ಮಡಿಕೇರಿ, ಆ. ೧೩: ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ವೀರಾಜಪೇಟೆ ನೆಹರು ನಗರ ನಿವಾಸಿ ಎಂ.ಕೆ. ಸಜೀರ್ (೩೧) ಬಂಧಿತ ಆರೋಪಿ. ಈತನಿಂದ ೨೦೫ ಗ್ರಾಂ ಗಾಂಜಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾ. ೧೨ ರಂದು ಬಿಟ್ಟಂಗಾಲದಲ್ಲಿ ಮಾದಕ ವಸ್ತು ಮಾರಾಟದ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾದಕ ವಸ್ತು ತಡೆಗಾಗಿ ರಚನೆಯಾದ ಮಡಿಕೇರಿ ಡಿವೈಎಸ್‌ಪಿ ಎಂ. ಜಗದೀಶ್, ವೀರಾಜಪೇಟೆ ಸಿಪಿಐ ಬಿ.ಎಸ್. ಶಿವರುದ್ರಪ್ಪ, ಮಂಜುನಾಥ್, ವೀರಾಜಪೇಟೆ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿದ್ದು ಮಾದಕ ವಸ್ತು ಕುರಿತು ಮಾಹಿತಿ ಇದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ಕೆಎಸ್‌ಪಿ ತಂತ್ರಾAಶದ ಮೂಲಕ ದೂರು ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮನವಿ ಮಾಡಿದ್ದಾರೆ.