*ಗೋಣಿಕೊಪ್ಪ, ಆ. ೧೧: ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷಿö್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಭಿವೃದ್ಧಿ ಗೊಂಡ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ ಶೌಚಾಲಯಗಳನ್ನು ವಿದ್ಯಾರ್ಥಿಗಳ ಸೇವೆಗೆ ಅನುವು ಮಾಡಿಕೊಡಲಾಯಿತು.
ವಿವೇಕಾನಂದ ಸೇವಾ ಸಮಿತಿಯ ಪ್ರಮುಖ ಡಾ. ಮಾಪಂಗಡ ಪ್ರತಾಪ್ ಬೆಳ್ಳಿಯಪ್ಪ, ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅಧ್ಯಕ್ಷತೆಯಲ್ಲಿ ಚಾಲನೆ ದೊರಕಿತು.
ಬಾಳೆಲೆ ಗಿರಿಜನ ವಿದ್ಯಾರ್ಥಿಗಳೆ ಹೆಚ್ಚು ವ್ಯಾಸಂಗ ಮಾಡುತ್ತಿರುವ ಈ ಸಂಸ್ಥೆಯನ್ನು ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿ ವ್ಯವಸ್ಥಿತವಾಗಿ ತರಗತಿಗಳನ್ನು ನವಿಕರಿಸುವಲ್ಲಿ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆ ಪೂರ್ಣ ಪ್ರಮಾಣದ ಸಹಕಾರ ನೀಡಿದೆ ಎಂದು ಕಾಲೇಜಿನ ಅಧ್ಯಕ್ಷ ಬೋಸ್ ಮಂದಣ್ಣ ತಿಳಿಸಿದರು.
ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ, ಸಹ ಕಾರ್ಯದರ್ಶಿ ಪೊಡಮಾಡ ಮೋಹನ್, ಉಪಾಧ್ಯಕ್ಷ ಕಿರುಂದAಡ ದೇವಯ್ಯ, ಖಚಾಂಚಿ ಅಡ್ಡೇಂಗಡ ದೇವಯ್ಯ, ನಿರ್ದೇಶಕರುಗಳಾದ ಅಡ್ಡೇಂಗಡ ಸಜನ್, ಮಾಚಂಗಡ ಭೀಮಯ್ಯ, ಪ್ರಾಂಶುಪಾಲ ಪ್ರಭು, ಮುಖ್ಯ ಶಿಕ್ಷಕ ಚಂದ್ರಶೇಖರ್ ಶಿಕ್ಷಕರುಗಳಾದ ರಾಘವೇಂದ್ರ , ತಿಮ್ಮರಾಜು ಇದ್ದರು.