ಇಂದು ನಾವು ಸ್ವತಂತ್ರರಾದ ದಿನ. ಬ್ರಿಟಿಷರ ಗುಲಾಮಗಿರಿಯಿಂದ ಹೊರಬಂದು ಭಾರತ ದೇಶ ಸ್ವಾತಂತ್ರö್ಯ ಪಡೆದ ಸಂಭ್ರಮದ ಕ್ಷಣ, ರಾಷ್ಟçದಾದ್ಯಂತ ಈ ದಿನವನ್ನು ಭಕ್ತಿ ಸಂತಸದೊAದಿಗೆ ಆಚರಿಸುತ್ತೇವೆ. ನಮ್ಮ ದೇಶದ ಹೆಮ್ಮೆಯ ಪ್ರತೀಕವಾದ ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ರಾಷ್ಟçಕ್ಕೆ ಗೌರವ ಸಲ್ಲಿಸುತ್ತೇವೆ. ಇಂತಹ ಸುಮಧುರ ಕ್ಷಣದ ಬಗ್ಗೆ, ಮಕ್ಕಳಲ್ಲಿ ರಾಷ್ಟçಪ್ರೇಮ ಮೂಡಿಸುವ ನಿಟ್ಟಿನಲ್ಲಿ ‘ರಾಷ್ಟçಧ್ವಜಕ್ಕೆ ವಂದಿಸೋಣ’ ಎಂದು ರಾಷ್ಟçಧ್ವಜದ ಚಿತ್ರ ಬಿಡಿಸಿ, ರಾಷ್ಟçಪ್ರೇಮದ ಬಗ್ಗೆ ಹತ್ತು ಸಾಲುಗಳನ್ನು ಬರೆಯಲು ಹೇಳಿದ್ದೆವು, ನಮ್ಮ ನಿರೀಕ್ಷೆಗೂ ಮೀರಿ ಮಕ್ಕಳು ಭಾಗವಹಿಸಿ ಚಂದದ ಚಿತ್ರಬಿಡಿಸಿ ಕಳುಹಿಸಿದ್ದಾರೆ, ಧನ್ಯವಾದಗಳು...,ಕೆಲವರು ಚಿತ್ರಗಳನ್ನು ಮಾತ್ರ ಬಿಡಿಸಿದರೆ, ಇನ್ನು ಕೆಲವರು ಚಿತ್ರ ಬಿಡಿಸದೆ ಬರಹಗಳನ್ನು ಮಾತ್ರ ಕಳುಹಿಸಿದ್ದೀರ, ನೀವು ಕಳುಹಿಸಿದರಲ್ಲಿ ಉತ್ತಮವಾದವುಗಳನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಗಿದೆ. ಅಭಿನಂದನೆಗಳು. ಬಹುಮಾನ ಪಡೆದವರಿಗೆ ಹಾಗೆ ಭಾಗವಹಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ ಹೇಳುತ್ತಾ ಮತ್ತೆ ಮುಂದಿನ ಸ್ಪರ್ಧೆಗೆ ತಯಾರಾಗಿರಿ ಎಂದು ಹಾರೈಸುತ್ತೇನೆ, ಶುಭವಾಗಲಿ... ನಿಮ್ಮ ಪ್ರೀತಿಯ ಜಿ. ಚಿದ್ವಿಲಾಸ್, ಸಂಪಾದಕರು.
ಪ್ರಥಮ ಬಹುಮಾನ
ರಾಷ್ಟçಧ್ವಜಕ್ಕೆ ವಂದಿಸೋಣ
ನಮ್ಮ ರಾಷ್ಟç ಭಾರತ, `೧೯೪೭ನೇ ಆಗಸ್ಟ್ ೧೫ ರಂದು ನಮಗೆ ಸ್ವಾತಂತ್ರö್ಯ ದೊರಕಿತು, ನಮ್ಮ ದೇಶದ ಹೆಮ್ಮೆಯ ಪ್ರತೀಕವಾದ ತ್ರಿವರ್ಣ ಧ್ವಜ ಸ್ವತಂತ್ರವಾಗಿ ರಾರಾಜಿಸಿದ ಅವರ್ಣನೀಯ ಕ್ಷಣವದು, ನಾವು ಬ್ರಿಟಿಷರಿಂದ ಪಾರಾದೆವು, ನಮ್ಮ ರಾಷ್ಟಿçÃಯ ಧ್ವಜವು ಕೇಸರಿ, ಬಿಳಿ, ಹಸಿರು ೩ ಬಣ್ಣಗಳಿಂದ ಕೂಡಿದ್ದು, ನಡುವೆ ಅಶೋಕ ಚಕ್ರವನ್ನು ಹೊಂದಿದೆ. ಅಶೋಕ ಚಕ್ರದಲ್ಲಿ ೨೪ ಗೆರೆಗಳಿವೆ. ನಮ್ಮ ರಾಷ್ಟçಗೀತೆ ‘‘ಜನಗಣಮನ’’ ನಮ್ಮ ರಾಷ್ಟçಗೀತೆ ಮತ್ತು