ಮರಗೋಡು ಗ್ರಾ.ಪಂ. ಅವಿರೋಧ ಆಯ್ಕೆ
ಮರಗೋಡು: ಮರಗೋಡು ಗ್ರಾಮ ಪಂಚಾಯಿತಿಯ ೨ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬಿಸಿಎಂಎ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದ್ದರಿಂದ ಬಿಜೆಪಿ ಬೆಂಬಲಿತ ಚಿತ್ರ ಬಿ.ಪಿ. ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿದ್ದು ಉಪಾಧ್ಯಕ್ಷೆಯಾಗಿ ಕವಿತಾ ಅವಿರೋಧವಾಗಿ ಪ್ರತಿಸ್ಪರ್ಧಿ ಇಲ್ಲದೆ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ಎಸ್.ಎಲ್. ಕಾರ್ಯನಿರ್ವಹಿಸಿದರು. ಈ ಸಂದರ್ಭ ಪಂಚಾಯಿತಿ ಆಡಳಿತ ಮಂಡಳಿಯ ಸದಸ್ಯರು, ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಕಾರ್ಯದರ್ಶಿ ತೇಜಸ್, ಸಿಬ್ಬಂದಿ ವರ್ಗ ಇನ್ನಿತರ ಪ್ರಮುಖರು ಹಾಜರಿದ್ದರು.
ಮಾದಾಪುರ ಗ್ರಾ.ಪಂ. ಅಧ್ಯಕ್ಷರಾಗಿ ಬಿದ್ದಪ್ಪ
ಸೋಮವಾರಪೇಟೆ: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷರಾಗಿ ಬಿದ್ದಪ್ಪ ಹಾಗೂ ಉಪಾಧ್ಯಕ್ಷರಾಗಿ ವಿ.ಆರ್. ಸುರೇಶ್ ಅವರುಗಳು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಕಾರ್ಯನಿರ್ವಹಿಸಿದರು. ಪಿಡಿಓ ಸುಮೇಶ್ ಉಪಸ್ಥಿತರಿದ್ದರು.
ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ
ಭಾಗಮಂಡಲ: ಇಲ್ಲಿನ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಬಿ.ಜಿ.ಪಿ. ಬೆಂಬಲಿತ ಅಧ್ಯಕ್ಷರಾಗಿ ಕಾಳನ ರವಿ ಹಾಗೂ ಉಪಾಧ್ಯಕ್ಷರಾಗಿ ಗಂಗಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ರಿಯಾಜ್ ಅಹಮ್ಮದ್ ಚುನಾವಣಾ ಅಧಿಕಾರಿ ಯಾಗಿ ಕಾರ್ಯನಿರ್ವಹಿಸಿದ್ದು, ಗ್ರಾಮ ಪಂಚಾಯಿತಿಯ ಎಲ್ಲಾ ೧೧ ಜನ ಸದಸ್ಯರುಗಳು ಹಾಜರಿದ್ದರು.
ಹೊದ್ದೂರು ಗ್ರಾ.ಪಂ. ಅಧ್ಯಕ್ಷರಾಗಿ ಹಂಸ ಆಯ್ಕೆ
ಹೊದ್ದೂರು: ಹೊದ್ದೂರು ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಹೆಚ್.ಎ. ಹಂಸ ಅಧ್ಯಕ್ಷರಾಗಿ, ಅನುರಾಧ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಬಿ.ಸಿ.ಎಂ. ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಡಿಕೇರಿ ಘಟಕದ ಪರಿಸರ ಅಧಿಕಾರಿ ರಘುರಾಮನ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಪಿ.ಡಿ.ಓ. ಅಬ್ದುಲ್ಲಾ, ಕಾರ್ಯದರ್ಶಿ ಚಂದ್ರಶೇಖರ್, ಸದಸ್ಯರುಗಳಾದ ಕುಸುಮಾವತಿ, ವಾಂಚೀರ ಅಜಯ್, ಹೆಚ್. ಮೊಣ್ಣಪ್ಪ, ಲಕ್ಷಿö್ಮ, ಕೆ.ಆರ್. ಅನಿತಾ, ಚೌರೀರಿ ಅನಿತಾ, ಮೊಯ್ದು, ಮಾಹಿನೆ, ಹಮೀದ್, ಕಡ್ಲೇರ ಟೈನಿ, ಪಾರ್ವತಿ, ಸರಸು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೋಹನ್, ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಕೋಚನ ಹರಿಪ್ರಸಾದ್ ಮುಂತಾದವರು ಭಾಗವಹಿಸಿದ್ದರು.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಆಯ್ಕೆ
ಗುಡ್ಡೆಹೊಸೂರು: ಇಲ್ಲಿನ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಯ ಅಧ್ಯಕ್ಷರಾಗಿ ರುಕ್ಮಿಣಿ, ಉಪಾಧ್ಯಕ್ಷರಾಗಿ ಎಂ.ಆರ್. ಮಾದಪ್ಪ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷೆ ಸ್ಥಾನಕ್ಕೆ ರುಕ್ಮಿಣಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಲಕ್ಷö್ಮಣ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಎರಡು ಮತಗಳ ಅಂತರದಲ್ಲಿ ಬಿ.ಜೆ.ಪಿ. ಬೆಂಬಲಿತ ಎಂ.ಆರ್. ಮಾದಪ್ಪ ಜಯಶೀಲರಾದರು.
