ಸುಂಟಿಕೊಪ್ಪ, ಆ. ೧೬: ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪಿ.ಆರ್. ಸುನಿಲ್‌ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಶಿವಮ್ಮ ಮಹೇಶ್ ಅಧಿಕಾರ ವಹಿಸಿಕೊಂಡರು. ಸುಂಟಿಕೊಪ್ಪ ಗ್ರಾಮ ೨ನೇ ಅವಧಿ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಮತದಾನದಲ್ಲಿ ಆಯ್ಕೆಗೊಂಡ ಪಿ.ಆರ್. ಸುನಿಲ್ ಕುಮಾರ್ ಅವರಿಗೆ ಮಾಜಿ ಅಧ್ಯಕ್ಷೆ ಶಿವಮ್ಮ ಮಹೇಶ್ ಅವರು ಪಂಚಾಯಿತಿ ಕಾನೂನು ಪುಸ್ತಕವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಶಿವಮ್ಮ ಮಹೇಶ್ ಅವರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಬಿ.ಎಂ. ಸುರೇಶ್, ಮಂಜುನಾಥ್, ರಫೀಕ್‌ಖಾನ್, ಸೋಮನಾಥ್, ವಸಂತಿ, ಶಾಂತಿ, ಗೀತಾ, ಮಂಜುಳ, ರೇಷ್ಮ, ಮಾಜಿ ಸದಸ್ಯ ಪಿ.ಆರ್. ಸುಕುಮಾರ್, ಕೆ.ಇ. ಕರೀಂ, ರಹೆನಾ ಸುಲ್ತಾನ್, ಬಿಜೆಪಿ ಪಕ್ಷದ ಹಿರಿಯ ಮುಖಂಡ ವೈ.ಎಂ. ಕರುಂಬಯ್ಯ, ಸುಂಟಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಡಿ.ನರಸಿಂಹ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಪಂಚಾಯಿತಿ ಸಿಬ್ಬಂದಿಗಳು, ಪೌರಕಾರ್ಮಿಕರು ಇದ್ದರು.