ರಾಷ್ಟçಧ್ವಜವನ್ನು ಗೌರವಿಸಬೇಕು. ನಮ್ಮ ದೇಶ ಭಾರತವನ್ನು ಹಿಂದೂಸ್ಥಾನ, ಭರತಖಂಡ, ಇಂಡಿಯಾ, ಉಪಖಂಡ ಮತ್ತು ಪರ್ಯಾಯ ದ್ವೀಪ ಎಂದು ಕರೆಯುವರು. ಭಾರತ ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ. ಭಾರತವು ಮೂರು ಕಡೆ ನೀರಿನಿಂದ ಆವೃತವಾಗಿದೆ, ಭಾರತ ಏಷ್ಯಾದಲ್ಲಿ ೭ನೇ ದೊಡ್ಡ ದೇಶ ಮತ್ತು ಜನಸಂಖ್ಯೆಯಲ್ಲಿ ೨ನೇ ಸ್ಥಾನದಲ್ಲಿದೆ. ಬನ್ನಿ ನಾವೆಲ್ಲರೂ ಸ್ವಾತಂತ್ರö್ಯ ದಿನಾಚರಣೆಯನ್ನು ಸಂತೋಷದಿAದ ಕೂಡಿ ಆಚರಿಸೋಣ ನಮ್ಮ ಹೆಮ್ಮೆಯ ಪ್ರತೀಕವಾದ ರಾಷ್ಟçಧ್ವಜಕ್ಕೆ ವಂದಿಸೋಣ. ‘‘ಜೈ ಭಾರತ್ ಜೈ ಹಿಂದೂಸ್ಥಾನ್’’ -ಶ್ರಾವ್ಯ ಟಿ. ಆರ್., ೯ನೇ ತರಗತಿ,
ಶ್ರೀಕೃಷ್ಣ ವಿದ್ಯಾ ಮಂದಿರ, ಸಿದ್ದಾಪುರ.ದ್ವಿತೀಯ ಬಹುಮಾನ
ರಾಷ್ಟçದ ಮೇಲಿನ ಪ್ರೀತಿ
ನನ್ನ ರಾಷ್ಟçದ ಮೇಲಿನ ನನ್ನ ಪ್ರೀತಿಗೆ ಮಿತಿಯಿಲ್ಲ. ನನ್ನ ಜನರ ಮೇಲಿನ ನನ್ನ ಪ್ರೀತಿಗೆ ಕೊನೆಯಿಲ್ಲ, ನನ್ನ ದೇಶವು ಸದಾ ಸಂತಸದಿAದಿರಲು ನಾನು ಬಯಸುತ್ತೇನೆ.
ದೇಶದ ತಿರಂಗ ಧ್ವಜ ಹಾರುವಾಗ ನಮ್ಮ ಎದೆಯು ಹೆಮ್ಮೆಯಿಂದ ಉಬ್ಬುತ್ತದೆ. ಸಂತೋಷವನ್ನು ಹರಡುತ್ತದೆ. ನಮ್ಮ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ವಿಶಿಷ್ಟ ರಾಷ್ಟç. ನನ್ನ ದೇಶ ಸುಂದರವಾದ ಶಾಂತಿ ಪ್ರಿಯವಾದ ಮತ್ತು ಕೃಷಿ ಪ್ರಧಾನವಾದ ದೇಶ. ನಮ್ಮ ಭಾರತದ ಸೈನಿಕರು ತಮ್ಮ ಉಸಿರನ್ನು ಪಣಕ್ಕಿಟ್ಟು ರಣರಂಗದಲ್ಲಿ ಕೆಚ್ಚೆದೆಯಿಂದ ಹೋರಾಡುವ ಯೋಧರು, ನಮ್ಮ ಸುಖ ನಿದ್ರೆಯ ನೆಮ್ಮದಿಗೆ ಕಾರಣಕರ್ತರು. ‘ದೇಶ ಕಾಯೋ ಯೋಧರು ನಮ್ಮ ಕಾಯೋ ದೇವರು’ ‘‘ನನ್ನ ದೇಶ ನನ್ನ ಹೆಮ್ಮೆ, ಜೈ ಹಿಂದ್’’
-ಪೂರ್ಣಶ್ರೀ, ೧೦ನೇ ತರಗತಿ,
ಸರಕಾರಿ ಪ್ರೌಢಶಾಲೆ, ಮಾಲ್ದಾರೆ.ತೃತೀಯ ಬಹುಮಾನ
ಸ್ವಾತಂತ್ರö್ಯ ದಿನಾಚರಣೆ
ಭಾರತದ ಧ್ವಜ ಸಂಹಿತೆಯ ಪ್ರಕಾರ, ಭಾರತೀಯ ಧ್ವಜವು ಅಗಲ, ಎತ್ತರ ಆಕಾರ, ಅನುಪಾತವನ್ನು ೩:೨ ಹೊಂದಿದೆ, ಧ್ವಜದ ಎಲ್ಲಾ ಮೂರು ಅಡ್ಡ ಬ್ಯಾಂಡ್‌ಗಳು (ಕೇಸರಿ, ಬಿಳಿ ಮತ್ತು ಹಸಿರು) ಸಮಾನ ಗಾತ್ರದಲ್ಲಿರುತ್ತವೆ.
