ವೀರಾಜಪೇಟೆ, ಆ. ೧೧: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರಾವಣ ಮಾಸದ ಪೂಜೆಗಳು ತಾ. ೧೯ ರಿಂದ ಸೆ. ೯ ರವರೆಗೆ ನಾಲ್ಕು ಶನಿವಾರಗಳು ನಡೆಯಲಿವೆ.

ಶ್ರೀ ಶನೀಶ್ವರ ದೇವಾಲಯದಲ್ಲಿ ತಾ. ೧೯ ರಂದು ಮೊದಲ ಶನಿವಾರ ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮದೊಂದಿಗೆ ಪೂಜಾ ಕಾರ್ಯಗಳು ನಡೆಯಲಿವೆ, ನಂತರ ತಾ. ೨೬ ಹಾಗೂ ಸೆ. ೨ ಮತ್ತು ೯ ರಂದು ನಾಲ್ಕು ಶ್ರಾವಣ ಶನಿವಾರಗಳು ನವಗ್ರಹ ಪೂಜೆ, ಶನಿಶಾಂತಿ ಪೂಜೆ, ಶನಿಜಪ ಸೇರಿದಂತೆ ವಿಶೇಷ ಪೂಜೆಗಳು ನಡೆದು ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.