ಚುನಾವಣಾಧಿಕಾರಿಯಾಗಿ ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಕಾರ್ಯನಿರ್ವಹಿಸಿದರು. ಪಿ.ಡಿ.ಓ. ಶ್ಯಾಂತಮ್ಮಯ್ಯ ಮತ್ತು ಕಾರ್ಯದರ್ಶಿ ಕುಮಾರಸ್ವಾಮಿ ಹಾಜರಿದ್ದರು. ಈ ಸಂದರ್ಭ ಭಾರತೀಯ ಜನತಾ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಇಂದಿರಾ ರಮೇಶ್, ಬಿ.ಜೆ.ಪಿ. ಜಿಲ್ಲಾ ಕಾರ್ಯದರ್ಶಿ ಪುಷ್ಪ ನಾಗೇಶ್ ಬಿ.ಜೆ.ಪಿ. ನಗರ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಮತ್ತು ಶಕ್ತಿ ಕೇಂದ್ರದ ಪ್ರಮುಖರಾದ ಕುಡೆಕ್ಕಲ್ ನಿತ್ಯಾನಂದ, ಪ್ರವೀಣ್, ಸದಸ್ಯರು, ಕಾರ್ಯಕರ್ತರು ಮತ್ತು ಪಕ್ಷದ ಪ್ರಮುಖರು ಹಾಜರಿದ್ದರು.
ನಿಟ್ಟೂರು ಗ್ರಾ.ಪಂ.ಗೆ ಅವಿರೋಧ ಆಯ್ಕೆ
ನಿಟ್ಟೂರು ಗ್ರಾ.ಪಂ.ಗೆ ಅವಿರೋಧ ಆಯ್ಕೆಗಳಾದ ಮಾಪಂಗಡ ಯಮುನಾ ಚಂಗಪ್ಪ, ಅಳಮೇಯಂಗಡ ಬೋಸ್ ಮಂದಣ್ಣ, ಮಾಚಂಗಡ ಸುಜಾ ಕುಶಾಲಪ್ಪ, ಮೇಚಂಡ ವಾಸು ಸೋಮಯ್ಯ, ಮುಕ್ಕಾಟೀರ ಸೋಮಯ್ಯ, ಕೊಟ್ಟಂಗಡ ಮಧು ಸೇರಿದಂತೆ ಇನ್ನಿತರ ಪ್ರಮುಖರು ಸಂಭ್ರಮಾಚರಣೆ ನಡೆಸಿದರು.
