ವೀರಾಜಪೇಟೆ, ಆ. ೧೪: ವೀರಾಜಪೇಟೆ ಹೊರವಲಯದ ಬಿಟ್ಟಂಗಾಲ ಬಳಿಯ ಪೆಗ್ಗರಿಕಾಡುವಿನಲ್ಲಿ ವಾಸವಾಗಿದ್ದ ರವಿ(೨೮) ಅವರು ತನ್ನ ವಾಹನದಲ್ಲಿ ಚಲಿಸುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ದಿವಂಗತ ಈಶ್ವರ ಅವರ ಪುತ್ರ ರವಿ ತನ್ನ ಸ್ವಂತ ಪಿಕ್ಅಪ್ ಜೀಪಿನಲ್ಲಿ ಎಂ.ಸ್ಯಾAಡ್ ತುಂಬಿಸಿಕೊAಡು ಬಂದು ಗ್ರಾಹಕರ ಮನೆಯಲ್ಲಿ ಇಳಿಸಿ ಹೊರಡುವಾಗ ಕೊಳತ್ತೋಡು ಬಳಿ ಎದೆ ನೋವು ಕಾಣಿಸಿಕೊಂಡಿದ್ದು ತನ್ನ ವಾಹನದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
(ಮೊದಲ ಪುಟದಿಂದ) ಡ್ರೆöÊವರ್ ವೃತ್ತಿ ನಿರ್ವಹಿಸುತ್ತಿದ್ದ ಇವರು ಮೂಲತಃ ಹೆಚ್ಡಿ ಕೋಟೆಯವರಾಗಿದ್ದು ಕೆಲಸದ ನಿಮಿತ್ತ ಕಂಡAಗಾಲದಲ್ಲಿ ವಾಸವಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ಪೆಗ್ಗರಿಕಾಡುವಿನಲ್ಲಿರುವ ತನ್ನ ಹೆಂಡತಿ ನಂದಿತಾ ಅವರ ಮನೆಯಲ್ಲಿ ನೆಲೆಸಿದ್ದರು. ಮೃತರಿಗೆ ಪತ್ನಿ ಹಾಗೂ ತಾಯಿ ಇದ್ದಾರೆ. ಮೃತರ ಅಂತ್ಯಕ್ರಿಯೆ ತಾ. ೧೫ ರಂದು (ಇಂದು) ಹೆಚ್ ಡಿ ಕೋಟೆಯಲ್ಲಿ ನಡೆಯಲಿದೆ.