ನೇರುಗಳಲೆ ಗ್ರಾ.ಪಂ- ಜೆಡಿಎಸ್ ಬೆಂಬಲಿಗರ ಗೆಲುವು

ಸೋಮವಾರಪೇಟೆ: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗ್ರಾ.ಪಂ. ಸಭಾಂಗಣ ದಲ್ಲಿ ನಡೆದಿದ್ದು, ಅಧ್ಯಕ್ಷರಾಗಿ ಬಿಜೆಪಿಯ ವಿನೋದ್ ಕುಮಾರ್, ಉಪಾಧ್ಯಕ್ಷರಾಗಿ ಜೆಡಿಎಸ್‌ನ ಜಲಜಾಕ್ಷಿ ಅವರುಗಳು ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಒಟ್ಟು ೧೨ ಸದಸ್ಯ ಬಲದ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಜಿತ್‌ಕುಮಾರ್ (೫ ಮತ) ಹಾಗೂ ಬಿಜೆಪಿ ಬೆಂಬಲಿತ ವಿನೋದ್ ಕುಮಾರ್ (೬ ಮತ) ಸ್ಪರ್ಧಿಸಿದ್ದು, ಒಂದು ಮತ ತಿರಸ್ಕೃತಗೊಂಡಿತು.

ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಶ್ವಿನಿ ಹಾಗೂ ಜೆಡಿಎಸ್ ಬೆಂಬಲಿತ ಜಲಜಾಕ್ಷಿ ಸ್ಪರ್ಧಿಸಿದ್ದರು. ಇಬ್ಬರಿಗೂ ತಲಾ ೬ ಮತಗಳು ಲಭಿಸಿದವು. ನಂತರ ಲಾಟರಿ ಮೂಲಕ ಜಲಜಾಕ್ಷಿ ಆಯ್ಕೆಯಾದರು. ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಬಾಲಕೃಷ್ಣ ರೈ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಈ ಸಂದರ್ಭ ಗ್ರಾ.ಪಂ. ಮಾಜೀ ಅಧ್ಯಕ್ಷೆ ಪುಷ್ಪ, ಮಾಜೀ ಉಪಾಧ್ಯಕ್ಷ ಪ್ರವೀಣ್ ಸೇರಿದಂತೆ ಸದಸ್ಯರುಗಳು, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರುಗಳು ಉಪಸ್ಥಿತರಿದ್ದರು.

ಚೌಡ್ಲು ಗ್ರಾ.ಪಂ. ಬಿಜೆಪಿ ಬೆಂಬಲಿತರ ಆಯ್ಕೆ

ಸೋಮವಾರಪೇಟೆ: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ೨ನೇ ಅವಧಿ

ಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾ.ಪಂ. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗೀತಾ ಶಶಿ, ಉಪಾಧ್ಯಕ್ಷರಾಗಿ ನತೀಶ್ ಮಂದಣ್ಣ ಅವರುಗಳು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಕಾರ್ಯನಿರ್ವಹಿಸಿದರು. ಈ ಸಂದರ್ಭ ಮಾಜೀ ಅಧ್ಯಕ್ಷರಾದ ಮಹೇಶ್ ತಿಮ್ಮಯ್ಯ, ಗಣಪತಿ, ಮಾಜಿ ಉಪಾಧ್ಯಕ್ಷರಾದ ಜ್ಯೋತಿ ನೆಹರು, ಮಂಜುಳಾ ಸುಬ್ರಮಣಿ ಸೇರಿದಂತೆ ಸದಸ್ಯರುಗಳು, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್ ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ೧೪ ಸ್ಥಾನಗಳ ಪೈಕಿ ಬಿಜೆಪಿ ೧೨, ೧ ಕಾಂಗ್ರೆಸ್ ಹಾಗೂ ೧ ಪಕ್ಷೇತರ ಸದಸ್ಯ ಬಲ ಹೊಂದಿದೆ.

ಮಕ್ಕAದೂರು ಪಂಚಾಯಿತಿ ಬಿಜೆಪಿ ಮಡಿಲಿಗೆ

ಚುನಾವಣೆಯಲ್ಲಿ ಅನಿರೀಕ್ಷಿತ ಬೆಳವಣಿಗೆ..!