೯ ಸಂಖ್ಯಾ ಬಲವುಳ್ಳ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರುಗಳಾದ ಅಯ್ಯಪ್ಪ, ಕವಿತ, ಮುತ್ತಣ್ಣ, ಪಣಿಯರ ರಾಜು, ಎ.ಆರ್. ಪವಿತ, ಜೆ.ಎಸ್. ಅಪ್ಪಣ್ಣ, ಸುಮತಿ, ಎ. ಅಮ್ಮಯ್ಯ, ಅಮ್ಮುಣಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳಾದ ಸಂತೋಷ್, ಸಿಬ್ಬಂದಿಗಳು ಸೇರಿದಂತೆ ಬಾಳೆಲೆ ಉಪ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಾದ ಎ.ಎಸ್.ಐ. ಪಿ.ಬಿ. ಸುಂದರೇಶ್, ಮಹದೇಶ್ವರ ಸ್ವಾಮಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.ರಾಜು, ಎ.ಆರ್. ಪವಿತ, ಜೆ.ಎಸ್. ಅಪ್ಪಣ್ಣ, ಸುಮತಿ, ಎ. ಅಮ್ಮಯ್ಯ, ಅಮ್ಮುಣಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳಾದ ಸಂತೋಷ್, ಸಿಬ್ಬಂದಿಗಳು ಸೇರಿದಂತೆ ಬಾಳೆಲೆ ಉಪ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಾದ ಎ.ಎಸ್.ಐ. ಪಿ.ಬಿ. ಸುಂದರೇಶ್, ಮಹದೇಶ್ವರ ಸ್ವಾಮಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.ಭವಾನಿ ಅಧ್ಯಕ್ಷರಾಗಿ ಆಯ್ಕೆಸೋಮವಾರಪೇಟೆ: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಭವಾನಿ, ಉಪಾಧ್ಯಕ್ಷರಾಗಿ ಆರತಿ ಅವರುಗಳು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸ್ವಾಮಿ ಅವರು ಕಾರ್ಯನಿರ್ವಹಿಸಿದರು. ಪಿಡಿಓ ಮಂಜುಳಾ ಉಪಸ್ಥಿತರಿದ್ದರು.
ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳು, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಪ್ರಮುಖರಾದ ಶರತ್ ಚಂದ್ರ, ಕಲ್ಕಂದೂರು ಪ್ರಕಾಶ್, ವನಗೂರುಕೊಪ್ಪ ಉಮೇಶ್, ಕೆ.ಕೆ. ಸುಧಾಕರ್, ಡಿ.ಎ. ಪರಮೇಶ್, ಸಿ.ಪಿ. ವಿಜಯಕುಮಾರ್, ಡಿ.ಎಸ್. ಕುಶಾಲಪ್ಪ, ಕೂತಿ ದಿವಾಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆ
ಸೋಮವಾರಪೇಟೆ: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇದೇ ಪ್ರಥಮ ಬಾರಿಗೆ ಎಂಬAತೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಒಟ್ಟು ೯ ಸದಸ್ಯ ಬಲದ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರು ೪ ಸ್ಥಾನಗಳನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪ್ರಮೀಳಾ ಅವರು ೫ ಮತಗಳನ್ನು ಗಳಿಸಿ ಜಯಶೀಲರಾದರು. ಕಾಂಗ್ರೆಸ್ನ ಗೋಪಾಲಕೃಷ್ಣ ಅವರು ೪ ಮತಗಳನ್ನು ಪಡೆದರು. ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ರಶೀದಾ ೫ ಮತ ಗಳಿಸಿದರೆ, ಬಿಜೆಪಿ ಬೆಂಬಲಿತ ವೀಣಾ ೪ ಮತ ಗಳಿಸಿದರು. ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಿಂದು, ಉಪಾಧ್ಯಕ್ಷರಾಗಿ ರಶೀದಾ ಕರ್ತವ್ಯ ನಿರ್ವಹಿಸಿದ್ದರು.
ಇದೇ ಪ್ರಥಮ ಬಾರಿಗೆ ದೊಡ್ಡಮಳ್ತೆ ಗ್ರಾ.ಪಂ. ಅಧಿಕಾರಕ್ಕೆ ಬಿಜೆಪಿ ಬಂದಿದ್ದು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ರುದ್ರಪ್ಪ ಲೋಹಿತ್, ಮಹೇಶ್ ತಿಮ್ಮಯ್ಯ, ಹೆಚ್.ಕೆ. ಮಾದಪ್ಪ, ಆದಿತ್ಯ, ದರ್ಶನ್ ಜೋಯಪ್ಪ, ಶ್ರೀಕಾಂತ್, ರೂಪಾ ಸತೀಶ್, ಯೋಗೇಶ್, ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬೆಸೂರು ಗ್ರಾಮ ಪಂಚಾಯಿತಿ ಆಡಳಿತ ಕಾಂಗ್ರೆಸ್ ತೆಕ್ಕೆಗೆ
ಕೊಡ್ಲಿಪೇಟೆ: ಸಮೀಪದ ಬೆಸೂರು ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಕಮಲಮ್ಮ ಅಧ್ಯಕ್ಷರಾಗಿ ಹಾಗೂ ಹರೀಶ್ ಡಿ.ಆರ್. ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು ೧೩ ಮಂದಿ ಸದಸ್ಯರ ಪೈಕಿ ೧೨ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಚುನಾವಣಾಧಿಕಾರಿಗಳಾಗಿ ತಾಲೂಕು ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಸಹಾಯಕರಾಗಿ ಶಿಕ್ಷಣ ಇಲಾಖೆಯ ಜಾನ್ ಡಿಸೋಜಾ ಕಾರ್ಯ ನಿರ್ವಹಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಲೆಕ್ಕ ಸಹಾಯಕ ಆನಂದ್ ಉಪಸ್ಥಿತರಿದ್ದರು.
