ವೀರಾಜಪೇಟೆ, ಆ. ೧೬: ವೀರಾಜಪೇಟೆಯ ಮಲೆಮಹದೇಶ್ವರ ಬೆಟ್ಟದಲ್ಲಿನ ಶ್ರೀ ಶನೀಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಶನೀಶ್ವರ ದೇವಸ್ಥಾನದ ವಾರ್ಷಿಕ ಶ್ರಾವಣ ಮಹೋತ್ಸವವನ್ನು ಈ ವರ್ಷವೂ ಆ.೧೯ ರಿಂದ ಸೆ.೯ ವರೆಗೆ ಸಕಲ ಪೂಜ ವಿಧಿ ವಿಧಾನಗಳೊಂದಿಗೆ ಆಚರಿಸಲಾಗುವುದು ಎಂದು ಸೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರಾವಣ ಪೂಜೋತ್ಸವದ ನಿಮಿತ್ತ ಆ.೧೮ ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ ನಡೆಯಲಿದ್ದು ಪ್ರತಿ ಶನಿವಾರ ಬೆಳಿಗ್ಗೆ ೬ ಗಂಟೆಗೆ ಅಭಿಷೇಕ, ೭ ಗಂಟೆಗೆ ಅಲಂಕಾರ ೮. ಗಂಟೆಗೆ ನವಗ್ರಹ ಪೂಜೆ, ೧೧.೦೦ ಗಂಟೆಗೆ ದೇವರ ದರ್ಶನ, ಮಧ್ಯಾಹ್ನ ೧೨ ಗಂಟೆಗೆ ಮಹಾ ಪೂಜೆ, ಮಧ್ಯಾಹ್ನ ೧ ಗಂಟೆಗೆ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ, ಪ್ರತಿ ಶುಕ್ರವಾರ ಸಂಜೆ ೭.೩೦ ಗಂಟೆಗೆ ಶ್ರೀ ದುರ್ಗಾದೇವಿ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಸಲಾಗುತ್ತದೆ.