ಮಡಿಕೇರಿ, ಆ. ೧೬: ನಗರದ ಕೋಟೆ ಮಹಾ ಗಣಪತಿ ದಸರಾ ಮಂಟಪ ಸಮಿತಿಯ ಪದಾಧಿ ಕಾರಿಗಳು ನಗರದ ಬಡಾವಣೆ ಯೊಂದರಲ್ಲಿ ಶ್ರಮದಾನ ಮಾಡಿದರು. ನಗರದ ಮಹದೇವಪೇಟೆಯ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಬಡಾವಣೆಯ ಒಂದನೇ ಮತ್ತು ಮೂರನೇ ಹಂತದ ವಾಸ ಸ್ಥಳ ಕಲುಷಿತವಾಗಿ ಇಲ್ಲಿನ ನಿವಾಸಿಗಳು ಅನಾರೋಗ್ಯದ ಭೀತಿಯಿಂದ ಸೊರಗುವಂತಾಗಿತ್ತು. ಇದನ್ನು ಗಮನಿಸಿದ ಕೋಟೆ ಗಣಪತಿ ದಸರಾ ಸಮಿತಿಯ ಪದಾಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಸ್ವಚ್ಛತಾ ಕಾರ್ಯ ನಡೆಸಿ ಬಡಾವಣೆಯ ಆವರಣವನ್ನು ಶುಭ್ರಗೊಳಿಸಿದ್ದಾರೆ.
ಕೋಟೆ ಗಣಪತಿ ದಸರಾ ಸಮಿತಿಯ ಅಧ್ಯಕ್ಷ ಹೆಚ್.ಪಿ. ಲೋಕೇಶ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳಾದ ಸುದೀಶ್, ನಜೀರ್, ಮೆಲ್ವಿನ್, ಯಾಮಿನ್, ಇಬ್ರಾಹಿಂ, ಸುಲ್ತಾನ್, ಜಲೀಲ್, ದೀಕ್ಷಿತ್, ಚಂದ್ರು, ವಿನಾಯಕ, ಸೂರಜ್, ಸುಮೇಶ್, ವಿಶ್ವನಾಥ, ಬಿ.ಪಿ. ಗುರುಕಿರಣ್ ಹಾಗೂ ತಂಡ ೯೯ ಈ ಶ್ರಮದಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.