ಮಡಿಕೇರಿ, ಆ. ೧೦: ಕಾಂಗ್ರೆಸ್ ಬೆಂಬಲಿತ ಪ್ರತಿನಿಧಿಗಳ ಆಡಳಿತದಲ್ಲಿದ್ದ ಮಕ್ಕಂದೂರು ಗ್ರಾಮ ಪಂಚಾಯಿತಿ ಎರಡನೇ ಅವಧಿಯ ಆಡಳಿತ ಇದೀಗ ಬಿಜೆಪಿ ಬೆಂಬಲಿತರ ವಶವಾಗಿದೆ. ಚುನಾವಣೆಯಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದಿಗೆ ಬಿಜೆಪಿ ಬೆಂಬಲಿತ ಸದಸ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಒಟ್ಟು ಏಳು ಮಂದಿ ಸದಸ್ಯ ಬಲವಿರುವ ಮಕ್ಕಂದೂರು ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಇಂದು ನಡೆದ ಚುನಾವಣೆಯಲ್ಲಿ ಬಿ.ಎನ್. ರಮೇಶ್ ಅಧ್ಯಕ್ಷರಾಗಿ ಹಾಗೂ ಬಿ.ಎಸ್. ವಿಮಲಾ ರವಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ. (ಎ) ವರ್ಗಕ್ಕೆ ಮೀಸಲಾಗಿತ್ತು. ಹಾಗಾಗಿ ನಾಲ್ಕು ಮಂದಿ ಸದಸ್ಯ ಬಲದ ಬಹುಮತವಿರುವ ಕಾಂಗ್ರೆಸ್ ಬೆಂಬಲಿತ, ಹಾಲಿ ಅಧ್ಯಕ್ಷರಾಗಿರುವ ಕನ್ನಿಕಂಡ ಶಾಂ ಸುಬ್ಬಯ್ಯ ಅಧ್ಯಕ್ಷ ಹಾಗೂ ಮೂವರು ಸದಸ್ಯ ಬಲವಿರುವ ಬಿಜೆಪಿ ಬೆಂಬಲಿತ ಸದಸ್ಯ ಬಿ.ಎನ್. ರಮೇಶ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಈರ್ವರು ಆಕಾಂಕ್ಷಿಗಳಿದ್ದುದರಿAದ ಚುನಾವಣಾಧಿಕಾರಿಯಾಗಿದ್ದ ಜಿ.ಪಂ. ಸಹಾಯಕ ಉಪ ಕಾರ್ಯದರ್ಶಿ ಜೀವನ್ ಅವರು ಗುಪ್ತ ಮತದಾನದ ಮೂಲಕ ಚುನಾವಣೆಗೆ ಅನುವು ಮಾಡಿಕೊಟ್ಟರು. ಮತದಾನದಲ್ಲಿ ಅನಿರೀಕ್ಷಿತವೆಂಬAತೆ ಅಚ್ಚರಿಯ ಫಲಿತಾಂಶದೊAದಿಗೆ ರಮೇಶ್ ನಾಲ್ಕು ಮತ ಗಳಿಸಿ ವಿಜಯಶಾಲಿಯಾದರು. ಶಾಂ ಸುಬ್ಬಯ್ಯ ಮೂರು ಮತ ಗಳಿಸಿದರು.

ಉಪಾಧ್ಯಕ್ಷ ಸ್ಥಾನ ಬಿಸಿಎಂಗೆ ಮೀಸಲಾಗಿದ್ದುದರಿಂದ ವಿಮಲಾ ರವಿ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಹಾಲಿ ಉಪಾಧ್ಯಕ್ಷೆ ಪಡೇಟಿರ ಕವಿತಾ, ಸದಸ್ಯರುಗಳಾದ ಕಟ್ಟೆಮನೆ ಗಣೇಶ್, ಬಿ.ಎಸ್. ಸುನಂದ, ಡೀನಾ ಬಾಗವಹಿಸಿದ್ದರು. ವಿಜೇತರನ್ನು, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಪಂಡ ಕಾಳಪ್ಪ, ಬಿಜೆಪಿ ಬೂತ್ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಶಕ್ತಿ ಕೇಂದ್ರದ ಅಧ್ಯಕ್ಷ ತೂಟೆರ ಚಂದ್ರಶೇಖರ್, ಸಹಕಾರ ಸಂಘದ ನಿರ್ದೇಶಕರಾದ ಸುಧಾಕರ್, ಅಣ್ಣೆಚ್ಚಿರ ಸತೀಶ್, ಪಿ.ಎಂ. ಸುಲೋಚನ, ಪಂಚಾಯಿತಿ ಸದಸ್ಯರುಗಳು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಪ್ರಮುಖರು ಅಭಿನಂದಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್ ಹಾಗೂ ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.

