ಗೋಣಿಕೊಪ್ಪಲು, ಆ. ೧೩: ಇತ್ತೀಚಿನ ವರ್ಷಗಳಲ್ಲಿ ಕೃಷಿ ಭೂಮಿಯು ಕಡಿಮೆಯಾಗುತ್ತಿವೆ. ಬಹುತೇಕ ಭೂಮಿಗಳು ವಾಣಿಜ್ಯ ಚಟುವಟಿಕೆಗೆ ಬಳಕೆಯಾಗುತ್ತಿವೆ. ಇನ್ನೊಂದೆಡೆ ವನ್ಯ ಪ್ರಾಣಿಗಳ ಉಪಟಳದಿಂದ ಇರುವ ಭತ್ತದ ಭೂಮಿಯನ್ನು ಮುಂದುವರೆಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಭೂಮಿ ನೆಟ್ಟರೂ ಪ್ರಾಕೃತಿಕ ವಿಕೋಪದಂತಹ ಸಮಸ್ಯೆಯು ಕೃಷಿಕರನ್ನು ಕಾಡುತ್ತಿದೆ.
ಇನ್ನೊಂದೆಡೆ ಕಾರ್ಮಿಕರ ಕೊರತೆಯು ಕೂಡ ರೈತರನ್ನು ಬಾಧಿಸುತ್ತಿದೆ. ಹೀಗಾಗಿ ದ.ಕೊಡಗಿನ ಬಹುತೇಕ ಪ್ರದೇಶದಲ್ಲಿ ಭತ್ತದ ಕೃಷಿ ಅಷ್ಟಾಗಿ ನಡೆಯುತ್ತಿಲ್ಲ. ರಸಗೊಬ್ಬರದ ಬೆಲೆ, ಕಾರ್ಮಿಕರ ಕೂಲಿ ಇವುಗಳ ಮಧ್ಯೆ ಭತ್ತದ ಕೃಷಿಯಲ್ಲಿ ಆದಾಯ ಮಾಡಲು ಸಾಧ್ಯವಾಗದ ಹಲವು ರೈತರು ತಮ್ಮ ಕೃಷಿ ಭೂಮಿಯನ್ನು ಹಾಗೆ ಬಿಟ್ಟಿದ್ದಾರೆ. ಕೃಷಿ ಭೂಮಿಯು ಹಾಗೇ ಉಳಿದಿರುವುದರಿಂದ ನೀರಿನ ಅಂಶವು ಕಡಿಮೆಯಾಗುತ್ತಿವೆ. ಅಂತರ್ಜಲ ಕುಸಿಯುತ್ತಿದೆ. ಇವುಗಳನ್ನು ಗಮನಿಸಿದ ಶ್ರೀಮಂಗಲ ಭಾಗದ ಮಹಿಳೆಯರ ತಂಡ ಈ ಭಾರಿ ಕೃಷಿ ಚಟುವಟಿಕೆಗೆ ಪುನಶ್ಚೇತನ ನೀಡಲು ತಾವೇ ಮುಂದಾಗಿ ಭತ್ತದ ಗದ್ದೆಗಳಿಗೆ ಇಳಿದು ನಾಟಿ ಕಾರ್ಯ ಆರಂಭಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ.