ಮೊದಲ ಅವಧಿಯಲ್ಲಿ ಬಿಜೆಪಿ ತೆಕ್ಕೆಯಲ್ಲಿದ್ದ ಆಡಳಿತ ಎರಡನೇ ಅವಧಿಯಲ್ಲಿ ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ಸಂದರ್ಭ ಪಕ್ಷದ ವಲಯಾಧ್ಯಕ್ಷ ಮಲ್ಲೇಶ್ ಬೆಸೂರು, ಔರಂಗಜೇಬ್ ಕೊಡ್ಲಿಪೇಟೆ, ಸುಲೈಮಾನ್ ಬ್ಯಾಡಗೊಟ್ಟ, ಪ್ರಮುಖರಾದ ಕೆ.ಸಿ. ಪ್ರಸನ್ನ, ಸಾಬ್ಜಾನ್ ನೀರುಗುಂದ, ಕೆ.ಆರ್. ಚಂದ್ರಶೇಖರ್, ವೇದುಕುಮಾರ್, ಪ್ರೇಮ್ ಕುಮಾರ್, ತೇಜುಕುಮಾರ್ ಮೋಹನ್ ಮೌರ್ಯ, ವಿರೂಪಾಕ್ಷ, ಹಾಲಪ್ಪ, ಗಿರಿಜಾ ಕರುಣಾಕರ್, ಧರ್ಮಣ್ಣ, ನಾಗೇಶ್, ರಫೀಕ್, ಬೂತ್ ಸಮಿತಿ ಅಧ್ಯಕ್ಷರುಗಳು, ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ಬ್ಯಾಡಗೊಟ್ಟ ಗ್ರಾ.ಪಂ.ಗೆ ಆಯ್ಕೆ
ಮುಳ್ಳೂರು: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ. ಆಡಳಿತ ಮಂಡಳಿ ೨ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಎA. ಮಹಮ್ಮದ್ ಹನೀಫ್ ಅಧ್ಯಕ್ಷರಾಗಿ, ಬಿಜೆಪಿ ಬೆಂಬಲಿತ ಅಭ್ಯರ್ಥಿ ದಾಕ್ಷಾಯಿಣಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ಮಹಮ್ಮದ್ ಹನೀಫ್ ಪರಿಶಿಷ್ಟ ವರ್ಗ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯೆ ದಾಕ್ಷಾಯಿಣಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾ ಅಧಿಕಾರಿ ಅವಿರೋಧ ವಾಗಿ ಆಯ್ಕೆ ಮಾಡಿದರು. ಗ್ರಾ.ಪಂ. ಆಡಳಿತ ಮಂಡಳಿಯಲ್ಲಿ ಒಟ್ಟು ೯ ಮಂದಿ ಸದಸ್ಯರಿದ್ದು ಈ ಪೈಕಿ ಸದಸ್ಯರಾದ ದಿನೇಶ್ಕುಮಾರ್, ಮೋಕ್ಷಿತ್ರಾಜ್ ಚುನಾವಣೆ ಪ್ರಕ್ರಿಯೆಯಲ್ಲಿ ಗೈರು ಹಾಜರಾಗಿದ್ದರು.
ಅಕ್ಷರ ದಾಸೋಹ ಸಹ ನಿರ್ದೇಶಕ ಕಾಳ ನಾಯಕ್ ಚುನಾವಣಾಧಿ ಕಾರಿಯಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭ ಪಿಡಿಓ ಗಿರೀಶ್, ಕಾರ್ಯದರ್ಶಿ ಅಶ್ವಥ್, ಕಾಂಗ್ರೆಸ್ ಪ್ರಮುಖರು ಪಾಲ್ಗೊಂಡಿದ್ದರು.
