಿಲ್ಲ. ಸಮ್ಮಂಧ ಪರಚೆ ಎನ್ನುವುದೇ ಅವರ ಅಳಿಸಲಾಗದ ಕಾನೂನು. ಈ ಕಾರಣಕ್ಕೆ `ಸಮ್ಮಂಧ ಪರಚೆ’ ಇಲ್ಲವೇ `ಸಮ್ಮಂಧ ಅಡಕುವೊ’ ಎನ್ನುವುದು ವಿವಾಹದ ಪ್ರಮುಖ ಘಟ್ಟ. ಒಕ್ಕ ಪರಚೆಯಲ್ಲಿ ಎರಡೂ ಕಡೆಯ ಅರುವ (ಮುಖ್ಯಸ್ಥ) ನೆಲ್ಲಕ್ಕಿಯಲ್ಲಿ ನಿಂತು ವಧು-ವರರ ಮುಂದೆ ಈ ರೀತಿ ಹೇಳುತ್ತಾರೆ. (ಪಟ್ಟೋಲೆ ಪಳಮೆಯಲ್ಲಿ ದಾಖಲಿಸಿದಂತೆ)

ಹೆಣ್ಣಿನ ಅರುವ: ದಂಡ್‌ಕಡೆ ನಾಡೋನೂ, ಇಲ್ಲವನೂ ಬೆಂದೂ, ಅಂಗನೂ ಅರುವನೂ ಸಾಲ್‌ಕೆಟ್ಟಿ ನಿಂದಿರಾ ? (ಎರಡೂ ಕಡೆಯ ಸಂಬAಧಿಕರು, ಪ್ರಮುಖರು, ಅರುವರು ಸಾಲಿನಲ್ಲಿ ನಿಂತಿದ್ದೀರಾ ?)

ಗಂಡಿನ ಅರುವ : ನಿಂದತ್ (ನಿಂತಿದ್ದೇವೆ)

ಹೆಣ್ಣಿನ ಅರುವ: ಪಟ್ಟಮಾಡ ಒಕ್ಕಡ ಸೋಮಕ್ಕಂದೆಣ್ಣುವ ಕುಂಞÂನ ನಡಿಕೇರಿಯಂಡ ಒಕ್ಕಡ ಅಪ್ಪಯ್ಯ ಎಂದೆಣ್ಣುವ ಕುಂಞÂರ ಬಾಳ್ ಬಾಕೆ ಕೂಡುವಲ್ಲಿ ಈ ಒಕ್ಕಡ ಮನಸ್ಥಾನತ್ ಆಣಾಯಿತ್ ಪರಂದದ್ ಇಂದ್ ಇಲ್ಲತಾನಂಗುAಡ್, ಅಪ್ಪಯ್ಯ ಎಂದೆಣ್ಣುವ ಕುಂಞÂನ ಈ ಒಕ್ಕಕ್ ಮೊರಡಾಯಿತ್ ನಿಪ್ಪ್ಚಿಟ್ಟಲುವಾ ? (ಪಟ್ಟಮಾಡ ಒಕ್ಕದ ಸೋಮಕ್ಕ ಎನ್ನುವ ಯುವತಿಗೆ ನಡಿಕೇರಿಯಂಡ ಒಕ್ಕದ ಅಪ್ಪಯ್ಯ ಎನ್ನುವ ಯುವಕನ ವಿವಾಹ ವಾಗಿದೆ. ಈ ಒಕ್ಕದ ಮಣ್ಣು ಮನೆ ಸ್ಥಾನದಲ್ಲಿ ಪುರುಷರು ಯಾರೂ ಇಲ್ಲ ದಾಗಿರುವ ಹಿನ್ನೆಲೆಯಲ್ಲಿ ಅಪ್ಪಯ್ಯ ಎನ್ನುವ ಯುವಕನನ್ನು ಈ ಒಕ್ಕದ ಮೂಲವಾಗಿ (ಬುಡವಾಗಿ) ನಿಲ್ಲಿಸಬಹುದಾ ?)

