ಮಡಿಕೇರಿ, ಆ. ೧೪: ವೀರಾಜಪೇಟೆ ತಾಲೂಕಿನ ಪೆರಂಬಾಡಿ ಪೊಲೀಸ್ ಚೆಕ್‌ಪೋಸ್ಟ್ನಲ್ಲಿ ಚಾಲಕನಿಂದ ಹಣ ವಸೂಲಿ ಆರೋಪಕ್ಕೆ ಸಂಬAಧಿಸಿದAತೆ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

ತಾ. ೧೩ ರಂದು ಸಾಮಾಜಿಕ ಜಾಲತಾಣದಲ್ಲಿ ಈ ಸಂಬAಧದ ವೀಡಿಯೋ ವೈರಲ್ ಆದ ಬಳಿಕ ವರದಿ ಪಡೆದು ಸಿಬ್ಬಂದಿಯನ್ನು ಅಮಾನತ್ತುಗೊಳಿಸಲಾಗಿದೆ. ವಾಹನ ತಪಾಸಣೆ ವೇಳೆ ಲಾರಿ ಚಾಲಕನೋರ್ವ ಠಾಣೆಗೆ ಬಂದು ವಸ್ತುವೊಂದನ್ನು ಇಟ್ಟು ಹೋಗಿರುವ ಬಗ್ಗೆ ವೀಡಿಯೋದಲ್ಲಿ ಸೆರೆಯಾಗಿದೆ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

೬ ವಾಹನಗಳ ವಶ

ಪರವಾನಗಿ ಇಲ್ಲದೆ ಹಾಗೂ ರಾಜಧನ ಪಾವತಿಸದೆ ಅನಧಿಕೃತವಾಗಿ ಕೇರಳ ರಾಜ್ಯದಿಂದ ಲ್ಯಾಟ್‌ರೈಟ್ಸ್ ಹಾಗೂ ಕೆಂಪು ಇಟ್ಟಿಗೆ ಸಾಗಾಣಿಕೆ ಮಾಡುತ್ತಿದ್ದ ೬ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವಹಿಸಿದ್ದು, ವಾಹನ ಮಾಲೀಕರು ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗಿದ್ದಾರೆ.

ಪೊಲೀಸ್ ಠಾಣೆ, ಕಚೇರಿ, ಚೆಕ್‌ಪೋಸ್ಟ್ಗಳಲ್ಲಿ ಕರ್ತವ್ಯ ನಿರ್ವಹಿಸುವವರು ಸಾರ್ವಜನಿಕರಿಗೆ ಆಮಿಷ ವ್ಯಕ್ತಪಡಿಸಿದ್ದಲ್ಲಿ ಹಾಗೂ ತೊಂದರೆ ನೀಡಿದ್ದಲ್ಲಿ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಮನವಿ ಮಾಡಿದ್ದಾರೆ.

ಅಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು. ಮಾಹಿತಿಯನ್ನೂ ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.