ಬಿಗಿ ಬಂದೋಬಸ್ತ್ ನಡುವೆ ಚುನಾವಣೆ
ಮುಳ್ಳೂರು: ಸಮೀಪದ ದುಂಡಳ್ಳಿ ಗ್ರಾ.ಪಂ. ಆಡಳಿತ ಮಂಡಳಿ ೨ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕಾಗಿ ಶುಕ್ರವಾರ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಚುನಾವಣೆಯನ್ನು ನಡೆಸಲಾಯಿತು. ದುಂಡಳ್ಳಿ ಗ್ರಾ.ಪಂ. ಆಡಳಿತ ಮಂಡಳಿಯಲ್ಲಿ ೧೩ ಮಂದಿ ಸದಸ್ಯರಿದ್ದಾರೆ. ಹಿಂದಿನ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿಯಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಪೂರ್ಣಿಮಾ ಕಿರಣ್ ಕಳೆದ ಎರಡೂವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ೨ನೇ ಅವಧಿಯ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಮೀಸಲು ಸ್ಥಾನದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂಎ ಮೀಸಲು ಸ್ಥಾನದಿಂದ ಅಭ್ಯರ್ಥಿಗಳು ಸ್ಪರ್ಧಿಸುವಂತೆ ಸರಕಾರ ಅಧಿಸೂಚನೆ ಹೊರಡಿಸಲಾಗಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರ ಸ್ಥಾನಕ್ಕೆ ಗೋಪಿಕಾ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಗೋಪಿಕಾ ಅವರನ್ನು ಉಪಾಧ್ಯಕ್ಷರಾಗಿ ಘೋಷಿಸಿದರು.
ಅಧ್ಯಕ್ಷರ ಸ್ಥಾನಕ್ಕೆ ಪರಿಶಿಷ್ಟ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸತ್ಯಾವತಿ ದೇವರಾಜ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಕಾಂತರಾಜ್ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಚುನಾವಣೆ ಪ್ರಕ್ರಿಯೆಯಲ್ಲಿ ನಡೆಸಲಾಯಿತು. ಸದಸ್ಯರು ಮತದಾನ ಮಾಡಿದ ನಂತರ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಸತ್ಯವತಿ ದೇವರಾಜ್ (೮), ಕಾಂತರಾಜ್ (೫) ಮತಗಳನ್ನು ಪಡೆದರು ೩ ಮತಗಳ ಅಂತರದಲ್ಲಿ ಸತ್ಯಾವತಿ ದೇವರಾಜ್ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದರು.
ಹಿಂದಿನ ಅವಧಿಯಲ್ಲಿ ಬಿಜೆಪಿ ಬೆಂಬಲಿತವಾಗಿ ಆಡಳಿತ ನಡೆಸುತ್ತಿದ್ದ ಗ್ರಾ.ಪಂ.ಗೆ ಮತ್ತೆ ೨ನೇ ಅವಧಿಗೆ ಬಿಜೆಪಿ ಬೆಂಬಲಿತ ಸದಸ್ಯರು ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸೆಳೆಯಬಹುದು ಹಾಗೂ ಚುನಾವಣೆ ಸಂದರ್ಭ ಎರಡೂ ಪಕ್ಷದ ಬೆಂಬಲಿತರಿAದ ಗಲಾಟೆ ಆಗಬಾರದೆಂಬ ಮುಂಜಾಗ್ರತೆಗಾಗಿ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಚುನಾವಣೆ ನಡೆಸಲಾಯಿತು. ಗ್ರಾ.ಪಂ,ಯ ಸದಸ್ಯರುಗಳು, ಕಚೇರಿ ಸಿಬ್ಬಂದಿ, ಸಂಬAಧಿಸಿದ ಅಧಿಕಾರಿಗಳನ್ನು ಹೊರತುಪಡಿಸಿದಂತೆ ಬೇರೆ ಯಾರೂ ಸಹ ಗ್ರಾ.ಪಂ. ಕಚೇರಿಗೆ ಬಾರದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಜಿಲ್ಲಾ ಮೀಸಲು ಪಡೆಯ ೧ ತುಕಡಿ, ಶನಿವಾರಸಂತೆ ಠಾಣೆಯ ಪೊಲೀಸರಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸೋಮವಾರಪೇಟೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬದಾಮಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು ಪಿಡಿಓ ರಾಜೇಂದ್ರ ಹಾಜರಿದ್ದರು. ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಲೋಕೇಶ್, ಶರತ್ ಶೇಖರ್, ಎನ್.ಕೆ. ಅಪ್ಪಸ್ವಾಮಿ, ಸತೀಶ್, ಮಹಮ್ಮದ್ ಖನ್ನಾ, ಪುಟ್ಟಸ್ವಾಮಿ, ಆದಿಲ್ ಪಾಷ, ಜಿ.ಎಂ. ಕಾಂತರಾಜ್, ಆದಿತ್ಯ, ಪಾಲಾಕ್ಷ, ಜನಾರ್ಧನ್ ಮುಂತಾದವರು ಇದ್ದರು.
