ಮಡಿಕೇರಿ, ಆ. ೧೩: ಇದೀಗ ಸಹಕಾರ ಸಂಘಗಳು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವಾಗಿ ಮಾರ್ಪಾಡಾಗಿ ರುವದರಿಂದ ಸಂಘದ ಸದಸ್ಯರುಗಳಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ಗಳನ್ನು ಹೊಂದಿಕೊಳ್ಳಲು ಅವಕಾಶವಿರುವದಾಗಿ ಕೊಕ್ಕಲೇರ ಸುಜು ತಿಮ್ಮಯ್ಯ ಹೇಳಿದರು.
ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದುವರೆಗೆ ಕೃಷಿ ಪ್ರಾಥಮಿಕ ಸಹಕಾರ ಸಂಘವಾಗಿದ್ದ ಎಲ್ಲ ಸಹಕಾರ ಸಂಘಗಳನ್ನು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರವೆಂದು ಮಾರ್ಪಡಿಸಿ ಏಕರೂಪದ ಬೈಲಾ ಜಾರಿಗೆ ತರಲಾಗಿದೆ. ಇದುವರೆಗೆ ಕೃಷಿಗೆ ಸಂಬAಧಿಸಿದAತೆ ಮಾತ್ರ ಸೌಲಭ್ಯ ಗಳನ್ನು ಹೊಂದಿ ಕೊಳ್ಳಬಹುದಾಗಿತ್ತು. ಇದೀಗ ನೂತನ ಮಾರ್ಪಾಡಿ ನಿಂದಾಗಿ ಬೇರೆ, ಬೇರೆ ವಿವಿಧ ರೀತಿಯ ಸೌಲಭ್ಯಗಳನ್ನು ಹೊಂದಿ ಕೊಳ್ಳಬಹುದು ಎಂದು ತಿಳಿಸಿದರು. ಸಂಘವು ೨೦೨೨-೨೩ನೇ ಸಾಲಿನಲ್ಲಿ ಸದಸ್ಯರ ಪಾಲು ಹಣ, ವಿವಿಧ ಸಾಲ ನೀಡಿಕೆ, ವಿವಿಧ ನಿಧಿಗಳ ಸಹಿತ ಒಟ್ಟು ರೂ.೧೮,೬೩,೪೦೪ರಷ್ಟು ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರುಗಳಿಗೆ ಶೇ.೧೦ರಷ್ಟು ಡಿವಿಡೆಂಡ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ಪರವಾಗಿ ಮಕ್ಕಂದೂರು ಹಾಗೂ ಮುಕ್ಕೋಡ್ಲು ಭಾಗದಲ್ಲಿ ಪಿಗ್ಮಿ ಹಣ ಸಂಗ್ರಹ ಮಾಡಲು ಅವಕಾಶವಿದ್ದು, ಆಸಕ್ತರು ಸಂಘವನ್ನು ಸಂಪರ್ಕಿಸುವAತೆ ಕೋರಿದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ನಾಪಂಡ ರವಿ ಕುಶಾಲಪ್ಪ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಸದಸ್ಯರುಗಳು ಚರ್ಚೆಯಲ್ಲಿ ಪಾಲ್ಗೊಂಡು ಸಂದೇಹಗಳನ್ನು ಪರಿಹರಿಸಿಕೊಂಡರು.
ಸAಘದ ಉಪಾಧ್ಯಕ್ಷ ಕುಂಬಗೌಡನ ಪ್ರಸನ್ನ, ನಿರ್ದೇಶಕರು ಗಳಾದ ಕನ್ನಿಕಂಡ ಸುಬ್ಬಯ್ಯ, ಲಕ್ಕಪ್ಪನ ವಿಜೇತ, ಕೊಟ್ಟಕೇರಿಯನ ಪ್ರದೀಪ್, ಮಂಜುನಾಥ ನಾಯಕ, ಹೆಚ್.ಎಂ. ಸುಧಾಕರ, ಉಕ್ಕೇರಂಡ ನೀಲಮ್ಮ, ಪಿ.ಎಂ. ಸುಲೋಚನ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಎಸ್.ಸಿ. ರಾಗಿಣಿ, ಗೌರವ ಕಾರ್ಯದರ್ಶಿ ಸಿ.ಬಿ. ಕುಟ್ಟಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಪ್ರಬಾರ) ಎಂ.ಎಸ್. ಶೋಭಾವತಿ, ಗುಮಾಸ್ಥ ಎಂ.ಎಸ್. ವಿಜಯ್ಕುಮಾರ್, ಹಟ್ಟಿಹೊಳೆ ಶಾಖಾ ವ್ಯವಸ್ಥಾಪಕ ಸಂತೋಷ್, ಸಿಬ್ಬಂದಿಗಳಾದ ಕೆ.ಆರ್. ಹೇಮಲತ, ಎ.ಡಿ. ಪೊನ್ನಪ್ಪ ಇದ್ದರು. ಉಪಾಧ್ಯಕ್ಷ ಅಣ್ಣೆಚ್ಚಿರ ಸತೀಶ್ ಸ್ವಾಗತಿಸಿದರೆ, ನಿರ್ದೇಶಕಿ ಪಡೇಟಿರ ಕವಿತಾ ಪ್ರಾರ್ಥಿಸಿದರು. ಬಿ.ಎನ್. ರಮೇಶ್ ವಂದಿಸಿದರು.