ಮಡಿಕೇರಿ, ಆ. ೧೧: ಕರ್ನಾಟಕ ಸರ್ಕಾರದ ಹೆಚ್ಚುವರಿ ಅಭಿಯೋಜಕರಾಗಿ ವೀರಾಜಪೇಟೆಯ ವಕೀಲ ಕರ್ನಂಡ ರಾಹುಲ್ ಕಾರ್ಯಪ್ಪ ನೇಮಕಗೊಂಡಿದ್ದಾರೆ.

ವೀರಾಜಪೇಟೆ ಕರ್ನಂಡ ಸೋಮಯ್ಯ ಮತ್ತು ಪದ್ಮಿನಿ ದಂಪತಿ ಪುತ್ರ ಕರ್ನಂಡರಾಹುಲ್ಕಾರ್ಯಪ್ಪ.ವಕೀಲವೃತ್ತಿಯಲ್ಲಿ ೨೩ವರ್ಷಗಳಅನುಭವ ಹೊಂದಿರುವ ಕರ್ನಂಡ ರಾಹುಲ್ ಕಾರ್ಯಪ್ಪ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಅವರ ಗರಡಿಯಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ ಇವರು ನಾಗರಿಕ ಕಾನೂನುಗಳು, ಕ್ರಿಮಿನಲ್, ಆಡಳಿತಾತ್ಮಕ ಕಾನೂನುಗಳು ಮತ್ತು ಚುನಾವಣಾ ಕಾನೂನುಗಳ ಕ್ಷೇತ್ರಗಳಲ್ಲಿ ಅಭ್ಯಸಿಸಿದ್ದಾರೆ.