ಮಡಿಕೇರಿ, ಆ. ೧೪: ಕೊಡಗು ಸೇನಾ ಜಿಲ್ಲೆ ಎಂಬ ಹಿರಿಮೆಯೊಂದಿಗೆ ಹಲವು ಐತಿಹ್ಯಗಳನ್ನು ಈ ವಿಚಾರದಲ್ಲಿ ಹೊಂದಿದೆ. ಈ ಸೈನಿಕರ ಜಿಲ್ಲೆಯಲ್ಲಿ, ದೇಶದ ಈ ಹೆಮ್ಮೆಯ ಯೋಧರಿಗೆ ಗೌರವ ಸಲ್ಲಿಸುವ, ವಿಶಿಷ್ಟವಾದ ಅರ್ಥಪೂರ್ಣವಾದ, ಯುವಜನತೆಗೆ ಸೇನೆಯ ಬಗ್ಗೆ ಉತ್ಸಾಹ ಮೂಡಿಸುವ ರೀತಿಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇಂದು ವಿಶೇಷ ಕಾರ್ಯಕ್ರಮವೊಂದು ಜರುಗಿತು.

ಸ್ವಾತಂತ್ರೊö್ಯÃತ್ಸವದ ಮುನ್ನಾದಿನವಾದ ಸೋಮವಾರ ‘ಕದನ ಕಲಿಗಳಿಗೆ ಗೌರವ’ ಎಂಬ ಚಿಂತನೆಯೊAದಿಗೆ ಆಯೋಜನೆಗೊಂಡಿತ್ತು. ಕೊಡಗು ಪ್ರೆಸ್‌ಕ್ಲಬ್‌ನ ಬೆಳ್ಳಿ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿದೆ. ಇದರೊಂದಿಗೆ ಇದೊಂದು ವಿಶೇಷ ರೀತಿಯ ಕಾರ್ಯಕ್ರಮವಾಗಿ ಸೈನಿಕರನ್ನು ಗೌರವಿಸುವ ಪರಿಕಲ್ಪನೆಯೊಂದಿಗೆ ಆಯೋಜಿಸಲ್ಪಟ್ಟಿತ್ತು.

ನಗರದ ರೆಡ್‌ಬ್ರಿಕ್ಸ್ ಇನ್ ಕಟ್ಟಡದ ಸತ್ಕಾರ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಿತು. ಬೆಳ್ಳಿ ಹಬ್ಬದ ಅಂಗವಾಗಿ ಜಿಲ್ಲೆಯವರಾದ ಸೇನಾಧಿಕಾರಿಗಳು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ನಿವೃತ್ತ ಯೋಧರು, ಮಹಾವೀರ ಚಕ್ರ, ವೀರ ಚಕ್ರ, ಶೌರ್ಯಚಕ್ರ ಪಡೆದಿರುವವರು, ಹುತಾತ್ಮ ಯೋಧರ ಮಾತೃಶ್ರೀ, ಪತ್ನಿ ಸೇರಿದಂತೆ ಒಟ್ಟು ೨೫ ಮಂದಿಯನ್ನು ಸನ್ಮಾನಿಸಿ ಗೌರವ ಸೂಚಿಸಿದ ಕಾರ್ಯಕ್ರಮ ಇದಾಗಿತ್ತು.

ದೇಶಕ್ಕಾಗಿ ದುಡಿದಿರುವ, ದುಡಿಯುತ್ತಿರುವ ಸೈನಿಕರನ್ನು ಸದಾ ಸ್ಮರಿಸಿಕೊಳ್ಳುವಂತಹ ಒಂದೆರಡು ಹಾಡುಗಳು, ಸೈನಿಕರ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುವ ರೀತಿಯ ಒಂದೆರಡು ನೃತ್ಯಗಳು, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್ನ ವಿದ್ಯಾರ್ಥಿಗಳ ಶಿಸ್ತು ಬದ್ಧತೆಯ ನಡೆಯಂತಹ ಗೌರವ ಸೂಚನೆಯೊಂದಿಗೆ ‘ಕದನ ಕಲಿಗಳಿಗೆ ಗೌರವ’ ಎಂಬ ಈ ಕಾರ್ಯಕ್ರಮ ಗಮನ ಸೆಳೆಯಿತು. ಕಾರ್ಯಕ್ರಮವನ್ನು ನಿವೃತ್ತ ಏರ್‌ಮಾರ್ಷಲ್ ಕೊಡಂದೇರ ಸಿ. ನಂದಾ ಕಾರ್ಯಪ್ಪ ಅವರು, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಲೆ.ಜ. ಬಿ.ಎನ್. ಬಿ.ಎಂ. ಪ್ರಸಾದ್ ಅವರು ಪಾಲ್ಗೊಂಡಿದ್ದರು.

ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವದ ಆಚರಣಾ ಸಮಿತಿಯ ಅಧ್ಯಕ್ಷ ಡಾ. ಉಳ್ಳಿಯಡ ಎಂ. ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೊಡಗು ಜಿಲ್ಲಾ ಕಾರ್ಯನಿರತ

(ಮೊದಲ ಪುಟದಿಂದ) ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾರೈ, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಕದನ ಕಲಿಗಳಿಗೆ ಗೌರವ ಕಾರ್ಯಕ್ರಮದ ಸಂಚಾಲಕ ಬೊಳ್ಳಜೀರ ಬಿ. ಅಯ್ಯಪ್ಪ ಅವರುಗಳು ಪಾಲ್ಗೊಂಡಿದ್ದರು.

ಪೊನ್ನAಪೇಟೆ ಅರಣ್ಯ ಮಹಾವಿದ್ಯಾಲಯದ ಪುತ್ತಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲಾ ಶಿಕ್ಷಕಿ ಚೋಕಿರ ಅನಿತಾ ಕಾರ್ಯಕ್ರಮ ನಿರೂಪಿಸಿ, ಪ್ರೆಸ್‌ಕ್ಲಬ್ ಕಾರ್ಯದರ್ಶಿ ಕೆ.ಕೆ. ರೆಜಿತ್‌ಕುಮಾರ್ ಸ್ವಾಗತಿಸಿದರು. ಪತ್ರಕರ್ತ ಆನಂದ್ ಕೊಡಗು ಸನ್ಮಾನಿತರ ಪರಿಚಯ ಮಾಡಿದರೆ, ಬೊಳ್ಳಜೀರ ಅಯ್ಯಪ್ಪ ವಂದಿಸಿದರು.

ಕಾರ್ಯಕ್ರಮಕ್ಕೆ ಮೆರುಗು

ಈ ವಿಶಿಷ್ಟ ಕಾರ್ಯಕ್ರಮದಲ್ಲಿ ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಅವರ ರಾಷ್ಟçದೇವಗೆ... ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆ... ಎಂಬ ದೇಶಭಕ್ತಿ ಗೀತೆ, ಪುತ್ತಾಮನೆ ವಿದ್ಯಾ ಜಗದೀಶ್ ಅವರ ವೀರ ಯೋಧರಿಗೆ ಕೊದಿ ನಮನ... ದೇಶಕಾಯೋ ಯೋಧರಿಗೆ ನಮನ... ಹಾಡು, ಕುಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಲಿನಾ ನೇತೃತ್ವದಲ್ಲಿ ಅಲ್ಲಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಸೈನಿಕರ ಕರ್ತವ್ಯ ನಿರ್ವಹಣೆಯನ್ನು ಪ್ರದರ್ಶಿಸುವ ನೃತ್ಯ ಹಾಗೂ ಅರಮೇರಿಯ ಎಸ್‌ಎಂಎಸ್ ಶಾಲಾ ವಿದ್ಯಾರ್ಥಿಗಳು ಸ್ಕೌಟ್ಸ್ನ ಶಿಕ್ಷಕಿ ಮೈಥಿಲಿರಾವ್ ಅವರ ನೇತೃತ್ವದಲ್ಲಿ ಪ್ರದರ್ಶಿಸಿದ ನೃತ್ಯ, ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಫೀ.ಮಾ. ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು, ಗೌರವ ರಕ್ಷಣೆ, ಸನ್ಮಾನ ಕಾರ್ಯಕ್ರಮಕ್ಕೆ ಚೆಕ್ಕೇರ ವಿಶಾಲ್ ನೇತೃತ್ವದಲ್ಲಿ ಸಹಕರಿಸಿದರು.

