ಮಡಿಕೇರಿ, ಆ. ೧೪: ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಏರ್‌ವೈಸ್ ಮಾರ್ಷಲ್ ಆರ್.ವಿ. ರಾಮಕಿಶೋರ್ ವಿ.ಎಸ್.ಎಂ. ಭೇಟಿ ನೀಡಿ ಜನರಲ್ ತಿಮ್ಮಯ್ಯ ಸಂಬAಧಿತ ಅಪೂರ್ವ ಮಾಹಿತಿಗಳ ಸಂಗ್ರಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನ ಹೆಬ್ಬಾಳದಲ್ಲಿರುವ ಸೇನಾ ತರಬೇತಿ ಕೇಂದ್ರದ ಮುಖ್ಯಸ್ಥರಾಗಿರುವ ಏರ್ ವೈಸ್ ಮಾರ್ಷಲ್ ರಾಮಕಿಶೋರ್ ವಿ.ಎಸ್.ಎಂ., ದೇಶದ ಹೆಮ್ಮೆಯ ಜನರಲ್ ತಿಮ್ಮಯ್ಯ ಅವರು ಭಾರತದ ಅಪ್ರತಿಮ ಸೇನಾನಾಯಕರಾಗಿ ವಿಜೃಂಭಿಸಿದ್ದು, ಇವರು ದೇಶದ ಪ್ರತೀ ಪ್ರಜೆಗೂ ಆದರ್ಶಪ್ರಾಯರಾಗಿದ್ದಾರೆ. ತಿಮ್ಮಯ್ಯ ನೆನಪಲ್ಲಿ ಯೋಧರ ಜಿಲ್ಲೆಯಾದ ಕೊಡಗಿನಲ್ಲಿ ಅಮೂಲ್ಯ ಸ್ಮಾರಕ ಭವನ ನಿರ್ಮಾಣವಾಗಿರುವುದು ಶ್ಲಾಘನೀಯ. ಇಲ್ಲಿನ ಭೇಟಿ ಸ್ಮರಣೀಯವಾಗಿದೆ ಎಂದರು.
ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಅವರು ಏರ್ ಮಾರ್ಷಲ್ ಅವರಿಗೆ ತಿಮ್ಮಯ್ಯ ಸೇನಾ ಜೀವನದ ಬಗ್ಗೆ ಮತ್ತು ಸ್ಮಾರಕ ಭವನ ಸಂಬAಧಿತ ಸಮಗ್ರ ಮಾಹಿತಿ ನೀಡಿದರು.