ಗಂಡಿನ ಅರುವ: ಕ್Ãನಾಳ್ ಮರಿಯಾದಿ ಪ್ರಕಾರ. ಆನಕ ನಡಿಕೇರಿಯಂಡ ಒಕ್ಕಡ ಅಪ್ಪಯ್ಯಂದೆಣ್ಣುವ ಕುಂಞÂ ಈ ಪಟ್ಟಮಾಡ ಒಕ್ಕಡ ಮೊರಡಾಯಿತ್ ನಿಪ್ಪಾನಗುಂಡ್ ಈ ಒಕ್ಕಡ ಆಯಿರ ಬಟ್ಟಿಭೂಮಿ, ಪತ್ತ್ಕಂಡ ಬಾಣೆ, ಅಂಜಿಕAಡ ಓಡೆ, ಮನೆ, ಮನೆ ಬಳಪ್, ತೋಟ, ಪತ್ತ್ಕುಡಿ ಆಳ್, ಪತ್ತ್ ಕೂಟಕ್ ಎತ್ತ್, ಪತ್ತ್ ಕರ್‌ಪಕ್, ಪಾಕರಪಕುತ್ತಿ, ಚೋಮ ಕೂಡುವಕೊಟ್ಟ್, ಆಕ, ಆಕಡೇರಿ, ಕುಂಡಿತೆರೆ, ಒಕ್ಕಿ ಪೋನ ಮಣ್ಣ್, ಕೂಡಿ ಪೋನ ಯಾಕ, ಓಡಿ ಪೋನ ಆಳ್, ಮದ್‌ಚಿ ಪೋನ ಚೋಮ, ತಾತಿಕೆತ್ತುವ ಕತ್ತಿ, ನೇತಿಕೆತ್ತುವ ಮತ್ತ್, ಪತ್ತಾಯತ್ ನೆಲ್ಲ್, ನೆಲ್ಲಳಪ ಪಾನಿ, ಅಕ್ಕಿ ಅಳಪ ಸೇರ್, ತಾಕ್‌ನ ತಳಿಯ ತೂಕ್‌ನ ಬೊಳ್‌ಚ, ಪೊಟ್ಟಿಲ್‌ಉಪ್ಪ್, ಒಲೆಕಟ್ಟ್ ಪೂತ್ ಬೆಚ್ಚ ಚೆಪ್ಪ್, ನೂಲ್, ನೂಕರೆಕಂಡ, ಚೂದ್‌ಕ್ ಇರ್‌ಂಬ್, ಚುಂಡೆಕ್ ಮೊದಲ್, ಒಂದ್‌ತೊಟ್ಟ್ ನೂರೋಳ ಸಮ್ಮಂಧ ಕೊಡ್‌ತಿರಾ ? (ಪದ್ಧತಿಯಂತೆ ಮುಂದುವರಿಯಬಹುದು. ನಡಿಕೇರಿಯಂಡ ಒಕ್ಕದ ಅಪ್ಪಯ್ಯ ಎನ್ನುವ ಯುವಕ ಪಟ್ಟಮಾಡ ಒಕ್ಕದ ಮೂಲವಾಗಿ ನಿಲ್ಲುವುದರಿಂದÀ ಆ ಒಕ್ಕದ ಸಾವಿರ ಬಟ್ಟಿ ಭೂಮಿ, ಹತ್ತುಕಂಡಿ ಬಾಣೆ, ಐದುಕಂಡಿ ಓಡೆ, ಮನೆ, ಮನೆಯ ಪಕ್ಕದ ತೋಟ, ಹತ್ತು ಕುಡಿ ಕಾರ್ಮಿಕರು, ಹತ್ತು ಜೊತೆ ಎತ್ತು, ಹಾಲು ಕರೆಯುವ ಹಸು, ಹಾಲು ಕರೆಯುವ ಕುತ್ತಿ, ದನದ ಕೊಟ್ಟಿಗೆ, ಜಮೀನು, ಜಮೀನಿನ ಏರಿ, ಹರಿದು ಹೋದ ಮಣ್ಣು, ಸೇರಿ ಹೋಗಿರುವ ಜಮೀನು, ಓಡಿ ಹೋಗಿರುವ ಆಳು, ತಪ್ಪಿಸಿಕೊಂಡಿರುವ ದನ, ಕತ್ತಿ, ಕೊಡಲಿ, ಪತ್ತಾಯ ದಲ್ಲಿರುವ ಬತ್ತ, ಬತ್ತ ಅಳೆಯುವ ಪಾನಿ, ಅಕ್ಕಿ ಅಳೆಯುವ ಸೇರು, ಬಟ್ಟಲು, ಊಟದ ತಟ್ಟೆ, ಉಪ್ಪು, ಹೂತಿಟ್ಟ ನಿಧಿ, ನೂಲು, ಸೂಜಿ ಸೇರಿದಂತೆ ಎಲ್ಲಾ ಹಕ್ಕು ನೀಡಿದ್ದೀರಾ?)

ಹೆಣ್ಣಿನ ಅರುವ : ಕೊಡ್‌ತತ್ (ಕೊಟ್ಟಿದ್ದೇವೆ)

ಗಂಡಿನ ಅರುವ : ಇಲ್ಲಿತನಕ ನಡಿಕೇರಿಯಂಡ ಒಕ್ಕದ ಅಪ್ಪಯ್ಯ ಈ ಕ್ಷಣ ದಿಂದ ಪಟ್ಟಮಾಡ ಒಕ್ಕದ ಅಪ್ಪಯ್ಯ ಎಂಬ ಹೆಸರಿನಿಂದ ಕರೆಯಬಹುದಾ ? (ಇಲ್ಲಿಯವರೆಗೆ ನಡಿಕೇರಿಯಂಡ ಒಕ್ಕದ ಅಪ್ಪಯ್ಯನಾಗಿದ್ದವನನ್ನು ಈ ಕ್ಷಣದಿಂದ ಪಟ್ಟಮಾಡ ಒಕ್ಕದ ಅಪ್ಪಯ್ಯ ಎಂದು ಕರೆಯ ಬಹುದಾ?”)

ಹೆಣ್ಣಿನ ಅರುವ: ಕ್Ãನಾಳ್ ಪ್ರಕಾರ (ಒಪ್ಪಂದದAತೆ)

ಗAಡಿನ ಅರುವ : ಇದರಿ ಪನ್ನೆರಂಡ್ ಅಚ್ಚ್ರ ಪೊನ್ನ್. (ಹನ್ನೆರಡು ಕಲ್ಲು ಹರಳುಗಳನ್ನು ಕೊಡಬೇಕು)

ಹೆಣ್ಣಿನ ಅರುವ: ಬಾತ್. ಇದರಿ ನಂಗಡ ಸಾಕ್ಷಿ ಪಣ (ಬಂತು, ತೆಗೆದುಕೊಳ್ಳಿ ನಮ್ಮ ಸಾಕ್ಷಿ ಹಣ)

ಗಂಡಿನ ಅರುವ: ಬಾತ್ (ಬಂತು)

(ಮುಂದುವರಿಯುವುದು)

-ಐತಿಚಂಡ ರಮೇಶ್ ಉತ್ತಪ್ಪ, ಮೈಸೂರು

iu.ಡಿಚಿmesh@gmಚಿiಟ.ಛಿom