ಸಿದ್ದಾಪುರ, ಆ. ೧೬: ಅರೆಕಾಡು ಗ್ರಾಮದಲ್ಲಿ ಉಪಟಳ ನೀಡುತ್ತಿರುವ ಹಾಗೂ ಮಾನವನ ಮೇಲೆ ದಾಳಿ ನಡೆಸುತ್ತಿರುವ ಒಂಟಿ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಇತ್ತೀಚೆಗೆ ಕಟ್ಟೆಮಾಡು ಪರಂಬು ನಿವಾಸಿಯಾಗಿದ್ದ ದೇವಪ್ಪ ಎಂಬವರು ಗದ್ದೆ ಉಳುಮೆ ಮಾಡಿ ಅರೆಕಾಡು ಗ್ರಾಮದ ನೇತಾಜಿನಗರದ ಸಮೀಪದಲ್ಲಿ ಟ್ರಾö್ಯಕ್ಟರ್‌ನಲ್ಲಿ ಬರುತ್ತಿರುವ ಸಂದರ್ಭದಲ್ಲಿ ಒಂಟಿ ಸಲಗವೊಂದು ದಾಳಿ ನಡೆಸಿ ದಂತದಿAದ ಎದೆಗೆ ತಿವಿದು ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಉಪಟಳ ನೀಡಿ ಮಾನವನ ಹತ್ಯೆ ಮಾಡಿದ ಸಲಗವನ್ನು ಸೆರೆ ಹಿಡಿಯುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜುರವರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರದAದು ಅರೆಕಾಡು ಗ್ರಾಮದಲ್ಲಿ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಸಾಕಾನೆಗಳ ನೆರವಿನಿಂದ ಸಲಗವೊಂದನ್ನು ಸೆರೆಹಿಡಿದಿದ್ದರು. ನಂತರ ದುಬಾರೆ ಸಾಕಾನೆ ಶಿಬಿರಕ್ಕೆ ಲಾರಿಯಲ್ಲಿ ಸಾಗಾಟ ಮಾಡಲು ಮುಂದಾದರು. ಅಷ್ಟರಲ್ಲಿ ಗ್ರಾಮಸ್ಥರು ಸೇರಿ ದೇವಪ್ಪನವರನ್ನು ಹತ್ಯೆ ಮಾಡಿದ ಸಲಗ ಇದು ಅಲ್ಲ ಎಂದು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಹಾಗೂ ಅರೆಕಾಡುವಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಒಂಟಿಸಲಗವನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಚಿವರು ಅರಣ್ಯ ಇಲಾಖಾಧಿಕಾರಿಗಳ ಬಳಿ ಮತ್ತೆ ಕಾರ್ಯಾಚರಣೆ ನಡೆಸಿ ಸ್ಥಳೀಯರು ಗುರುತಿಸಿರುವ ಒಂಟಿ ಸಲಗವನ್ನು ಸೆರೆಹಿಡಿಯಲು ನಿರ್ದೇಶನ ನೀಡಿದರು.

ಈ ಹಿನ್ನೆಲೆಯಲ್ಲಿ ಅರೆಕಾಡು ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟದೊಳಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಮೂರು ತಂಡಗಳಾಗಿ ರಚನೆ ಮಾಡಿಕೊಂಡು ಕಾಫಿ ತೋಟದೊಳಗೆ ಸಲಗವನ್ನು ಹುಡುಕಿದರು. ಆದರೆ ಕಾಡಾನೆಗಳ ಹಿಂಡುಗಳು ಪತ್ತೆ ಆಗಿದ್ದು, ಒಂಟಿ ಸಲಗವು ಕಂಡುಬAದಿರುವುದಿಲ್ಲ ಎಂದು ತಿಳಿದುಬಂದಿದೆ. ಈಗಾಗಲೇ ಕಳೆದ ಕೆಲವು ದಿನಗಳಿಂದ ಕಾಡಾನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿಗಳು ದಣಿದಿರುತ್ತಾರೆ. ಮತ್ತೊಂದು ಸಲಗವನ್ನು ಖೆಡ್ಡಾಕ್ಕೆ ಬೀಳಿಸಲು ಸಜ್ಜಾಗಿದ್ದಾರೆ.

-ವಾಸು