ಬೋಂಡಿAಗ್ ಬ್ಲೂಮ್ಸ್ ಮಹಿಳಾ ತಂಡವೊAದು ಇಂತಹ ಪ್ರಯತ್ನಕ್ಕೆ ಮುಂದಾಗಿದ್ದು ತಂಡದ ನಾಯಕಿ ಬಾಚಮಾಡ ಲೆಜೆಟ್ ಇವರು ತಮ್ಮ ತಂಡದ ಮಹಿಳೆಯರೊಂದಿಗೆ ಗದ್ದೆಗಿಳಿದು ಕೃಷಿ ನಾಟಿ ಆರಂಭಿಸಿದರು. ಮುಂಜಾನೆಯಿAದಲೇ ತಂಡದ ಹಲವು ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳನ್ನು ಬದಿಗೊತ್ತಿ ಭತ್ತದ ಕೃಷಿ ಮಹತ್ವದ ಬಗ್ಗೆ ಹಾಗೂ ಈ ಭೂಮಿಯ ಅಂತರ್ಜಲವನ್ನು ಉಳಿಸಿಕೊಳ್ಳುವ ಪ್ರಯತ್ನ ಪ್ರತಿ ನಾಗರಿಕನಿಂದ ಆಗಬೇಕಾಗಿರುವುದು ಅವಶ್ಯಕವೆಂಬ ಸಂದೇಶವನ್ನು ಸಾರಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ಬೋಂಡಿAಗ್ ಬ್ಲೂಮ್ಸ್ ಎಂಬ ವ್ಯಾಟ್ಸಾಪ್ ಗ್ರೂಪನ್ನು ಆರಂಭಿಸಿದ ಗ್ರೂಪ್ ಸಂಸ್ಥಾಪಕಿ ಬಾಚಮಾಡ ಲೆಜೆಟ್ ಹಲವು ಮಹಿಳೆಯರನ್ನು ಗುಂಪಿನಲ್ಲಿ ಸೇರಿಸಿಕೊಂಡು ತಮ್ಮ ಮನೆಯ ಹೂಗಿಡಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ವರ್ಷ ಕಳೆಯುತ್ತಿದ್ದಂತೆಯೇ ಗ್ರೂಪ್ಸ್ ಸದಸ್ಯರ ಮನೆಯಲ್ಲಿ ಉತ್ತಮವಾದ ಹೂದೋಟಗಳು ನಿರ್ಮಾಣ ವಾದವು. ತಮ್ಮ ಬಿಡುವಿನ ಸಮಯದಲ್ಲಿ ಹೂ ತೋಟಗಳಲ್ಲಿ ಸಮಯ ಕಳೆಯುವ ಮಹಿಳೆಯರು ಉತ್ತಮ ಗಿಡಗಳನ್ನು ಪರಸ್ಪರ ಬದಲಾವಣೆ ಮಾಡಿಕೊಳ್ಳುತ್ತ ಪ್ರತಿ ಸದಸ್ಯರ ಮನೆಯಲ್ಲಿ ಹೂವಿನ ಗಿಡಗಳು ರಾರಾಜಿಸಿದವು.
ಇದರೊಂದಿಗೆ ತಂಡವು ಉತ್ತಮ ರೀತಿಯ ಬೆಳವಣಿಗೆ ಕಾಣುತ್ತಲೆ ಗ್ರೂಪಿನ ಸಂಸ್ಥಾಪಕಿ ಲೆಜೆಟ್ ಪರಿಸರ ಕಾಳಜಿಗೆ ಒತ್ತು ನೀಡಿದರು. ಮಹಿಳೆಯರು ಸೇರಿ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವ ಅವಶ್ಯಕತೆ ಬಗ್ಗೆ ಚರ್ಚೆ ನಡೆಸಿ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಪರಿಸರದಲ್ಲಿ ಹಲವು ಗಿಡಗಳನ್ನು ನೆಟ್ಟು ಅದನ್ನು ಸಂರಕ್ಷಿಸುವ ಪ್ರಯತ್ನ ಮುಂದುವರೆಸುತ್ತಲೇ ಬಂದಿದ್ದಾರೆ. ಈ ತಂಡವು ಪ್ರಸ್ತುತ ವರ್ಷದಲ್ಲಿ ಭತ್ತ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಇತ್ತೀಚೆಗೆ ಟಿ.ಶೆಟ್ಟಿಗೇರಿ ಗ್ರಾಮದ ತಡಿಯಂಗಡ ರಮೇಶ್ ಅವರಿಗೆ ಸೇರಿದ ಗದ್ದೆಯಲ್ಲಿ ನಾಟಿ ಕಾರ್ಯ ಆರಂಭಿಸಿ ಅಭಿಯಾನ ನಡೆಸಿದರು.
ತಂಡದ ೧೪ಕ್ಕೂ ಹೆಚ್ಚು ಮಹಿಳೆಯರು ಸೇರಿ ದಿನಪೂರ್ತಿ ಭತ್ತದ ಗದ್ದೆಯಲ್ಲಿ ನಾಟಿ ಕಾರ್ಯ ಆರಂಭಿಸಿ ಸಂಜೆಯ ವೇಳೆಗೆ ನಾಟಿ ಮುಗಿಸಿದರು.
