ಮಡಿಕೇರಿ, ಆ. ೧೩: ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕೊಡ್ಲಿಪೇಟೆ ಮಹಿಳಾ ಸಮಾಜದಲ್ಲಿ ನಡೆಯಿತು.
ಜಿಲ್ಲಾ ಅಧ್ಯಕ್ಷರಾಗಿ ಹೆಚ್.ಎಂ. ದಿವಾಕರ್, ಪ್ರಧಾನ ಕಾರ್ಯದರ್ಶಿ ದಯಾನಂದ, ಮಾಧ್ಯಮ ಕಾರ್ಯದರ್ಶಿ ಎನ್.ಎ. ಅಶ್ವಥ್ ಕುಮಾರ್, ಖಜಾಂಚಿ ಯು.ಪಿ. ನಾಗೇಶ್, ಪ್ರಧಾನ ಸಂಚಾಲಕರಾಗಿ ಬಿ.ಕೆ. ಯತೀಶ್, ತಾಲೂಕುವಾರು ಉಪಾಧ್ಯಕ್ಷರಾಗಿ ಸಿ.ವಿ. ಶಂಭುಲಿAಗಪ್ಪ, ಡಿ.ಎಸ್. ಮಹೇಶ್, ಡಿ.ಎನ್. ವಿಕ್ರಂ, ಬಡುಬನಹಳ್ಳಿ ಬಸಪ್ಪ, ಎಂ.ಎA. ಪ್ರಕಾಶ್, ಹೆಚ್.ಸಿ. ಯತೀಶ್, ಕಾರ್ಯದರ್ಶಿಗಳಾಗಿ ಎಸ್.ವಿ. ಸಿದ್ದೇಶ್, ಯು.ಹೆಚ್. ಉಮೇಶ್, ನಿರ್ದೇಶಕರು ಗುರುರಾಜ್, ಎಂ.ಸಿ. ಆದರ್ಶ, ಪಿ.ಎನ್. ರವಿ, ಇಂದುಶೇಖರ್, ಕೆ.ಪಿ. ಮುತ್ತಯ್ಯ, ಮೋಹನ್, ವಿ.ಹರೀಶ್, ಪ್ರತಾಪ್ ಸಿ.ಟಿ, ಜಗದೀಶ್, ಗಿರೀಶ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಹಾಗೂ ಸಂಘದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಸಭೆಯ ದಿವ್ಯ ಸಾನಿಧ್ಯದಲ್ಲಿ ಗೌರವಾಧ್ಯಕ್ಷ ಮನೆಹಳ್ಳಿ ಮಠಾಧೀಪತಿ ಶ್ರೀ ಶಿವಲಿಂಗಸ್ವಾಮೀಜಿ, ಕಲ್ಲು ಮಠಾಧ್ಯಕ್ಷರು ಶ್ರೀ ಮಹಾಂತ ಸ್ವಾಮೀಜಿ, ಕಲ್ಲಹಳ್ಳಿ ಮಠಾಧ್ಯಕ್ಷರು ಶ್ರೀ ರುದ್ರಮುನಿ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು.
ರಾಷ್ಟಿçÃಯ ಸಂಚಾಲಕ ಎಸ್. ಮಹೇಶ್ ಮಾತನಾಡಿ, ಸಂಘ ರಾಷ್ಟಿçÃಯ ಮಟ್ಟದಲ್ಲಿ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಂಡು ಉತ್ತಮ ಸಂಘಟನೆಯಾಗಿದೆ. ಒಬಿಸಿ ಪಂಗಡಕ್ಕೆ ಸಿಗುವ ಸರ್ಕಾರದ ಸೌಲಭ್ಯ ನಮ್ಮ ಸಮಾಜಕ್ಕೆ ಸಿಗುತ್ತಿಲ್ಲ. ಹಿಂದಿನ ವರ್ಷದ ಸರ್ಕಾರ ವೀರಶೈವ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಈ ನಿಗಮದಿಂದ ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ, ರೈತರ ಕೃಷಿ ಕೊಳವೆ ಬಾವಿ ಮುಂತಾದ ಸಾಲ ಸೌಲಭ್ಯ ನಿಗಮದಿಂದ ಸಿಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಸಿಗುವಂತೆ ತಿದ್ದುಪಡಿ ಯನ್ನು ಮಾಡಬೇಕಾಗಿದೆ ಎಂದರು.
ಮನೆಹಳ್ಳಿ ತಪೋಕ್ಷೇತ್ರ ಮಠಾಧ್ಯಕ್ಷ ಶ್ರೀ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ಸಂಘಟನೆ ಎಂಬುದು ಬೃಹತ್ ವೃಕ್ಷವಿದ್ದಂತೆ. ನಮ್ಮ ಸಮಾಜದ ವೃಕ್ಷ ಬಸವೇಶ್ವರರು, ಅವರ ಹಾದಿಯನ್ನು ನಾವು ಅನುಸರಿಸಬೇಕು ಎಂದು ಕರೆ ನೀಡಿದರು. ರಾಜ್ಯ ಸಂಚಾಲಕ ಎ.ಎಸ್. ಮಲ್ಲೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜಿ.ಬಿ. ಜಯರಾಜ್, ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಪ್ರಸನ್ನ, ಹಿರಿಯರಾದ ಕೆ.ಬಿ.ನಾಗರಾಜ್ ಇದ್ದರು.