ಗೋಣಿಕೊಪ್ಪ ವರದಿ, ಆ. ೧೨: ಬೆಂಗಳೂರು ಬಿ.ಎಂ. ಇಂಗ್ಲೀಷ್ ಶಾಲೆಯಲ್ಲಿ ಆಯೋಜಿಸಿದ್ದ ಸಿಐಎಸ್‌ಸಿಇ ರಾಜ್ಯ ವಲಯ ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪದ ಕಾಲ್ಸ್ ಮತ್ತು ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಸಮಗ್ರ ಚಾಂಪಿಯನ್‌ಶಿಪ್ ಪಡೆದುಕೊಂಡಿದೆ. ರೈಫಲ್ ಮತ್ತು ಪಿಸ್ತೂಲ್ ವಿಭಾಗದ ಪೀಪ್ ಮತ್ತು ಓಪನ್ ಸೈಟ್ ಶೂಟಿಂಗ್ ಮೂಲಕ ೧೨ ಪದಕ ಸಾಧನೆ ಮಾಡಿದೆ.

ವೈಯಕ್ತಿಕ ವಿಭಾಗ: ೧೭ ವಯೋಮಿತಿಯ ಪೀಪ್ ಸೈಟ್ ವಿಭಾಗದಲ್ಲಿ ಆಂಚಲ್ ಗಂಗಾ ಕಂಚು, ಪಿಸ್ತೂಲ್ ವಿಭಾಗದಲ್ಲಿ ನಿಶಾಂತ್ ಪಿ ಜಮದಗ್ನಿ ಚಿನ್ನ, ಕುಶಾಲ್ ಮಹೇಶ್‌ಗೆ ಕಂಚು, ಓಪನ್ ಸೈಟ್ ವಿಭಾಗದಲ್ಲಿ ಪಿ. ಎಸ್. ಹೇಮಂತ್ ಬೆಳ್ಳಿ, ತನೀಶ್ ತಿಮ್ಮಯ್ಯ ಕಂಚು, ಪ್ರಜ್ಞಾ ಗೋಪಿಕೃಷ್ಣ ಬೆಳ್ಳಿ, ೧೯ ವಯೋಮಿತಿಯ ಪೀಪ್ ಸೈಟ್ ವಿಭಾಗದಲ್ಲಿ ನಿಶ್ಮಾ ನೀಲಮ್ಮ ಬೆಳ್ಳಿ, ವಿದ್ಯಾ ಅರುಣ್‌ಗೆ ಕಂಚು, ಎಸ್. ಗಿರಿವಾಸ್ ಚಿನ್ನ, ಒಪನ್ ಸೈಟ್ ವಿಭಾಗದಲ್ಲಿ ಆರ್. ಮನಸ್ವಿ ಚಿನ್ನ, ಟಿ. ಎಂ. ವಂಶಿ ಬೆಳ್ಳಿ, ೧೪ ವಯೋಮಿತಿಯ ಓಪನ್ ಸೈಟ್ ವಿಭಾಗದಲ್ಲಿ ಕೆ. ಎಂ. ಆದಿತಿ ಮುತ್ತಮ್ಮ ಬೆಳ್ಳಿ ಪದಕ ದೊರಕಿದೆ.

ಗುಂಪು ಸ್ಪರ್ಧೆ: ಪೀಪ್‌ಸೈಟ್ ೧೪ ವಯೋಮಿತಿಯ ಬಾಲಕರ ತಂಡದಲ್ಲಿ ಡಿ. ಸಮರ್ಥ್, ಎ. ಬಿ. ಪೊನ್ನಪ್ಪ, ಹಿತೇಶ್ ರೆಡ್ಡಿ ಪ್ರಥಮ, ೧೭ ವಯೋಮಿತಿಯ ಬಾಲಕರಲ್ಲಿ ಎಸ್. ಅಭಿಷೇಕ್, ಬಿದ್ದಪ್ಪ ನಯನ, ಕೃಷ್ ಗಣಪತಿ ತಂಡ ಪ್ರಥಮ, ಬಾಲಕಿಯರಲ್ಲಿ ಆಂಚಲ್ ಗಂಗಾ, ವಿಹಾನಾ ಪೊನ್ನಮ್ಮ, ಅಕ್ಷಯಾ ಪ್ರಸಾದ್ ತಂಡಕ್ಕೆ ಪ್ರಥಮ, ೧೯ ವಯೋಮಿತಿಯ ಬಾಲಕಿಯರಲ್ಲಿ ನಿಶ್ಮಾ ನೀಲಮ್ಮ, ಪಿ.ಪಿ. ಮುತ್ತಮ್ಮ, ವಿದ್ಯಾ ಅರುಣ್ ಪ್ರಥಮ ಸ್ಥಾನ ಗಿಟ್ಟಿಕೊಂಡಿದ್ದಾರೆ. ಓಪನ್ ಸೈಟ್ ವಿಭಾಗದ ೧೪ ವಯೋಮಿತಿಯ ಬಾಲಕರಲ್ಲಿ ಸ್ಮರಣ್ ಮಂದಣ್ಣ, ವೇದಾಂತ್ ಕಾರ್ಯಪ್ಪ, ಶೌರ್ಯ ನಾಯ್ಡು ಪ್ರಥಮ, ಬಾಲಕಿಯರಲ್ಲಿ ಕೆ. ಎಂ. ಅಧಿತಿ ಮುತ್ತಮ್ಮ, ವಿವಿಕ್ತಾ ಲಿಕಿತ್, ಶಣೈಕಾ ಸಚಿನ್ ತಂಡ ಪ್ರಥಮ, ೧೭ ವಯೋಮಿತಿಯ ಬಾಲಕರಲ್ಲಿ ಪಿ. ಎಸ್. ಹೇಮಂತ್, ತನೀಶ್ ತಿಮ್ಮಯ್ಯ, ಶಿಶಿರ್ ಪೊನ್ನಪ್ಪ, ಪ್ರಥಮ, ಬಾಲಕಿಯರಲ್ಲಿ ಮಧುಶ್ರೀ, ಪ್ರಜ್ಞಾ ಗೋಪಿಕೃಷ್ಣ, ಪ್ರಾಪ್ತಿ ಪೂವಮ್ಮ ಪ್ರಥಮ, ೧೯ ವಯೋಮಿತಿಯ ಬಾಲಕರಲ್ಲಿ ಗಗನ್ ಗೌಡ, ಕೆ.ವಿ. ಅಭಿಷೇಕ್, ಆಯುಷ್ ಪೊನ್ನಣ್ಣ ದ್ವಿತೀಯ, ಬಾಲಕಿಯರಲ್ಲಿ ಆರ್. ಮನಸ್ವಿ, ಪಿ. ವೈಭವಿ, ಟಿ. ಎಂ. ವಂಶಿ ಪ್ರಥಮ ಸ್ಥಾನ ಪಡೆದುಕೊಂಡರು.