ನವದೆಹಲಿ, ಆ. ೧೧ : ದೇಶದಲ್ಲಿ ನಡೆಯುತ್ತಿರುವಂತಹ ಸಾಮೂಹಿಕ ಅತ್ಯಾಚಾರ, ಗುಂಪು ಹಲ್ಲೆ ಮುಂತಾದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ದೇಶದಲ್ಲಿನ, ಸಾಮೂಹಿಕ ಅತ್ಯಾಚಾರ, ಸಾಮೂಹಿಕ ಹಲ್ಲೆಯಂತಹ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಮಂಡಿಸಿದ್ದಾರೆ. ಈ ತಿದ್ದುಪಡಿ ಮಸೂದೆಯ ಜಾರಿಯಾದ ನಂತರ ಅಂದರೆ ಸಾಮೂಹಿಕ ಅತ್ಯಾಚಾರ ಎಸಗಿದವರಿಗೆ ೨೦ ವರ್ಷ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ, ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವÀ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ವಿಧಿಸುವಂತೆÀ ಕಾನೂನು ಜಾರಿಯಾಗಲಿದೆ.
ಇನ್ನೊಂದೆಡೆ ದೇಶದ್ರೋಹಕ್ಕೆ ಸಂಬAಧಿಸಿದ ಶಿಕ್ಷೆಯನ್ನು ಮೂರು ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಅಥವಾ ಏಳು ವರ್ಷಗಳ ಜೈಲು ಶಿಕ್ಷೆಗೆ ಹೆಚ್ಚಿಸುವಂತೆ ಕಾನೂನು ಆಯೋಗವು ಶಿಫಾರಸು ಮಾಡಿತ್ತು. ಇದನ್ನು ಇಂದು ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯಲ್ಲಿ ಪ್ರಸ್ತಾವನೆಯಿರಿಸಿದ್ದಾರೆ. ಇದಕ್ಕೆ ನ್ಯಾಯ ಸಂಹಿತೆಯ ಸೆಕ್ಷನ್ ೧೫೦ ಎಂದು ಹೆಸರಿಸಲಾಗಿದೆ. ಇದು ೧೮೬೦ ರ ಭಾರತೀಯ ದಂಡ ಸಂಹಿತೆಯನ್ನು ಬದಲಿಸುತ್ತದೆ. ದೇಶದಲ್ಲಿ ಪ್ರತ್ಯೇಕತೆ, ಸಶಸ್ತç ಬಂಡಾಯ, ವಿಧ್ವಂಸಕ ಕೃತ್ಯಗಳು ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳ ಕುರಿತು ನ್ಯಾಯ ಸಂಹಿತೆಯ ಸೆಕ್ಷನ್ ೧೫೦ ರಲ್ಲಿ ಉಲ್ಲೇಖವಾಗಿದೆ.
ಕಳೆದ ೧೬೦ ವರ್ಷಗಳಿಂದ ಐಪಿಸಿ ಸೆಕ್ಷನ್ಗಳು ಜಾರಿಯಲ್ಲಿವೆ. ಈ ಕಾಯ್ದೆಗಳನ್ನು ಬ್ರಿಟಿಷರು ೧೮೬೦ರಲ್ಲಿ ರೂಪಿಸಿದ್ದರು. ಈ ಕಾನೂನು ಹಾಗೂ ಸಂಹಿತೆಗಳಿಗೆ ಪರ್ಯಾಯವಾಗಿ ಭಾರತೀಯ ನ್ಯಾಯ ಸಂಹಿತೆ ೨೦೨೩ ಜಾರಿಗೆ ಬರಲಿದೆ ಎಂದು ಅಮಿತ್ ಶಾ ಹೇಳಿದರು.