ಮಡಿಕೇರಿ, ಆ. ೧೧ : ಚೆನ್ನೆöÊಯಲ್ಲಿ ಮೊನ್ನೆ ಜರುಗಿದ ಭಾರತ - ಪಾಕಿಸ್ತಾನ ರಾಷ್ಟçಗಳ ನಡುವಿನ ಹಾಕಿ ಪಂದ್ಯಾವಳಿಯ ಸಂದರ್ಭ ಸ್ಕಾ÷್ವಷ್ ಕ್ರೀಡಾತಾರೆ ಕೊಡಗಿನವರಾದ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು,

ಅಲ್ಲಿನ ಎಗ್ಮೋರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಸಂದರ್ಭ ವಿಶೇಷ ಗಣ್ಯರ ಸಾಲಿನಲ್ಲಿ ಜೋಶ್ನಾ ಚಿಣ್ಣಪ್ಪ ಅವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಟಾö್ಯಲಿನ್ ಕ್ರೀಡಾ ಸಚಿವ ಉದಯ್‌ನಿಧಿ ಮತ್ತಿತರ ಗಣ್ಯರು ಸನ್ಮಾನಿಸಿದರು.