ಕಡಂಗ, ಆ. ೧೩: ಕಡಂಗ ಪಟ್ಟಣದಲ್ಲಿ ೭೭ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಆಮಿಲಾ ಸಂಘಟನೆ ವತಿಯಿಂದ ಸ್ವಚ್ಛತಾ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವಿಜಯ ಪ್ರೌಢಶಾಲೆಯಿಂದ ಪಟ್ಟಣದ ಕೆಡಿಸಿಸಿ ಬ್ಯಾಂಕ್‌ನವರೆಗೆ ರಸ್ತೆಯ ಬದಿಗಳಲ್ಲಿದ್ದ ಕಸ, ಕಡ್ಡಿ, ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಾಟಲ್ ಹಾಗೂ ರಸ್ತೆಯ ಬದಿಯಲ್ಲಿದ್ದ ಕಾಡುಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಸುಮಾರು ೫ ಕ್ಕೂ ಹೆಚ್ಚು ಟ್ರಾö್ಯಕ್ಟರ್‌ನಲ್ಲಿ ಕಸವನ್ನು ತುಂಬಿಸಿ ವಿಲೇವಾರಿ ಮಾಡಲಾಯಿತು. ಕೊಡಗು ಜಿಲ್ಲಾ ಆಮಿಲಾ ಅಧ್ಯಕ್ಷ ಹಾರಿಸ್ ಶುಚಿತ್ವದ ನೇತೃತ್ವ ವಹಿಸಿ ಮಾತನಾಡಿದರು. ಸ್ಥಳೀಯ ನರಿಯಂದಡ ಗ್ರಾ.ಪಂ. ಸದಸ್ಯ ಸುಬೈರ್, ಮಸೀದಿಯ ಪ್ರಧಾನ ಕಾರ್ಯದರ್ಶಿ, ರಾಶಿದ್, ಮೊಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಕುಂಞ ಅಬ್ದುಲ್ಲ, ಬದ್ರಿಯಾ ಮಸೀದಿಯ ಅಧ್ಯಕ್ಷ ಅಬ್ದುಲ್ ರೆಹಮಾನ್, ಕೆಡಿಎಸ್ ಮುಸ್ಲಿಂ ಯೂತ್ ಚಾರಿಟಿಯ ಅಧ್ಯಕ್ಷ ಜುನೈದ್ ಸಿ.ಎ., ಎಸ್‌ವೈಎಸ್ ಸಂಘಟನೆಯ ಕಡಂಗ ಅಧ್ಯಕ್ಷ ಸಿ.ಎ.ಅಶ್ರಫ್, ಎಸ್‌ಕೆಎಸ್‌ಎಸ್‌ಎಫ್, ಎಸ್‌ಎಸ್‌ಎಫ್, ಕೆಡಿಎಸ್ ಮುಸ್ಲಿಂ ಯೂತ್ ಚಾರಿಟಿ ಹಾಗೂ ಮೊಯದ್ದೀನ್ ಜುಮಾ ಮಸೀದಿ, ಬದ್ರಿಯಾ ಸುನ್ನೀ ಮಸೀದಿಯ ಪದಾಧಿಕಾರಿಗಳು, ಗ್ರಾಮಸ್ಥರು, ಉಪಸ್ಥಿತರಿದ್ದರು.