ಮನುಷ್ಯನ ಅಂಗಾAಗಗಳಲ್ಲಿ ಎಲ್ಲವೂ ಪ್ರಮುಖವಾದವುಗಳೇ., ಯಾವದೇ ಒಂದು ಅಂಗ ವಿಹೀನ ವಾದರೂ ಅದರ ಪಾಡು ಅನುಭವಿ ಸಿದವರಿಗೇ ಗೊತ್ತು.., ಮಾತಿಗೆ ಹೇಳಲು ಸುಲಭ ಒಂದಿಲ್ಲದಿದ್ದರೆ ಇನ್ನೊಂದು ಇದೆಯಲ್ಲ ಎಂದು., ಆದರೆ., ಒಂದು ಸಣ್ಣ ನರಕ್ಕೆ ದೋಷವಾದರೂ ಮನುಜನ ಜೀವನದ ಸ್ವರೂಪವೇ ಬದಲಾಗಿ ಬಿಡುತ್ತದೆ. ಹಾಗಾಗಿ ಪ್ರತಿಯೊಂದು ಅಂಗವೂ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಆದರೂ ನಮ್ಮ ಅಂಗಗಳ ಬಗ್ಗೆ ನಮ್ಮ ನಮ್ಮಲ್ಲೇ ತಾತ್ಸಾರ ಮನೋಭಾವ., ಅದರಲ್ಲೂ ಎಡ ಕೈ ಅಂದರೆ ಎಂಥದೋ ಒಂದು ರೀತಿಯ ಕೀಳು ಭಾವನೆ., ಎಡ ಕೈ ಮಾಡುವ ಕೆಲಸ ಗೊತ್ತಿದ್ದರೂ., ಎಡ ಕೈ ಇಲ್ಲವಾದರೆ ನಿತ್ಯಕರ್ಮಗಳ ನಿರ್ವಹಣೆ ಹೇಗೇ ಎಂಬದು ತಿಳಿದಿದ್ದರೂ ನಾವುಗಳೇ ‘ಚೀ ಎಡದ ಕೈ..’ ಅಂತ ರಾಗ ತೆಗೆಯೋದು ಮಾಮೂಲಿ..! ಏನಾ ದರೂ ಕೊಟ್ಟು ತೆಗೊಳ್ಳುವದಿದ್ದರೂ ಬಲ ಕೈ ಮುಂದೆ., ಎಡ ಕೈ ಹಿಂದೆಯೇ..! ಆದರೆ., ಎಡ ಕೈಯ ಪ್ರಾಮುಖ್ಯತೆ ಅರಿತವರಿಗೇ ಗೊತ್ತು ಅದರ ಶಕ್ತಿ., ವಿಶ್ವ ಭೂಪಟದಲ್ಲಿ ಛಾಪು ಮೂಡಿಸಿರುವವರ ಪೈಕಿ ಎಡ ಕೈ ಬಳಕೆ ಮಾಡಿದ ಸಾಧಕರೂ ಹೆಚ್ಚಿದ್ದಾರೆ ಎಂದರೆ ಅಚ್ಚರಿಯಾ ದರೂ ನಿಜ..!
ಎಡ ಕೈ ಬಳಕೆದಾರರನ್ನು ಸಾಮಾನ್ಯವಾಗಿ ಗುರುತಿಸಲ್ಪಡುವದು ಅವರ ಬರವಣಿಗೆಯಲ್ಲಿ., ಬಹು ತೇಕರು ಬಲ ಕೈಯಲ್ಲಿ ಕೆಲಸ ಮಾಡಿ ದರೂ ಬರವಣಿಗೆಗೆ ಎಡ ಕೈ ಬಳಸುತ್ತಾರೆ. ಇನ್ನೂ ಕೆಲವರು ಎಡ ಕೈಯಲ್ಲಿ ಕೆಲಸ ಮಾಡುವವರು ಬಲ ಕೈಯಲ್ಲಿ ಬರೆಯುತ್ತಾರೆ. ಈರ್ವರೂ ಮಾಡುವದು ಒಂದೇ ತೆರನಾದ ಕೆಲಸ ಕಾರ್ಯಗಳಾದರೂ ಇವ ರನ್ನು ಕರೆಯುವದು ‘ಎಡಚ’ ಎಂದು. ಇದು ಬೇಸರದ ಸಂಗತಿಯೂ ಹೌದು. ವಿಶ್ವದಲ್ಲಿಯೇ ಎಡ ಕೈ ಬರಹಗಾರ ರನ್ನು ನೋಡುವ ದೃಷ್ಟಿಕೋನವೇ ಬೇರೆ ಆಗಿರುತ್ತದೆ..! ಚಿಕ್ಕಂದಿನಲ್ಲಿಯೇ ಮಕ್ಕಳು ಎಡ ಕೈಯಲ್ಲಿ ಬರೆಯಲು ಪ್ರಾಂಭಿಸಿದಾಗ ಅಪ್ಪ, ಅಮ್ಮ ಪೆಟ್ಟು ಕೊಟ್ಟು ಬಲಕೈಯ್ಯಲ್ಲಿ ಬರೆಯಲು ಕಲಿಸುವುದುಂಟು. ಆದರೆ ಅದು ಅಷ್ಟೊಂದು ಫಲಪ್ರದವಾಗುವದಿಲ್ಲ. ಒಂದು ರೀತಿಯಲ್ಲಿ ಅದು ಆ ಮಗು ವಿನ ಮೇಲೆ ಒತ್ತಡ ಹೇರಿದಂತಾ ಗುತ್ತದೆ. ಕೆಲವರು ಮಾತ್ರ ಮಾರ್ಪಾ ಡಾಗುತ್ತಾರೆ, ಶೇ.೮೦ರಷ್ಟು ಎಡ ಕೈಯನ್ನೇ ಮುಂದುವರಿಸುತ್ತಾರೆ..!