ಆರಂಭದಲ್ಲಿ ಸುಮಾರು ೮೦ ಸದಸ್ಯರುಗಳು ಗ್ರೂಪಿನಲ್ಲಿ ಪ್ರಾರಂಭಿಸಿದ ಉದ್ಯಾನ, ಹೂ ಗಿಡಗಳ ಪೋಷಣೆ ನಂತರದ ದಿನಗ ಳಲ್ಲಿ ಅಂತರ್ಜಲ ಸಮಸ್ಯೆ ನೀಗಿಸುವ ಪ್ರಯತ್ನಕ್ಕೆ ಮುಂದಾದರೂ ಇದೀಗ ಅಂತರ್ಜಲವನ್ನು ಕಾಪಾಡುವ ನಿಟ್ಟಿನಲ್ಲಿ ಇದನ್ನೇ ಮುಂದಿಟ್ಟು ಕೊಂಡು ನಿರ್ಲಕ್ಷö್ಯಕ್ಕೆ ಒಳಗಾಗಿರುವ ಭತ್ತದ ಗದ್ದೆ ಕೃಷಿಗೆ ಉತ್ತೇಜನ ನೀಡಲು ಮುಂದಾಗಿದ್ದಾರೆ. ಆರಂಭದ ಪ್ರಯತ್ನದಲ್ಲಿ ಮಹಿಳೆಯರೆ ಭತ್ತದ ಗದ್ದೆಗೆ ಇಳಿದು ತಾವೇ ನಾಟಿ ಕಾರ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮುಂದಿನ ವರ್ಷದಲ್ಲಿ ಭತ್ತ ಕೃಷಿಯ ನಾಟಿ ಕಾರ್ಯ ವ್ಯಾಪ್ತಿ ಯನ್ನು ಇನ್ನಷ್ಟು ವಿಸ್ತರಿಸುವ ಚಿಂತನೆ ಇದೆ. ಸ್ಥಳೀಯ ಸ್ತಿçà ಶಕ್ತಿ ತಂಡ, ಮಹಿಳಾ ತಂಡ, ವಿವಿಧ ಸಂಘ ಸಂಸ್ಥೆಗಳು ಕಾಲೇಜು ಎನ್‌ಎಸ್‌ಎಸ್ ಸೇವಕರನ್ನು ಒಟ್ಟುಗೂಡಿಸಿ ಹಲವೆಡೆ ನಿರ್ಲಕ್ಷö್ಯಕ್ಕೆ ಒಳಗಾಗಿರುವ ಭತ್ತದ ಭೂಮಿಯನ್ನು ನಾಟಿ ಮಾಡುವ ಉದ್ದೇಶ ಇವರದ್ದಾಗಿದೆ. ಭತ್ತದ ನಾಟಿ ಮಾಡಿದ ಗದ್ದೆಯಲ್ಲಿ ಕೊಯ್ಲು ಕಾರ್ಯ ಕೂಡ ಮುಗಿಸಿಕೊಡುವ ಪ್ರಯತ್ನ ಈ ತಂಡದ್ದಾಗಿದೆ.
ಬೋAಡಿAಗ್ ಬ್ಲೂಮ್ಸ್ ಸಂಸ್ಥಾಪಕಿ ಬಾಚಮಾಡ ಲೆಜೆಟ್ ಮುಂದಾಳತ್ವದಲ್ಲಿ ಮಹಿಳಾ ಸದಸ್ಯರುಗಳಾದ ಆದೇಂಗಡ ತನುಜ ಅಚ್ಚಯ್ಯ, ತಡಿಯಂಗಡ ಸೌಮ್ಯ ಕರುಂಬಯ್ಯ, ಕೊಂಙAಡ ನಳಿನಾ ಅಪ್ಪಯ್ಯ, ಅಜ್ಜಮಾಡ ಪ್ರಮೀಳಾ ಕರುಂಬಯ್ಯ, ಬೊಳ್ಳಜಿರ ಸುಶೀಲ ಅಶೋಕ್, ಮಂಡೇಪAಡ ಬೀನಾ ಶ್ಯಾಂ, ತಡಿಯಂಗಡ ಸಭಿತಾ ರಮೇಶ್, ಕೋಳೆರ ಜಾನ್ಸಿ ಮೊಣ್ಣಯ್ಯ, ಬಾಚಮಾಡ ನವಿತ ಪೂಣಚ್ಚ, ಚಂದುರ ಅನಿಲ, ತೀತಿರ ರೀನಾ ಪಾರ್ಥ, ಪುಲಿಯಂಡ ರೂಪ ಗಣಪತಿ, ತಡಿಯಂಗಡ ಸೌಮ್ಯ ಶಮ್ಮಿ, ಭತ್ತದ ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ತಮ್ಮನ್ನು ದಿನಪೂರ್ತಿ ತೊಡಗಿಸಿಕೊಂಡಿದ್ದರು.
-ಹೆಚ್.ಕೆ.ಜಗದೀಶ್