ಧನಾತ್ಮಕ ಚಿಂತನೆ - ಸ್ವಯಂ ನಿಯಂತ್ರಣಕ್ಕೆ ಕರೆ

ಒಬ್ಬ ಉತ್ತಮ ಸೇನಾನಿ ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸಲು ಧನಾತ್ಮಕ ಚಿಂತನೆ, ಸಮಗ್ರತೆ, ಸ್ವಯಂ ನಿಯಂತ್ರಣವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಏರ್‌ಮಾರ್ಷಲ್ ನಂದಾ ಕಾರ್ಯಪ್ಪ ಹೇಳಿದರು. ಈಗಾಗಲೇ ಮಾಜಿ ಸೈನಿಕರ ಕುಂದುಕೊರತೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನದಲ್ಲಿದ್ದು, ಅವರು ಸ್ಪಂದಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು. ಕೊಡಗು ಪ್ರೆಸ್ ಕ್ಲಬ್ ಯೋಧರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಸಂತೋಷದಾಯಕ ವಿಚಾರ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹೇಳಿದರು.

ರಾಷ್ಟçಪತಿಗಳ ಗೌರವ ಚಿಕಿತ್ಸಕರು, ಆಸ್ಪತ್ರೆ ಸೇವಾ ವಿಭಾಗ ಮತ್ತು ಮುಖ್ಯ ಸಮಾಲೋಚಕರು, ಮಾಜಿ ಮಹಾ ನಿರ್ದೇಶಕರಾದ ಲೆ.ಜ. ಡಾ. ಬಿ.ಎನ್ ಬಿ.ಎಂ.ಪ್ರಸಾದ್ ಮಾತನಾಡಿ, ಸಮವಸ್ತçದಲ್ಲೇ ದೇಶ ಸೇವೆ ಮಾಡಬೇಕೆಂದೇನಿಲ್ಲ, ವಿದ್ಯಾಭ್ಯಾಸ ಹಾಗೂ ಜೀವನದ ಅನೇಕ ಕ್ಷೇತ್ರದಲ್ಲಿ ಪ್ರಾಮಾಣಿಕ, ಪಾರದರ್ಶಕ, ಶಿಸ್ತಿನ ಕರ್ತವ್ಯ ನಿರ್ವಹಿಸಿ ಕೀರ್ತಿತರುವಂತಾಗಬಹುದು ಎಂದು ಹೇಳಿದರು.

ನಿವೃತ್ತ ಯೋಧರು ದೇಶದ ಆಸ್ತಿ, ಅವರ ನಿವೃತ್ತಿ ಜೀವನದಲ್ಲಿ ಎದುರಾಗುವ ಸಮಸ್ಯೆ, ಸವಾಲುಗಳಿಗೆ ಜಿಲ್ಲಾಡಳಿತ ಹೆಚ್ಚು ತ್ವರಿತವಾಗಿ ಸ್ಪಂದಿಸಲೆAದು ಕರೆ ನೀಡಿದರು. ಕೊಡಗು ಪ್ರೆಸ್ ಕ್ಲಬ್ ಪ್ರತಿ ತಿಂಗಳು ಜನಮುಖಿ, ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡು, ನಿವೃತ್ತಯೋಧರನ್ನು ಗೌರವಿಸುವ ಕೆಲಸವನ್ನು ಮಾಡಿರುವುದು ಪ್ರಶಂಸನೀಯ, ಅನುಕರಣೀಯ ಎಂದರು.

ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡಿ, ಕೊಡಗು ವೀರರ ಭೂಮಿ. ತ್ಯಾಗ ಬಲಿದಾನ ಮಾಡಿದ ಅನೇಕ ಯೋಧರು ಕೊಡಗಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾರ್ಗಿಲ್ ಕದನದ ಸಂದರ್ಭ ವೀರ ಮರಣವನ್ನಪ್ಪಿದ ಕೊಡಗಿನ ಯೋಧರ ಪಾರ್ಥಿವ ಶರೀರ ಜಿಲ್ಲೆಗೆ ಆಗಮಿಸಿದಾಗ ಪ್ರತಿಯೊಬ್ಬರು ತಮ್ಮ ಮನೆಯ ವ್ಯಕ್ತಿಯಂತೆ ಶ್ರದ್ಧಾಂಜಲಿ ಸಲ್ಲಿಸಿರುವುದು ಅವಿಸ್ಮರಣೀಯ.

