ವೀರಾಜಪೇಟೆ, ಆ. ೧೩: ದೇವಣಗೇರಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎರಡನೇ ಬಾರಿಗೆ ಮುಂದಿನ ಐದು ವರ್ಷಕ್ಕೆ ಅಧ್ಯಕ್ಷರಾಗಿ ಮೂಕೊಂಡ ಶಶಿ ಸುಬ್ರಮಣಿ, ಮುಂಡಚಾಡಿರ ನಂದಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜುಲೈ ೩೦ ರಂದು ಚುನಾವಣೆ ನಡೆದಿತ್ತು. ಜಿಲ್ಲಾ ಉಪನಿಬಂಧಕರ ಕಚೇರಿ ಅಧಿಕಾರಿ ಪಿ.ಬಿ. ಮೋಹನ್, ಚೊಟ್ಟೆಯಂಡ ಉದಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಶಿ, ಸಂಘವು ದೇವಣಗೇರಿ, ಚಂಬೆಬೆಳ್ಳೂರು, ಮೈತಾಡಿ ಗ್ರಾಮಗಳ ಕಾರ್ಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

೧೨೪೮ ಸದಸ್ಯರಿದ್ದು ಕಳೆದ ೧೦ ವರ್ಷದಿಂದ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ಸದಸ್ಯರುಗಳಿಗೆ ಗೊಬ್ಬರ ಸಾಲ ಸೇರಿದಂತೆ ಇತರ ಎಲ್ಲಾ ರೀತಿಯ ಸಾ¯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಸಂಘವು ಲಾಭದಲ್ಲಿದೆ. ಈ ಸಾಲಿನಿಂದ ಸದಸ್ಯರಿಗೆ ಅನುಕೂಲವಾಗಲೆಂದು ಕಾಫಿ ಸಂಸ್ಕೃರಣಾ ಕೇಂದ್ರ ಹಾಗೂ ಕಾಳುಮೆಣಸು ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸಿ ಅದರ ಆಧಾರದ ಮೇಲೆ ಸಾಲ ಸೌಲಭ್ಯಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳೀದರು.

ನಿರ್ದೇಶಕರುಗಳಾದ ಚಪ್ಪಂಡ ಹರೀಶ್ ಉತ್ತಯ್ಯ, ಒಕ್ಕಲಿಗರ ಸುರೇಶ್, ಕೊಳೇರ ರನ್ನಾ ದೇವಯ್ಯ, ಐಚೇಟಿರ ಗೌತಮ್ ಚಂಗಪ್ಪ, ಐಚಂಡ ಈರಪ್ಪ, ಚಾರಿಮಂಡ ಪೂಣಚ್ಚ, ಬಿ.ಕೆ. ರಮೇಶ್, ಮಂಡೇಪAಡ ಸುಮಿತ್ರ, ಅಲ್ಲಪಂಡ ತಾರ, ಹೆಚ್.ಟಿ ರಂಜನ್ ಉಪಸ್ಥಿತರಿದ್ದರು.