ನ್ಯಾಶನಲ್ ಇಂಕ್ನ ಸ್ಥಾಪಕ, ಡೀನ್ ಆರ್. ಕ್ಯಾಂಪ್ಬೆಲ್ ಅವರು ಈ ದಿನ ವನ್ನು ಮೊದಲ ಬಾರಿಗೆ ಆಚರಿಸಿ ದರು. ೧೬೦೦ ರ ದಶಕದಿಂದ ಎಡ ಕೈ ಜನರು ದೆವ್ವದೊಂದಿಗೆ ಸಹಭಾಗಿತ್ವ ದಲ್ಲಿದ್ದಾರೆ ಎಂದು ಭಾವಿಸಲಾಗು ತ್ತಿತ್ತು. ಅವರು ಕಾರ್ಯ ಸಾಧಿಸುವಲ್ಲಿ ತೊಂದರೆ ಮತ್ತು ಸವಾಲುಗಳನ್ನು ಎದುರಿಸುತ್ತಾರೆ ಎಂದು ಹೇಳಲಾಗು ತ್ತಿತ್ತು. ಈ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಜಾರಿಗೆ ತರಲಾಯಿತು.
ನಂತರದಲ್ಲಿ ಎಡಗೈಯವರ ಅಭಿಪ್ರಾಯಗಳ ನಡುವೆ ಸೇತುವಾಗಿ ಕಾರ್ಯನಿರ್ವಹಿಸಲು ಲೆಫ್ಟ್ ಹ್ಯಾಂಡರ್ಸ್ ಕ್ಲಬ್ ಅನ್ನು ೧೯೯೦ ರಲ್ಲಿ ಸ್ಥಾಪಿಸಲಾಯಿತು. ಕ್ಲಬ್ ಅಗತ್ಯವಿ ರುವವರಿಗೆ ಸಹಾಯ ಒದಗಿಸುತ್ತಾ ಬರುತ್ತಿದ್ದಂತೆಯೇ ಪ್ರಪಂಚದಾದ್ಯAತÀ ಸದಸ್ಯರ ಸಂಖ್ಯೆ ಹೆಚ್ಚಾಯಿತು.
ಕ್ಯಾಂಪ್ಬೆಲ್ ರಚಿಸಿದ ಸಂಪ್ರದಾ ಯವನ್ನು ಮುಂದು ವರೆಸುತ್ತಾ ಎಡಗೈಯ ಕ್ಲಬ್ ೧೯೯೨ರ ಆಗಸ್ಟ್ ೧೩ ರಂದು ತಮ್ಮ ಸಂಘಟನೆಯ ಭಾಗವಾಗಿ ಅಂತಾರಾಷ್ಟ್ರೀಯ ಎಡಗೈಯವರ ದಿನವನ್ನು ಆಚರಿ ಸುವತ್ತ ಹೆಜ್ಜೆಯಿರಿಸಿತು. ಎಡಗೈಯ ಅನುಕೂಲಗಳು ಮತ್ತು ಅನಾನು ಕೂಲಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ ವಾಗಿದೆ. ಎಡ ಕೈಯ ಪ್ರಾಬಲ್ಯದ ಬಗ್ಗೆ ಅರಿವು ಕೂಡ ಎಲ್ಲೆಡೆ ಮೂಡತೊಡಗಿತು. ಎಡಕೈ ಬಳಕೆ ದಾರರು ಕೂಡ ಸಾಧನೆ ಮಾಡಿ ತೋರಲಾರಂಭಿಸಿದರು. ಎಡ ಕೈ ಬರಹಗಾರರನೇಕರು ವಿಶ್ವ ಸಾಧಕರ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸುವಂತಾಯಿತು. ಇದೀಗ ಈ ದಿನದ ನೆನಪಿಗಾಗಿ ಕ್ರೀಡಾ ಕೂಟಗಳು, ಮನರಂಜನಾ ಕಾರ್ಯ ಕ್ರಮಗಳನ್ನು ಒಳಗೊಂಡAತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಎಡಕೈಯವರು ಒಂದಾಗಿ ಸಂಭ್ರಮಿ ಸುವಂತಾಗಿದೆ. ಈ ದಿನದ ನೆನಪಿ ಗಾಗಿ ೨೦ ಪ್ರಾದೇಶಿಕ ಕಾರ್ಯ ಕ್ರಮಗಳನ್ನು ಇಂಗ್ಲೆAಡ್ನAತಹ ರಾಷ್ಟçದಲ್ಲಿ ಆಚರಿಸಲಾಗುತ್ತಿದೆ.
‘ಎಡ ಕೈ ಎಂದರೆ
ಕೀಳರಿಮೆ ಬೇಡ.,
ಅದು ಅದೃಷ್ಟದ ಸಂಕೇತ..!