ಎಮ್ಮೆಮಾಡು ಗ್ರಾ.ಪಂ. ಉಪಾಧ್ಯಕ್ಷೆಯಾಗಿ ಐಸಮ್ಮ
ಚೆಯ್ಯಂಡಾಣೆ: ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎರಡು ದಿನದ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಗ್ರಾಮ ಪಂಚಾಯಿತಿ ಸದಸ್ಯೆ ಚೆಂಬರAಡ ಐಸಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಘೋಷಣೆಯಾಗಿರುವ ಮೀಸಲಾತಿಯ ಸದಸ್ಯ ಇಲ್ಲದ ಕಾರಣ ಅಧ್ಯಕ್ಷ ಸ್ಥಾನ ಘೋಷಣೆಯಾಗಿಲ್ಲ. ಚುನಾವಣಾಧಿ ಕಾರಿಯಾಗಿ ಮಡಿಕೇರಿ ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್, ಕಂದಾಯ ಪರಿವೀಕ್ಷಕ ರವಿಕುಮಾರ್ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಯಿಷಾ, ಸದಸ್ಯರಾದ ಯೂಸುಫ್, ಇಸ್ಮಾಯಿಲ್ ಚಕ್ಕೇರ, ಗಫೂರ್, ಮಾಹಿನ್ ಕನ್ನಡಿಯಂಡ, ಅಪ್ಸತ್, ಗ್ರಾಮದ ಹಿರಿಯರಾದ ಮೊಹಮ್ಮದ್ ಐ.ಹೆಚ್., ವಲಯ ಕಾಂಗ್ರೆಸ್ ಅಧ್ಯಕ್ಷ ಹಂಸ ಪಡಿಯಾಣಿ, ಕಾರ್ಯದರ್ಶಿ ಆಸೀಫ್, ಮುಖಂಡರಾದ ಇಬ್ರಾಹಿಂ ಹಾಜಿ, ಹನೀಫ, ಹಂಸ ಮತ್ತಿತರರು ಉಪಸ್ಥಿತರಿದ್ದರು.
ಹೊಸ್ಕೇರಿ - ಅವಿರೋಧ ಆಯ್ಕೆ
ಸಿದ್ದಾಪುರ: ಹೊಸ್ಕೇರಿ ಗ್ರಾ.ಪಂ. ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಡುವಂಡ್ರ ಕವಿತಾ ಹಾಗೂ ಉಪಾಧ್ಯಕ್ಷರಾಗಿ ಮುಕ್ಕಾಟಿ ಚಿದಂಬರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಬಡುವಂಡ್ರ ಕವಿತ ಹಾಗೂ ಉಪಾಧ್ಯಕ್ಷರಾಗಿ ಚಿದಂಬರ ಅವಿರೋಧವಾಗಿ ಆಯ್ಕೆಗೊಳಿಸಲಾಯಿತು. ಹೊಸ್ಕೇರಿ ಗ್ರಾ.ಪಂ. ಬಿಜೆಪಿ ಬೆಂಬಲಿತ ೭, ಕಾಂಗ್ರೆಸ್ ಬೆಂಬಲಿತ ೧, ಪಕ್ಷೇತರ ೧ ಒಟ್ಟು ೯ ಸದಸ್ಯರನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಬಿ.ವೈ. ಪ್ರಭುಶೇಖರ್, ಬಿಜೆಪಿ ಪಕ್ಷದ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಂಗೀರ ಸತೀಶ್, ಪಕ್ಷದ ಪದಾಧಿಕಾರಿಗಳಾದ ನೆಲ್ಲಮಕ್ಕಡ ರವಿ ಪೂಣಚ್ಚ, ಬಡುವಂಡ್ರ ದುಶ್ಯಂತ್, ಉಳುವಾರನ ಅಕ್ಷಿತ್, ರಾಮಕೃಷ್ಣ ಇನ್ನಿತರರು ಹಾಜರಿದ್ದರು. ಚುನಾವಣಾ ಅಧಿಕಾರಿಯಾಗಿ ಕಾರ್ಮಿಕ ಕಲ್ಯಾಣ ಇಲಾಖಾಧಿಕಾರಿ ಹರ್ಷವರ್ಧನ್ ಕಾರ್ಯನಿರ್ವಹಿಸಿದರು.