ವೀರಾಜಪೇಟೆ, ಆ. ೧೫: ಕಾವೇರಿ ಪದವಿ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನದ ಮೂಲಕ ರಾಷ್ಟೀಯ ಗ್ರಂಥಾಲಯ ದಿನವನ್ನು ಆಚರಿಸಲಾಯಿತು.

ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ ಸ್ಮರಣಾರ್ಥ ಆಗಸ್ಟ್ ೧೨ ರಂದು ಭಾರತದಾದ್ಯಂತ ರಾಷ್ಟಿçÃಯ ಗ್ರಂಥಾಲಯ ದಿನವನ್ನು ಆಚರಿಸಲಾಗುತ್ತದೆ. ವೀರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು.

ಈ ಸಂದರ್ಭ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಿದರು. ಗ್ರಂಥಾಲಯದಲ್ಲಿ ಜೀವನಚರಿತ್ರೆ, ಸಾರ್ವಕಾಲಿಕ ಶ್ರೇಷ್ಠತೆಗಳು, ಬೆಸ್ಟ್ ಸೆಲ್ಲರ್‌ಗಳು, ಕಾದಂಬರಿಗಳು, ನಿಘಂಟುಗಳು ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ಶೈಕ್ಷಣಿಕ ಪಠ್ಯ ಪುಸ್ತಕ ಹೀಗೆ ವಿವಿಧ ಪ್ರಕಾರಗಳ ವೈವಿಧ್ಯಮಯ ಪುಸ್ತಕಗಳನ್ನು ಇರಿಸಲಾಗಿದೆ.

ಓದುವ ದಾಹ ನೀಗಿಸಲು ಪುಸ್ತಕ ಪ್ರೇಮಿಗಳು ವಿವಿಧ ಪ್ರಕಾರದ ಪುಸ್ತಕಗಳನ್ನು ಕಾಲೇಜಿಗೆ ನೀಡುತ್ತಿರುವುದು ಕಂಡು ಬಂತು. ಪ್ರದರ್ಶನಕ್ಕೆ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಆನಂದ್ ಕಾರ್ಲ, ಪಿಯು ಕಾಲೇಜಿನ ಪ್ರಾಂಶುಪಾಲ ನಾಣಯ್ಯ, ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಭೇಟಿ ನೀಡಿದರು.

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸಲು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಗ್ರಂಥಪಾಲಕಿ ಡಾ. ಎ.ಆರ್ ಮುತ್ತಮ್ಮ ಗ್ರಂಥಾಲಯದ ಸಿಬ್ಬಂದಿ ರೇಷ್ಮಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.