ಕುಶಾಲನಗರ, ಆ. ೧೨: ಸ್ವಾತಂತ್ರö್ಯ ದಿನಾಚರಣೆಯ ಸಲುವಾಗಿ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಕುಶಾಲನಗರದಲ್ಲಿ ಈ ತಿಂಗಳ ೧೪ರಂದು ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಕುಶಾಲನಗರ ತಾಲೂಕು ಸಂಚಾಲಕ ಎಲ್. ಹರೀಶ್ ತಿಳಿಸಿದ್ದಾರೆ.
ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ೧೯೪೭ ರ ಆಗಸ್ಟ್ ೧೪ರ ಮಧ್ಯರಾತ್ರಿ ಭಾರತ ದೇಶ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತ ಕಳೆದು ಹೋದ ಭಾಗಗಳನ್ನೆಲ್ಲ ಮತ್ತೆ ಒಂದುಗೂಡಿಸುವ ಬಗ್ಗೆ ನಾಗರಿಕರಿಗೆ ನೆನಪಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಕುಶಾಲನಗರದಲ್ಲಿ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಮುಖ್ಯ ರಸ್ತೆ ಮೂಲಕ ಹೊರಟು ರಥಬೀದಿ, ಹಳೆಯ ಮಾರುಕಟ್ಟೆ ರಸ್ತೆ ನಂತರ ಟೌನ್ ಕಾಲೋನಿ ರಸ್ತೆಯಿಂದಾಗಿ ಐ ಬಿ ರಸ್ತೆ ಮೂಲಕ ರೈತ ಸಹಕಾರ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ವೇದಿಕೆಯ ಸಂಪರ್ಕ ಪ್ರಮುಖ ರಾದ ಚಾಮೆರ ಪ್ರದೀಪ್ ಮಾತನಾಡಿ, ಕುಶಾಲನಗರದಲ್ಲಿ ತಾ. ೧೪ರಂದು ಸಂಜೆ ೭ ಗಂಟೆಗೆ ಮೆರವಣಿಗೆ ನಡೆಯಲಿದೆ ಎಂದರು.
ಸಭಾ ಕಾರ್ಯಕ್ರಮ ಮಾಜಿ ಸೈನಿಕರಾದ ಡಿ.ಕೆ. ಚಿನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ರಾಷ್ಟಿçÃಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಪರ್ಕ ಪ್ರಮುಖರಾದ ಯಾದವ್ ಕೃಷ್ಣ ಅವರು ದಿಕ್ಸೂಚಿ ಭಾಷಣ ಮಾಡಲಿರುವರು ಎಂದು ಹೇಳಿದರು.
ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖರಾದ ಕೆ.ವಿ. ರಾಜೀವ್, ತಾಲೂಕು ಸಂಪರ್ಕ ಪ್ರಮುಖರಾದ ವಿ.ಎಚ್. ಪ್ರಶಾಂತ್, ಸಹ ಸಂಚಾಲಕರಾದ ಪ್ರಜ್ವಲ್ ಇದ್ದರು.