ನಾಪೋಕ್ಲು, ಆ. ೧೬: ಸಮೀಪದ ಕಕ್ಕಬ್ಬೆ ನಾಲಡಿ ಗ್ರಾಮದ ಪಾಡಿ ಇಗ್ಗುತ್ತಪ್ಪ ದೇವಾಲಯದ ಬಳಿ ಆನೆಯೊಂದು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರ ಕಾಲು ಮುರಿತಕ್ಕೊಳಗಾಗಿದೆ.
ಕಕ್ಕಬೆಯ ಕಂಬೆಯAಡ ಅನು ಸುಬ್ಬಯ್ಯ (೫೦) ಸಂಜೆ ಸುಮಾರು ಆರು ಗಂಟೆ ಸಮಯದಲ್ಲಿ ತಮ್ಮ ಮನೆಗೆ ತೆರಳುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದ್ದು, ದಿಢೀರ್ ದಾಳಿಯಿಂದ ಸುಬ್ಬಯ್ಯ ಅವರ ಕಾಲು ಮುರಿದಿದೆ. ವಿಷಯ ತಿಳಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಮತ್ತು ಬಾಚಮಂಡ ಲವ ತಮ್ಮ ವಾಹನದಲ್ಲಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
-ದುಗ್ಗಳ