ಸೋಮವಾರಪೇಟೆ, ಆ. ೧೨ : ಸಮೀಪದ ಮಸಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೪೦ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆಯ ನಿರ್ದೇಶಕ ವಸಂತ್ ಅವರು ರೂ. ೧೫ ಸಾವಿರ ಮೌಲ್ಯದ ಉಲ್ಲಾನ್ ಸ್ವೆಟ್ಟರ್ ಹಾಗೂ ಟೋಪಿಗಳನ್ನು ಉಚಿತವಾಗಿ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಕೆ.ಜಿ. ನಾಗೇಂದ್ರ ಅವರು ವಿದ್ಯಾರ್ಥಿಗಳ ಪರವಾಗಿ ಸ್ವೀಕರಿಸಿದರು.