ಶನಿವಾರಸAತೆ, ಆ. ೧೬ : ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಳತ್ತೂರು ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಿಂಡು ಕಂಡುಬAದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ತಿಳಿಸಿದ್ದಾರೆ.
ಕಾಡಾನೆಗಳು ನೆರೆಯ ಸಕಲೇಶಪುರ ತಾಲೂಕಿನ ಯಸಳೂರು ಅರಣ್ಯದಿಂದ ಬಂದಿದ್ದು ಗ್ರಾಮಸ್ಥರು ಬೆಳಗ್ಗಿನ ಜಾವ ಹಾಗೂ ರಾತ್ರಿ ಹೊತ್ತು ತಿರುಗಾಡುವಾಗ ಜಾಗರೂಕರಾಗಿ ಇರಬೇಕು. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಚಲನ-ವಲನ ಗಮನಿಸುತ್ತಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವುದಾಗಿಯೂ ಅಧಿಕಾರಿ ಹೇಳಿಕೆ ನೀಡಿರುತ್ತಾರೆ,
ದೊಡ್ಡಕೊಳತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ತೋಟಗಳಿಗೆ ನುಗ್ಗಿದ ಆನೆಗಳು ಬಾಳೆ, ಕಾಫಿ, ಮೆಣಸು ಇತರ ಬೆಳೆಗಳನ್ನು ಎಳೆದು ಹಾಕಿ, ತುಳಿದು ನಾಶಪಡಿಸಿವೆ. ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.