ಅಶೋಕ ಚಕ್ರವೂ ೨೪ ಸಮ ಅಂತರದ ಕಡ್ಡಿಗಳನ್ನು ಹೊಂದಿದೆ.
ಕೇಸರಿ ಬಣ್ಣವು ಧೈರ್ಯ ಮತ್ತು ತ್ಯಾಗವನ್ನು ಸೂಚಿಸುತ್ತದೆ. ಬಿಳಿ ಬಣ್ಣವು ಶಾಂತಿ, ಶುದ್ಧತೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಹಸಿರು ಬಣ್ಣವು ಬೆಳವಣಿಗೆ, ನಂಬಿಕೆ ಮತ್ತು ಫಲವತ್ತತೆಯನ್ನು ಸೂಚಿಸುತ್ತದೆ. ಅಶೋಕ ಚಕ್ರವು ಧರ್ಮ ಚಕ್ರದ ಚಿತ್ರಣವಾಗಿದೆ. ಭಾರತದ ರಾಷ್ಟಿçÃಯ ಧ್ವಜವು ಸ್ವಾತಂತ್ರö್ಯ ಮತ್ತು ವೈಭವದ ಸಂಕೇತವಾಗಿದೆ.
-ಯಸ್ರುತ್ ವೈ. ಎಸ್. ೧೦ನೇ ತರಗತಿ
ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆ,
ಭಾಗಮಂಡಲ.
ಸಮಾಧಾನಕರ ಬಹುಮಾನ
ರಾಷ್ಟçಧ್ವಜಕ್ಕೆ ವಂದಿಸೋಣ
ನಮ್ಮ ದೇಶ ಭಾರತ. ಭಾರತವು ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ನಾವು ಈಗ ೭೭ನೇ ವರ್ಷದ ಸ್ವಾತಂತ್ರö್ಯ ದಿನವನ್ನು ಆಚರಿಸುತ್ತಿದ್ದೇವೆ. ನಮ್ಮ ರಾಷ್ಟçಧ್ವಜವು ಮೂರು ಬಣ್ಣಗಳಿಂದ ಕೂಡಿದ್ದು ಇದನ್ನು ‘‘ತ್ರಿವರ್ಣ ಧ್ವಜ ಎಂದು ಕರೆಯು ತ್ತೇವೆ. ನಮ್ಮ ರಾಷ್ಟçಧ್ವಜವು ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳನ್ನು ಹೊಂದಿದ್ದು, ಮಧ್ಯದಲ್ಲಿ ಅಶೋಕ ಚಕ್ರವಿದೆ. ಕೇಸರಿ ಬಣ್ಣವು ಧೈರ್ಯ ಮತ್ತು ತ್ಯಾಗವನ್ನು ಸೂಚಿಸುತ್ತದೆ. ಬಿಳಿ ಬಣ್ಣ್ಣವು ಸತ್ಯ ಮತ್ತು ಶಾಂತಿಯನ್ನು ಸೂಚಿಸುತ್ತದೆ. ಹಸಿರು ಬಣ್ಣವು ಬೆಳವಣಿಗೆ ಮತ್ತು ಫಲವತ್ತತೆಯನ್ನು ಸೂಚಿಸುತ್ತದೆ. ಧ್ವಜದ ಮಧ್ಯದಲ್ಲಿರುವ ೨೪ ಅಡ್ಡಗೆರೆಗಳು ೨೪ ಜೈನ ತೀರ್ಥಂಕರರನ್ನು ನೆನಪಿಸುತ್ತದೆ. ಭಾರತದ ರಾಷ್ಟçಧ್ವಜವನ್ನು ‘‘ಪಿಂಗಳಿ ವೆಂಕಯ್ಯ’’ ಅವರು ಸ್ವರಾಜ್ಯ ಧ್ವಜ ಎಂದು ವಿನ್ಯಾಸಗೊಳಿಸಿದರು.
-ಬನ್ಸಿ ಕೆ. ಎಸ್., ೬ನೇ ತರಗತಿ,
ಸಂತ ಮೈಕಲರ ಶಾಲೆ, ಮಡಿಕೇರಿ.