ಸಿದ್ದಾಪುರ, ಆ. ೧೪: ಹಾಡಹಗಲಿ ನಲ್ಲೇ ಗ್ರಾಮಕ್ಕೆ ನುಗ್ಗಿ ಟ್ರಾö್ಯಕ್ಟರ್ ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಆನೆ ದಾಳಿ ಮಾಡಿ ಕೊಂದು ಹಾಕಿದ ಘಟನೆಗೆ ಸಂಬAಧಿಸಿದAತೆ ಉಸ್ತುವಾರಿ ಸಚಿವ ಬೋಸರಾಜ್ ಅವರು ಕೂಡಲೇ ಕಾಡಾನೆ ಸೆರೆಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ದುಬಾರೆ ಹಾಗೂ ಮತ್ತಿಗೋಡು ಶಿಬಿರದ ಅಭಿಮನ್ಯು, ಭೀಮ, ಹರ್ಷ, ಸುಗ್ರೀವ ಸಾಕಾನೆಗಳೊಂದಿಗೆ ೫೦ಕ್ಕೂ ಹೆಚ್ಚು ಸಿಬ್ಬಂದಿಗಳ ತಂಡ ಕಾಡಾನೆ ಪತ್ತೆಗಾಗಿ ಅರೆಕಾಡು ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಹುಡುಕಾಟ ಆರಂಭಿಸಿದೆ. ಭಾನುವಾರ ಸಾದೇರ ಪೊನ್ನಪ್ಪ ಅವರ ಗದ್ದೆಯಲ್ಲಿ ಉಳುಮೆ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿ ದೇವಪ್ಪ ಅವರನ್ನು ಬಲಿ ತೆಗೆದುಕೊಂಡಿತ್ತು.
ಸಂಜೆವರೆಗೂ ಕಾರ್ಯಾಚರಣೆ ಮಾಡಿದರೂ ಆನೆ ಕಣ್ತಪ್ಪಿಸಿಕೊಂಡು ತಂಡವನ್ನು ಸುಸ್ತು ಮಾಡಿತು. ತಾ.೧೫ರಂದು (ಇಂದು) ಕೂಡ ಕಾರ್ಯಾಚರಣೆ ಮುಂದುವರೆಯಲಿದೆ. ಕೊನೆಗೆ ಕಾರ್ಯಾಚರಣೆ ಮುಂದೂಡಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಪತ್ತೆಗಾಗಿ ಹುಡುಕಾಟ ನಡೆಸಲಾಗುವುದು ಎಂದರು. ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಹಿನ್ನೆಲೆ ಅರೆಕಾಡು, ನೆಲ್ಯಹುದಿಕೇರಿ, ಸಿದ್ದಾಪುರ ಸುತ್ತಮುತ್ತಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ನಿರಂತರ ಉಪಟಳ ನೀಡುತ್ತಿರುವ ಕಾಡಾನೆಯನ್ನು ಸೆರೆ ಹಿಡಿಯಲೇ ಬೇಕೆಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.
ಈ ಸಂದರ್ಭ ವನ್ಯಜೀವಿ ವಿಭಾಗ ಪಿ.ಸಿ.ಸಿ.ಎಫ್ ಸುಭಾಶ್ ಮಾಲ್ಕಡೆ, ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಎ.ಸಿ.ಎಫ್ ಮೊಹಸ್ಸಿನ್ ಬಾಷ, ಆನೆ ಟಾಸ್ಕ್ ಫೋರ್ಸ್ ವಿಭಾಗದ ಅಧಿಕಾರಿ ಚಂಗಪ್ಪ, ವಲಯ ಅರಣ್ಯ ಅಧಿಕಾರಿ ಗಳಾದ ಹನುಮಂತ ರಾಜು, ಅನನ್ಯ ಕುಮಾರ್, ಶಿವರಾಂ, ಶಾರ್ಪ್ ಶೂಟರ್ ರಂಜನ್, ಹಿರಿಯ ವನ್ಯಜೀವಿ ವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ, ಡಾ.ರಮೇಶ್ ಅರಣ್ಯ ಇಲಾಖೆ ಸಿಬ್ಬಂದಿಗಳು, ಮಾವುತರು, ಕಾವಾಡಿಗರು, ಆರ್ಆರ್ಟಿ ಸಿಬ್ಬಂದಿಗಳು ಹಾಜರಿದ್ದರು.
-ವಾಸು/ಮುಬಾರಕ್