ಶ್ರೀಮಂಗಲ, ಆ. ೧೩: ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಕಾಕಮಡ ಎನ್. ಚಂಗಪ್ಪ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಕಾಕಮಾಡ ನಾಣಯ್ಯ ಅವರ ಜ್ಞಾಪಕಾರ್ಥ ತಾಲೂಕು ಮಟ್ಟದಲ್ಲಿ ೧೩ನೇ ವರ್ಷದ ಅಂತರ ಶಾಲಾ ಚರ್ಚೆ ಹಾಗೂ ಭಾಷಣ ಸ್ಪರ್ಧೆ ನಡೆಯಿತು.
ಕೊಡಗಿನ ಧೀಮಂತ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹಾಗೂ ಖಾಸಗಿಕರಣವು ಸ್ವಾತಂತ್ರ್ಯ ಭಾರತದಲ್ಲಿ ಕಡಿಮೆ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆಯೇ? ಎಂಬ ವಿಷಯದ ಬಗ್ಗೆ ಪರ ಮತ್ತು ವಿರೋಧ ಚರ್ಚೆಯಲ್ಲಿ ಸುಮಾರು ೬೪ ಮಕ್ಕಳು ಭಾಗವಹಿಸಿದ್ದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಸ್ಪರ್ಧೆಯ ತೀರ್ಪುಗಾರರಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಉಪನ್ಯಾಸಕರಾದ ಡಾ. ರೇವತಿ, ರಜನಿ, ಎಂ.ಕೆ. ಭಾಗ್ಯ ಮತ್ತು ಪದ್ಮ, ಪೊನ್ನಂಪೇಟೆ ಸಿ.ಐ.ಟಿ. ಕಾಲೇಜಿನ ಉಪನ್ಯಾಸಕಿ ಕಾವ್ಯಶ್ರೀ, ಜೆ.ಸಿ.ಐ. ಮಾಜಿ ಅಧ್ಯಕ್ಷೆ ಕಾವ್ಯ ಸೋಮಯ್ಯ ಅವರು ಸ್ಪರ್ಧಿಗಳಿಗೆ ಹಿತವಚನವನ್ನು ಹೇಳಿದರು.
ಈ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಂಡಚAಡ ದಿನೇಶ್ ಚಿಟ್ಟಿಯಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಕಮಾಡ ಚಂಗಪ್ಪ ಹಾಗೂ ಗಂಗಾ ಚಂಗಪ್ಪ ಪಾಲ್ಗೊಂಡಿದ್ದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಇಮ್ಮಿ ಉತ್ತಪ್ಪ ಮತ್ತು ಸದಸ್ಯರು ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ ಕಾಳಿಮಾಡ ಮೋಟಯ್ಯ, ಪದ್ಮಶ್ರೀ ಪ್ರಶಸ್ತಿ ಭಾಜನರಾದ ರಾಣಿ ಮಾಚಯ್ಯ ಉಪಸ್ಥಿತರಿದ್ದರು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ ಕನ್ನಡ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಅಪ್ಪಚ್ಚ ಕವಿ ವಿದ್ಯಾಲಯದ ಮೋಕ್ಷಿತ್ ಎಂ. ಎಸ್ (ಪ್ರ), ಗೋಣಿಕೊಪ್ಪ ಕಾಪ್ಸ್ ಶಾಲೆಯ ಆರಾಧ್ಯ ಶೆಟ್ಟಿ (ದ್ವಿ), ಗೋಣಿಕೊಪ್ಪ ಲಯನ್ಸ್ ಶಾಲೆಯ ಚರಿಕ (ತೃ), ಪೊನ್ನಂಪೇಟೆ ಸಂತ ಅಂತೋನಿ ಶಾಲೆಯ ಅಕ್ಷರ ತಂಗಮ್ಮ (ತೃ) ಸ್ಥಾನ ಪಡೆದುಕೊಂಡರು.
ಇAಗ್ಲಿಷ್ ವಿಭಾಗದಲ್ಲಿ ಗೋಣಿಕೊಪ್ಪ ಲಯನ್ಸ್ ಶಾಲೆಯ ಋಷಿಲ್ ತಮ್ಮಯ್ಯ ಕೆ.ಎಂ. (ಪ್ರ), ಗೋಣಿಕೊಪ್ಪ ಕಾಲ್ಸ್ ಶಾಲೆಯ ಚರಿಷ್ಮಾ (ದ್ವಿ) ಅಪ್ಪಚ್ಚ ಕವಿ ವಿದ್ಯಾಲಯದ ಅಜಿತ್ ಪಿ.ಎನ್. (ದ್ವಿ) ಲಯನ್ಸ್ ಶಾಲೆಯ ಯೋಶಿನಿ (ತೃ) ಪಡೆದರು.
ಪ್ರೌಢಶಾಲಾ ವಿಭಾಗ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕಾಲ್ಸ್ ಶಾಲೆಯ ಪ್ರಾಪ್ತಿ ಪೂವಮ್ಮ (ಪ್ರ), ಗೋಣಿಕೊಪ್ಪ ಕಾಪ್ಸ್ ಶಾಲೆಯ ಆಧ್ಯ ಕೆ.ಕೆ. (ದ್ವಿ), ಗೋಣಿಕೊಪ್ಪ ಕಾಪ್ಸ್ ಶಾಲೆಯ ಶೃಂಗ (ತೃ) ಸ್ಥಾನ ಪಡೆದರು.
ಇಂಗ್ಲಿಷ್ ವಿಭಾಗದಲ್ಲಿ ಗೋಣಿಕೊಪ್ಪ ಕಾಲ್ಸ್ ಶಾಲೆಯ ಸಾತ್ವಿಕ್ ತಿಮ್ಮಯ್ಯ (ಪ್ರ), ಕಾಪ್ಸ್ ಶಾಲೆಯ್ ಅಂಚಲ್ ಪೂಜಾ (ದ್ವಿ), ವೀರಾಜಪೇಟೆ ಕಾವೇರಿ ಶಾಲೆ ಕ್ಷಮ ಕಾವೇರಮ್ಮ (ತೃ) ಸ್ಥಾನ ಪಡೆದರು.
ಶಾಲಾ ಮುಖ್ಯ ಉಪಾಧ್ಯಾಯಿನಿ ತನುಜಾ ಎಸ್.ಎಸ್. ಸ್ವಾಗತಿಸಿ, ಕಾವೇರಮ್ಮ ಎಂ.ಎನ್. ಹಾಗೂ ಶೌಬಿತ್ ವಿ.ಎಂ. ನಿರೂಪಿಸಿ, ಮೀನಾ ಎ.ಎಂ. ವಂದಿಸಿದರು.