ಮಡಿಕೇರಿ, ಆ. ೧೫: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಿದ್ದ ಸಿದ್ದಾಪುರ ಸಮೀಪದ ಹುಂಡಿ ನಿವಾಸಿ ಉನೈಸ್ ಎಂಬಾತನÀ ಮೇಲೆ ಮೊಕದ್ದಮೆ ದಾಖಲಾಗಿದೆ.

ಉನೈಸ್ ಕಳೆದ ಹಲವು ಸಮಯಗಳಿಂದ ತನ್ನ ಸಾಮಾಜಿಕ ಜಾಲತಾಣದಲ್ಲಿ ಮತ್ತು ಇತರ ಕಡೆಯಲ್ಲಿ ಒಂದು ಪಕ್ಷದ ಪರವಾಗಿ ಕೆಲಸ ನಿರ್ವಹಿಸುವ ವೇಳೆ ಎಸ್ಡಿಪಿಐ ಪಕ್ಷ ಮತ್ತು ಪಕ್ಷದ ಸಿದ್ಧಾಂತದ ಬಗ್ಗೆ ನಿರಾಧಾರ ಆರೋಪಗಳನ್ನು ಮಾಡುತ್ತಾ ಇದ್ದ.

ಕಳೆದ ಜುಲೈ ೧೬ರಂದು ಭಯೋತ್ಪಾದಕ ವಿರೋಧಿ ದಿನ ಎಂಬ ಶೀರ್ಷಿಕೆಯಲ್ಲಿ ಎಸ್ಡಿಪಿಐ ಭಯೋತ್ಪಾದಕರು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದ ಇಂತಹ ನಿರಾಧಾರ ಆರೋಪಗಳಿಂದ ಸಮಾಜದ ಸ್ವಾಸ್ತ್ಯ ಕೆಡುವುದು ಮಾತ್ರವಲ್ಲದೆ ಪಕ್ಷದ ಹಿತಾಶಕ್ತಿಗೆ ಧಕ್ಕೆಯಾಗುತ್ತದೆ. ಹಾಗಾಗಿ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಮಡಿಕೇರಿ ನಗರಸಭೆ ಸದಸ್ಯ, ಎಸ್ಡಿಪಿಐ ಜಿಲ್ಲಾ ಕೋಶಾಧಿಕಾರಿ ಮನ್ಸೂರ್ ಅಲಿ ನೀಡಿದ ಪುಕಾರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.