ಚೆನ್ನೆöÊ, ಆ. ೧೨ : ತಮಿಳುನಾಡಿನ ಚೆನ್ನೆöÊನಲ್ಲಿ ನಡೆಯುತ್ತಿರುವ ೮ನೆ ಆವೃತ್ತಿಯ ಏಷ್ಯಾ ಕಪ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಿಯಲ್ಲಿ ಭಾರತ ಜಯಭೇರಿ ಸಾಧಿಸಿದೆ. ಇಂದು ಚೆನ್ನೆöÊನಲ್ಲಿ ನಡೆದ ರೋಚಕ ಅಂತಿಮ ಪಂದ್ಯದಲ್ಲಿ ಎದುರಾಳಿ ಮಲೇಷಿಯಾ ವಿರುದ್ಧ

೩-೧ ಗೋಲುಗಳ ಹಿನ್ನಡೆ ಸಾಧಿಸಿದ್ದ ಭಾರತ ಬಳಿಕ ಸತತವಾಗಿ ೩ ಗೋಲುಗಳನ್ನು ಭಾರಿಸಿ ೪-೩ ಅಂತರದಲ್ಲಿ ಮಲೇಷಿಯವನ್ನು ಸೋಲಿಸಿತು. ಜುಗ್ರಾಜ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ಗುರ್ಜಾಂತ್ ಸಿಂಗ್ ಹಾಗೂ ಅಕ್ಷದೀಪ್ ಅವರುಗಳು ತಲಾ ಒಂದು ಗೋಲು ಭಾರಿಸಿ ಅತ್ಯಧಿಕ ೪ ನೆ ಭಾರಿ ಏಷ್ಯಾ ಚಾಂಪಿಯನ್ ಟ್ರೋಫಿ ವಿಜೇತರಾಗಲು ಕಾರಣರಾದರು.