ಶನಿವಾರಸಂತೆ, ಆ. ೧೪ : ಸಮೀಪದ ಕೊಡ್ಲಿಪೇಟೆಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಬೃಹತ್ ಪಂಜಿನ ಮೆರವಣಿಗೆಗೆ ಪಟ್ಟಣದ ಮುನ್ಸಿಪಾಲಿಟಿ ಶ್ರೀಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಶ್ರೀಭಾರತಮಾತೆ ಚಿತ್ರಪಟಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಲಾಯಿತು.
ದೇವಾಲಯದಿಂದ ಪಂಜನ್ನು ಹಿಡಿದ ಸಾವಿರಾರು ಮಂದಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಯಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿ ಶ್ರೀ ಬಸವೇಶ್ವರ ಕಲ್ಯಾಣ ಮಂಟಪ ತಲುಪಿದರು. ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ, ಮನೆಗಳ ಮುಂದೆ ನಿಂತು ಮೆರವಣಿಗೆಯನ್ನು ನೋಡಿ ಕಣ್ತುಂಬಿಕೊAಡು ಸಂಭ್ರಮಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವರಳ್ಳಿ ಗ್ರಾಮದ ನಿವೃತ್ತ ಸೈನಿಕ ಜಗದೀಶ್ ಉದ್ಘಾಟಿಸಿದರು.
ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ದಿಕ್ಸೂಚಿ ಭಾಷಣ ಮಾಡಿ, ಹರಿದು ಹಂಚಿಹೋಗಿರುವ ಅಖಂಡ ಭಾರತವನ್ನು ಒಂದುಗೂಡಿಸುವ ಸಂಕಲ್ಪದಿAದ ಪಂಜಿನ ಮೆರವಣಿಗೆಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಆಗಸ್ಟ್ ೧೫ ರಂದು ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸುವಷ್ಟೇ ಆಗಸ್ಟ್ ೧೪ ರ ರಾತ್ರಿ ನಡೆದ ಘಟನೆಯನ್ನೂ ಸ್ಮರಿಸಿ ಆಚರಿಸಬೇಕು. ಸ್ವಾತಂತ್ರö್ಯದ ಹುಟ್ಟು ಹಬ್ಬದ ಜೊತೆಯಲ್ಲೇ ಹರಿದು ತುಂಡಾಗಿ ಹೋದ ಭೂಭಾಗವನ್ನು, ಸ್ವಾತಂತ್ರö್ಯಕ್ಕಾಗಿ ಹೋರಾಡಿ ಮಡಿದ ದೇಶ ನಾಯಕರ, ದೇಶಭಕ್ತರನ್ನೂ ಸ್ಮರಿಸಿಕೊಳ್ಳಬೇಕು. ಪ್ರತಿ ಭಾರತೀಯನು ತ್ರಿವರ್ಣ ಧ್ವಜದೊಂದಿಗೆ ಭಾವನಾತ್ಮಕ ಸಂಬAಧ ಹೊಂದಿರುವ ಹಾಗೆ ಅಖಂಡ ಭಾರತ ಸಂಕಲ್ಪ ದಿನಾಚರಣೆಯೂ ದೇಶಭಕ್ತಿಯನ್ನು ಜಾಗೃತಗೊಳಿಸುತ್ತದೆ ಎಂದರು.
ಹಿAದೂ ಜಾಗರಣಾ ವೇದಿಕೆ ಮುಖಂಡರಾದ ಕೆ.ಟಿ.ಶುಭಾಷ್, ಕುಮಾರ್, ಅನುಜ್, ಇತರರು ಉಪಸ್ಥಿತರಿದ್ದರು. ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗ್ರಾಮಗಳು, ಶನಿವಾರಸಂತೆ, ಹೆತ್ತೂರು, ಯಸಳೂರು, ಸಕಲೇಶಪುರ, ಹಾಸನ, ಕುಶಾಲನಗರ, ಸೋಮವಾರಪೇಟೆ ಎಲ್ಲೆಡೆಯಿಂದ ಬಂದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪಾಲ್ಗೊಂಡಿದ್ದರು.