ಮಡಿಕೇರಿ, ಆ. ೧೫: ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ರಾಣಿ ಮಾಚಯ್ಯ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.
ಕೌನ್ಸಿಲ್ ಉಪಾಧ್ಯಕ್ಷ ಗೊ.ರೊ. ಚನ್ನಬಸಪ್ಪ, ಶಣ್ಮುಕಪ್ಪ, ರಾಜ್ಯ ಮುಖ್ಯಸ್ಥ ಪಿ.ಜಿ.ಆರ್. ಸಿಂಧ್ಯಾ, ಸ್ಕೌಟ್ಸ್ ಕಮಿಷನರ್ ಎಂ.ಕೆ. ಖಾಲೀದ್, ಗೈಡ್ಸ್ ಕಮಿಷನರ್ ಗೀತಾ ಹಾಗೂ ಇತರರು ಉಪಸ್ಥಿತರಿದ್ದರು.
* ರಾಣಿ ಮಾಚಯ್ಯ ಅವರನ್ನು ಇತ್ತೀಚೆಗೆ ಎಸ್.ಎಂ.ಎಸ್. ವಿದ್ಯಾಲಯದಲ್ಲೂ ಸನ್ಮಾನಿಸಲಾಯಿತು. ಪ್ರಾಂಶುಪಾಲೆ ಕುಸುಂ ಟಿಟೊ, ಅಧ್ಯಾಪಕಿ ಮೈಥಿಲಿ, ಗೈಡ್ಸ್ ಸಿಬ್ಬಂದಿ ದಮಯಂತಿ ಹಾಗೂ ಇತರರು ಹಾಜರಿದ್ದರು.