ಶ್ರೀಮಂಗಲ, ಆ. ೧೨: ಕೊಡವ ಜಾನಪದ, ಕಲೆ - ಸಂಸ್ಕೃತಿಗಳನ್ನು ಹಿರಿಯರೊಂದಿಗೆ ಸೇರಿ ಮಕ್ಕಳು ಕಲಿತು ಮುಂದಿನ ಪೀಳಿಗೆಗೆ ಹಸ್ತಾಂತ ರಿಸಬೇಕು ಹಾಗೂ ಹಬ್ಬ, ಆಚಾರ-ವಿಚಾರಗಳನ್ನು ಚಾಚು ತಪ್ಪದೇ ಆಚರಿಸುವ ಮೂಲಕ ಸಂಸ್ಕೃತಿಯನ್ನು ಉಳಿಸಬೇಕೆಂದು ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಅವರು ಕರೆ ನೀಡಿದರು. ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಿಂದ ನಡೆದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ಮಾತನಾಡಿ ಪದ್ಮಶ್ರೀ ಪ್ರಶಸ್ತಿಯು ರಾಣಿ ಮಾಚಯ್ಯ ಅವರಿಗೆ ಸಿಕ್ಕಿರುವುದು ಕೊಡವ ಜಾನಪದ, ಕಲೆ -ಸಂಸ್ಕೃತಿಗೆ ಸಿಕ್ಕಿದ ಗೌರವ ಮತ್ತು ಹೆಮ್ಮೆಯಾಗಿದೆ. ರಾಣಿ ಮಾಚಯ್ಯ ಅವರು ಕೊಡವ ಕಲೆ ಸಂಸ್ಕೃತಿಗೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷರಾದ ಚೆರಿಯಪಂಡ ಇಮ್ಮಿ ಉತ್ತಪ್ಪ, ಗೌರವ ಕಾರ್ಯದರ್ಶಿ ಕೋಟೆರ ಕಿಶನ್ಉತ್ತಪ್ಪ, ಜಂಟಿ ಕಾರ್ಯದರ್ಶಿ ಆಲೇಮಾಡ ಸುಧಿರ್, ಖಾಯಂ ಆಹ್ವಾನಿತ ನಿರ್ದೇಶಕ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ನಿರ್ದೇಶಕರಾದ ಕೊಣಿಯಂಡ ಸಂಜು ಸೋಮಯ್ಯ, ಚೀರಂಡ ಕಂದ ಸುಬ್ಬಯ್ಯ, ಮೂಕಳೆರ ಕಾವ್ಯ ಕಾವೇರಮ್ಮ, ಅಪ್ಪಚ್ಚಕವಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಮಂಡಚAಡ ದಿನೇಶ್ ಚಿಟ್ಟಿಯಪ್ಪ ಹಾಜರಿದ್ದರು.