ದೇಶದ ಜನರನ್ನು ಜೀವದ ಹಂಗನ್ನು ತೊರೆದು ರಕ್ಷಣೆ ಮಾಡುವ ಕಾರ್ಯವನ್ನು ಸೈನಿಕರು ಮಾಡುತ್ತಾರೆ. ತಮ್ಮ ಮುಂದಿನ ಭವಿಷ್ಯದ ಬಗ್ಗೆ ಅರಿವು ಇಲ್ಲದಿದ್ದರು ದೇಶ ಸೇವೆ ಒಂದೇ ಎಂದು ಕಾರ್ಯನಿರ್ವಹಿಸುವ ಯೋಧರ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಅವರ ಈ ತ್ಯಾಗ ಮನೋಭವ ಶ್ಲಾಘನೀಯ. ಅವರನ್ನು ಪ್ರತಿದಿನ ನೆನಪಿಸಿಕೊಳ್ಳುವ ಕಾರ್ಯ ಆಗಬೇಕು ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ವೀರಯೋಧರು ತಮ್ಮ ಬದುಕನ್ನು ದೇಶಸೇವೆಗೆ ಮುಡುಪಾಗಿಟ್ಟಿದ್ದಾರೆ. ಅವರ ನಿಸ್ವಾರ್ಥ ಸೇವೆ ವಿಶಿಷ್ಟ. ಅವರಿಗೆ ನಿರಂತರ ಗೌರವ ಸಲ್ಲಿಸುವಂತಾಗಬೇಕು. ಜೀವದ ಹಂಗು ತೊರೆದು ದೇಶದ ಗಡಿಗಳನ್ನು ಕಾಯ್ದು ನಿವೃತ್ತರಾಗಿ ಜಿಲ್ಲೆಯಲ್ಲಿ ಬಂದು ನೆಲೆಸಿರುವ ಮಾಜಿ ಸೈನಿಕರಿಗೆ ಹಲವು ಸೌಲಭ್ಯ ಕಲ್ಪಿಸುವ ಮೂಲಕ ಯೋಧರು ನಿವೃತ್ತಿಯ ನಂತರವು ಭದ್ರತೆಯಿಂದ ಜೀವನ ಕಳೆಯುವಂತಾಗಬೇಕು ಎಂದರು.

ಪ್ರಾಸ್ತ್ತಾವಿಕವಾಗಿ ಮಾತನಾಡಿದ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾಫಿ, ಸೇನೆ, ಕ್ರೀಡೆಗೆ ಹೆಸರುವಾಸಿಯಾಗಿರುವ ಕೊಡಗು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಿಂದ ದೇಶದಲ್ಲೇ ಮಾದರಿ ಎನಿಸಿಕೊಂಡಿದೆ.

ಕೊಡಗಿನ ಹಾಕಿ ಪರಂಪರೆಗೆ ಯೋಧರು ಮುನ್ನುಡಿ ಬರೆದಿದ್ದು, ಹೆಮ್ಮೆಯ ವಿಚಾರ. ಜೀವದ ಹಂಗು ತೊರೆದು ಸುದೀರ್ಘ ಸೇವೆ ಸಲ್ಲಿಸಿದ ನಿವೃತ್ತ ಯೋಧರು ಸೇವಾ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸಿ ಗುರುತಿಸಿಕೊಂಡಿದ್ದಾರೆ. ನಿವೃತ್ತಿಯ ನಂತರವೂ ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ.ಪೂವಯ್ಯ, ಕೊಡಗು ಸೈನಿಕರ ಜಿಲ್ಲೆ. ನಾನಾ ವಿಷಯಗಳಿಗೆ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರದಷ್ಟು ಮಾಜಿ ಸೈನಿಕರಿದ್ದು, ಇವರೆಲ್ಲ ನಿವೃತ್ತಿ ನಂತರವು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಜನರಲ್ ತಿಮ್ಮಯ್ಯ ಹೆಸರಿನಲ್ಲಿ ರಾಷ್ಟçಮಟ್ಟದ ಮ್ಯೂಸಿಯಂ ಹೊಂದಿದ್ದು, ಇದು ಜಿಲ್ಲೆಗೆ ಹೆಮ್ಮೆಯಾಗಿದೆ. ಸೈನಿಕ ಜಿಲ್ಲೆ ದೇಶಕ್ಕೆ ಮಾದರಿಯಾಗಲಿ ಎಂದರು.