ಸಹಕಾರದೊಂದಿಗೆ ಅಭಿವೃದ್ಧಿ

ಪಂಚಾಯಿತಿಯಲ್ಲಿ ಎಲ್ಲ ಏಳು ಮಂದಿ ಸದಸ್ಯರುಗಳು ಒಂದೇ ಕುಟುಂಬದವರAತೆ ಇದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷನಾಗಿ ಆಯ್ಕೆ ಮಾಡುವಂತೆ ಎಲ್ಲ ಸದಸ್ಯರುಗಳಲ್ಲಿಯೂ ಪ್ರೀತಿ, ವಿಶ್ವಾಸದಿಂದ ಕೇಳಿಕೊಂಡಿದ್ದೆ. ಆರ್ಶೀವಾದ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಮೇಶ್ ಈ ಸಂದರ್ಭದಲ್ಲಿ ಹೇಳಿದರು.

ಗೋಣಿಕೊಪ್ಪಲು: ಅರುವ ತ್ತೋಕ್ಕಲು ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶರೀಫ ಬಿ.ವಿ. ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮನೆಯಂಡ ಪ್ರಾಣ್ ಬೋಪಣ್ಣ ಆಯ್ಕೆಯಾಗಿದ್ದಾರೆ.

ಮೊದಲ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಈ ಪಂಚಾ ಯಿತಿಯಲ್ಲಿ ಅಧಿಕಾರ ಪಡೆದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆ ಗೊಂಡಿದ್ದರು. ಆದರೆ ೨ನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಬಿಜೆಪಿ ಪಕ್ಷದ ಸದಸ್ಯರಿಗೆ ಸಾಧ್ಯವಾಗಲಿಲ್ಲ. ಉಪಾಧ್ಯಕ್ಷ ಸ್ಥಾನಕಷ್ಟೆ ತೃಪ್ತಿ ಪಡಬೇಕಾಯಿತು. ಅಧ್ಯಕ್ಷ ಸ್ಥಾನಕ್ಕೆ ೨ ನಾಮಪತ್ರಗಳು ಉಪಾಧ್ಯಕ್ಷ ಸ್ಥಾನಕ್ಕೆ ೩ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಯಾವುದೇ ಸದಸ್ಯರು ನಾಮಪತ್ರ ಹಿಂದಕ್ಕೆ ಪಡೆಯದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ನಿಯಮದಂತೆ ಮತದಾನವನ್ನು ಘೋಷಣೆ ಮಾಡಿ ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಇದರಲ್ಲಿ ೭ ಮತ ಪಡೆದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶರೀಫಾ ಬಿ.ವಿ. ಅಧ್ಯಕ್ಷರಾಗಿ ಆಯ್ಕೆಗೊಂಡರು. ಉಪಾಧ್ಯಕ್ಷ ಸ್ಥಾನದ ಸದಸ್ಯರಾಗಿದ್ದ ಬಿಜೆಪಿ ಬೆಂಬಲಿತ ಮನೆಯಪಂಡ ಪ್ರಾಣ್ ಬೋಪಣ್ಣ ೭ ಮತ ಪಡೆದು ಗೆಲುವು ಸಾಧಿಸಿ ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮತ್ತೋರ್ವ ಅಭ್ಯರ್ಥಿ ಭಾಗ್ಯವತಿ ೫ ಮತ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎ. ಚಂಗಪ್ಪ ೨ ಮತಗಳನ್ನು ಹಾಗೂ ಸಿ.ಬಿ. ದಮಯಂತಿ ೩ ಮತಗಳನ್ನು ಪಡೆದರು. ಚುನಾವಣೆ ಪ್ರಕ್ರಿಯೆಯಲ್ಲಿ ಪಂಚಾಯಿತಿ ಸದಸ್ಯರಾದ ಎಂ.ಎನ್. ಸೋಮಣ್ಣ, ಜೆ.ಎ. ಸೌಮ್ಯ, ಎಂ. ಮಹೇಶ್, ಎಂ.ಪಿ. ಬೋಪಣ್ಣ, ಪಿ.ಎ. ಗಿರಿಜ, ನವೀನ್ ಕುಮಾರ್ ಕೆ.ಪಿ, ಎ.ಎ. ಚಂಗಪ್ಪ, ಸಿ.ಪಿ. ದಮಯಂತಿ, ಕೆ. ಶರೀಫಾ, ಪೊನ್ನಂಗಡ ಭಾಗ್ಯವತಿ, ಸುಗುಣ ಸೋಮಯ್ಯ, ಎಂ.ಕೆ. ಲಲಿತ ಹಾಜರಿದ್ದರು.

