ಮಡಿಕೇರಿ, ಆ. ೧೨: ಮಡಿಕೇರಿ ಯಲ್ಲಿ ಕಂಡುಬAದಿರುವ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ನಾಗರಿಕರಲ್ಲಿಯೇ ಇದ್ದು, ಪರಸ್ಪರ ಸಹಕಾರ ಮನೋಭಾವದಿಂದ ವಾಹನ ದಟ್ಟಣೆ ಸಮಸ್ಯೆ ನಿವಾರಿಸಲು ಸಾಧ್ಯವಿದೆ ಎಂದು ನಗರ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಇನ್ಸ್ಪೆಕ್ಟರ್ ಐಮುಡಿಯಂಡ ನಂದ ಅಭಿಪ್ರಾಯಪಟ್ಟರು.
ನಗರದ ರೋಟರಿ ಸಭಾಂಗಣ ದಲ್ಲಿ ರೋಟರಿ ವುಡ್ಸ್ ಸಂಸ್ಥೆಯಿAದ ಆಯೋಜಿತವಾಗಿದ್ದ ಟ್ರಾಫಿಕ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಂದ, ಮಡಿಕೇರಿಗೆ ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರ ವಾಹನ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಿರಿದಾದ ರಸ್ತೆಗಳಲ್ಲಿ ವಾಹನ ಸಂಚಾರ ಸಮಸ್ಯೆ ಸಾಮಾನ್ಯ ವಾಗುತ್ತಿದೆ. ಪರಸ್ಪರ ಸಹಕಾರದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದು. ಅಂತೆಯೇ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಸ್ಥಳೀಯರು ತಮ್ಮ ವಾಹನಗಳಲ್ಲಿ ಹತ್ತಿರದ ಸ್ಥಳಗಳಿಗೆ ತೆರಳುವುದನ್ನು ಕಡಮೆ ಮಾಡಿದರೆ ಸ್ಥಳೀಯರ ವಾಹನ ಸಂಚಾರ ಪ್ರಮಾಣ ಇಳಿಮುಖವಾಗಿ ಸಂಚಾರ ದಟ್ಟಣೆ ಕಡಮೆಯಾಗಲಿದೆ ಎಂದು ಸಲಹೆ ನೀಡಿದರು.
ಜಗತ್ತಿನಲ್ಲಿಯೇ ಭಾರತ ದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಾಹನ ದುರಂತಗಳು ಸಂಭವಿ ಸುತ್ತಿವೆ. ಪ್ರತೀ ಗಂಟೆಗೆ ದೇಶದಲ್ಲಿ ೧೬ ಮಂದಿ ವಾಹನ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ೩೬೦ ಮಂದಿ ಸಾವಿಗೀಡಾಗುತ್ತಿದ್ದಾರೆ. ವರ್ಷಕ್ಕೆ ೧.೫೦ ಲಕ್ಷ ಮಂದಿ ವಾಹನ ಅಪಘಾತದಲ್ಲಿ ಪ್ರಾಣ ಕಳೆದು ಕೊಳ್ಳುತ್ತಿದ್ದು ಈ ಪ್ರಮಾಣ ಪ್ರತೀ ವರ್ಷ ಶೇ. ೮ ರಷ್ಟು ಹೆಚ್ಚುತ್ತಲೇ ಇದೆ ಎಂದು ನಂದ ಮಾಹಿತಿ ನೀಡಿದರು.
ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದು, ೧೪ ವರ್ಷದೊಳಗಿನ ಮಕ್ಕಳೂ ವಾಹನ ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ಪ್ರಮಾಣ ಹೆಚ್ಚುತ್ತಲೇ ಇರುವುದು ವಿಷಾದÀನೀಯ ಎಂದು ನಂದ ಕಳವಳ ವ್ಯಕ್ತಪಡಿಸಿದರು.
ಸೀಟ್ ಬೆಲ್ಟ್ ಹಾಕದೇ ಇರುವುದು, ವಾಹನ ಚಾಲನೆ ಸಂದರ್ಭ ಮೊಬೈಲ್ ಬಳಕೆ, ತ್ರಿಬಲ್ ರೈಡಿಂಗ್, ಮದ್ಯಪಾನ ಮಾಡಿ ಚಾಲನೆ, ನಿರ್ಲಕ್ಷö್ಯದ ಚಾಲನೆ, ವೀಲಿಂಗ್, ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಕೂಡ ಅಪಘಾತಗಳು ನಿಯಂತ್ರಣಕ್ಕೆ ಬಾರದಿರಲು ಮುಖ್ಯ ಕಾರಣವಾಗಿದೆ ಎಂದು ನಂದ ವಿಶ್ಲೇಷಿಸಿದರು.
ಸಂಚಾರ ನಿಯಮಗಳ ಉಲ್ಲಂಘನೆಗೆ ಕಠಿಣ ಕ್ರಮಗಳು ಪೊಲೀಸ್ ಇಲಾಖೆಯಲ್ಲಿದ್ದು, ಇದಕ್ಕೆ ಅವಕಾಶ ಮಾಡಿಕೊಡದೇ ನಾಗರಿಕ ಹೊಣೆಗಾರಿಕೆಯಿಂದ ಪ್ರತೀ ಯೋರ್ವರೂ ವಾಹನ ಚಾಲನೆ ಮತ್ತು ಸಂಚಾರಿ ನಿಯಮ ಪಾಲಿಸ ದ್ದಲ್ಲಿ ವಿದೇಶಗಳಂತೆ ಭಾರತ ಕೂಡ ಅಪಘಾತಗಳ ಸಂಖ್ಯೆಯನ್ನು ಕಡಮೆ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ರೋಟರಿ ವಲಯ ಸಹಾಯಕ ಗರ್ವನರ್ ದೇವಣಿರ ತಿಲಕ್ ಮಾತನಾಡಿ, ರಸ್ತೆಗಳು ಉತ್ತಮ ಸ್ಥಿತಿಯಲ್ಲಿದೆ ಎಂದ ಕೂಡಲೇ ಅದು ವೇಗದ ಚಾಲನೆಗೆ ನೀಡಿದ ಪರವಾನಗಿ ಅಲ್ಲ, ಉತ್ತಮ ರಸ್ತೆಗಳಲ್ಲಿ ನಿಯಮಬದ್ಧ ಚಾಲನೆ ಮಾಡಿದರೆ ಎಲ್ಲರಿಗೂ ಉತ್ತಮ ಎಂದು ಹೇಳಿದರು.
ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್ ಮಾತನಾಡಿದರು.
ಮಡಿಕೇರಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ನಿರ್ದೇಶಕರಾದ ಎ.ಕೆ. ವಿನೋದ್, ಅನಿಲ್ ಎಚ್.ಟಿ., ಮಡಿಕೇರಿ ರೋಟರಿ ಅಧ್ಯಕ್ಷೆ ಗೀತಾ ಗಿರೀಶ್ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.