ಗೋಣಿಕೊಪ್ಪಲು, ಆ. ೧೪: ಗೋಣಿ ಕೊಪ್ಪ ಸಮೀಪದ ಕೈಕೇರಿ ಬಳಿ ಕಾರು ಹಾಗೂ ಬೈಕಿನ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಅಮೀಶ (೨೩) ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟ ಯುವಕ ಗೋಣಿಕೊಪ್ಪಲುವಿನ ಎಂ.ಎA. ಲೇಔಟ್ ನಿವಾಸಿಯಾಗಿದ್ದಾನೆ.

ಸೋಮವಾರ ಮಧ್ಯಾಹ್ನದ ವೇಳೆ ವೀರಾಜಪೇಟೆಯಿಂದ ಗೋಣಿಕೊಪ್ಪಕ್ಕೆ ಆಗಮಿಸುತ್ತಿದ್ದ ಬೈಕ್ ಸವಾರ ಅಮೀಶ, ಕೈಕೇರಿ ಬಳಿ ತಲುಪುತ್ತಿದ್ದಂತೆಯೇ ಗೋಣಿಕೊಪ್ಪ ಕಡೆಯಿಂದ ವೀರಾಜಪೇಟೆಗೆ ತೆರಳುತ್ತಿದ್ದ ಓಮಿನಿ ವ್ಯಾನ್ ಬೈಕ್‌ಗೆ ಡಿಕ್ಕಿ ಪಡಿಸಿದೆ. ಈ ವೇಳೆ ತೀವ್ರ ರಕ್ತಸ್ರಾವಗೊಂಡ ಹಿನ್ನೆಲೆಯಲ್ಲಿ ಯುವಕ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದ ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಗಳು ಹಾಗೂ

(ಮೊದಲ ಪುಟದಿಂದ) ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹವನ್ನು ಗೋಣಿಕೊಪ್ಪ ಸರ್ಕಾರಿ ಶವಗಾರಕ್ಕೆ ತರಲಾಯಿತು. ಗೋಣಿಕೊಪ್ಪ ಹಾಗೂ ವೀರಾಜಪೇಟೆ ಮುಖ್ಯ ರಸ್ತೆಯು ಉತ್ತಮವಾಗಿದ್ದು ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಅತೀ ವೇಗವಾಗಿ ವಾಹನವನ್ನು ಚಲಾಯಿಸುತ್ತಿದ್ದಾರೆ. ಇದರಿಂದ ಮುಖ್ಯ ರಸ್ತೆಯಲ್ಲಿ ಆಗಿಂದ್ದಾಗಿಯೇ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.