ಸನ್ಮಾನ ಸ್ವೀಕರಿಸಿದವರು

ಕಾರ್ಯಕ್ರಮದಲ್ಲಿ ಏರ್ ಮಾರ್ಷಲ್ ನಂದ ಕಾರ್ಯಪ್ಪ, ಲೆ.ಜ. ಡಾ. ಬಿ.ಎನ್ ಬಿ.ಎಂ ಪ್ರಸಾದ್, ಮೇಜರ್ ಜನರಲ್ ಕುಪ್ಪಂಡ ನಂಜಪ್ಪ, ಕರ್ನಲ್ ಕಂಡ್ರತAಡ ಸಿ.ಸುಬ್ಬಯ್ಯ, ಕರ್ನಲ್ ಪೋರೆಯಂಡ ಬಿ.ಅಯ್ಯಪ್ಪ, ಲೆ. ಕರ್ನಲ್ ಪುಟ್ಟಿಚಂಡ ಎಸ್ ಗಣಪತಿ, ಮೇಜರ್ ಬಿದ್ದಂಡ ಎ.ನಂಜಪ್ಪ, ಮೇಜರ್ ಡಾ.ಕುಶ್ವಂತ್ ಕೋಳಿಬೈಲು, ಮೇಜರ್ ದಿವಂಗತ ಮಂಗೇರಿರ ಮುತ್ತಣ್ಣ ಪರವಾಗಿ ಪತ್ನಿ ರೀನಾ ಮುತ್ತಣ್ಣ, ಕ್ಯಾಪ್ಟನ್ ಕಾಳಪಂಡ ಬೋಪಯ್ಯ (ಬೆಲ್ಲು), ಕ್ಯಾಪ್ಟನ್ ಹೊಸೋಕ್ಲು ಎಂ. ಚಿಣ್ಣಪ್ಪ, ಸಾರ್ಜೆಂಟ್ ಕಿಗ್ಗಾಲು ಎಸ್. ಗಿರೀಶ್, ನಾಯಕ್ ಸುಬೇದಾರ್ ಕೆ.ಜಿ.ಶಿವನ್, ಪ್ಯಾರ ಕಮಾಂಡೋ ಹವಾಲ್ದಾರ್ ಪೊಕ್ಕಳಿಚಂಡ ಮೋಹನ್, ಎಸ್‌ಎಫ್‌ಎನ್ ಎಂ.ಎಸ್.ಚಿಣ್ಣಪ್ಪ, ಹವಾಲ್ದಾರ್ ಸೋಮೇಂಗಡ ಗಣೇಶ್ ತಿಮ್ಮಯ್ಯ, ಹವಾಲ್ದಾರ್ ಚಂದ್ರಕುಮಾರ್, ಹವಾಲ್ದಾರ್ ಅಮೆ ಜನಾರ್ದನ್, ಹವಾಲ್ದಾರ್ ಪಟ್ರಪಂಡ ಸೋಮೇಶ್ ಚಂಗಪ್ಪ, ಕೊಳೇರ ದಿವಂಗತ ನಾಯಕ್ ಸವಿನ್ ಪರವಾಗಿ ಅವರ ಮಾತೃಶ್ರೀ ಕೋಳೆರ ನಂಜಮ್ಮ, ನಾಯಕ್ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಸಿಪಾಯಿ ಕೆ.ಆರ್.ಸುನಿಲ್, ಸಿಪಾಯಿ ಮಾರ್ಚಂಡ ಗಣೇಶ್, ಕೊಟ್ಟುಕತ್ತಿರ ಜಾಲಿ ಸೋಮಣ್ಣ, ಬೊಟ್ಟಂಗಡ ಜಪ್ಪು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಲ್ ಕಂಡ್ರತAಡ ಸಿ.ಸುಬ್ಬಯ್ಯ ಸನ್ಮಾನಿತರ ಪರವಾಗಿ ಮಾತನಾಡಿದರು.