ಆಲೂರು ಸಿದ್ದಾಪುರ ಗ್ರಾ.ಪಂ.ಗೆ ಆಯ್ಕೆ

ಮುಳ್ಳೂರು: ಸಮೀಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ೨ನೇ ಅವಧಿಗೆ ಬಿಜೆಪಿ ಬೆಂಬಲಿತ ಸದಸ್ಯರುಗಳಾದ ಮೀನಾಕ್ಷಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಎಂ.ಕೆ. ಚಂದ್ರಮೋಹನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

೧೫ ಮಂದಿ ಸದಸ್ಯರಿರುವ ಗ್ರಾ.ಪಂ. ಆಡಳಿತ ಮಂಡಳಿಯಲ್ಲಿ ಮೊದಲ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರುಗಳಾದ ಮೋಹನ್‌ಕುಮಾರ್ ಅಧ್ಯಕ್ಷರಾಗಿ, ದಮಯಂತಿ ಕರುಂಬಯ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಬಿಸಿಎಂಎ ವರ್ಗಕ್ಕೆ ಸೇರಿದ ಸದಸ್ಯೆ ಮೀನಾಕ್ಷಿ ಅಧ್ಯಕ್ಷೆಯಾಗಿ, ಎಸ್‌ಸಿ ಸಾಮಾನ್ಯ ವರ್ಗಕ್ಕೆ ಸೇರಿದ ಸದಸ್ಯ ಎಂ.ಕೆ. ಚಂದ್ರಮೋಹನ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್‌ಬಾಬು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇವರಿಬ್ಬರು ಮಾತ್ರ ನಾಮಪತ್ರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ಘೋಷಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್ ಪಾಲ್ಗೊಂಡಿದ್ದರು. ಈ ಸಂದರ್ಭ ತಾಲೂಕು ಬಿಜೆಪಿ ಮುಖಂಡರಾದ ಸೋಮೇಶ್, ಕೆ.ವಿ. ಜಯಕುಮಾರ್ ಮುಂತಾದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಾಲ್ಕೇರಿ-ಸೋಮಯ್ಯ ಅಧ್ಯಕ್ಷ

ಶ್ರೀಮಂಗಲ: ನಾಲ್ಕೇರಿ ಗ್ರಾಮ ಪಂಚಾಯಿತಿ ೨ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿಗರು ಆಯ್ಕೆಯಾಗಿದ್ದಾರೆ.

ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿಗ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಪಡೆದಿದ್ದರು. ಈ ಬಾರಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಅಭ್ಯರ್ಥಿಗೆ ಮೀಸಲಾಗಿತ್ತು. ಕಾಂಗ್ರೆಸ್‌ನ ಜೆ.ಕೆ. ಸೋಮಯ್ಯ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾದ ಸ್ಥಾನಕ್ಕೆ, ಜೆ.ಬಿ ಮನು ಮತ್ತು ಕಳೆದ ಸಾಲಿನ ಉಪಾಧ್ಯಕ್ಷರಾಗಿದ್ದ ಚೆರಿಯಪಂಡ ಸಚಿನ್ ಪೆಮ್ಮಯ್ಯ ಅವರ ನಡುವೆ ನಡೆದ ಚುನಾವಣೆಯಲ್ಲಿ ೬-೧ ಮತಗಳ ಅಂತರದಲ್ಲಿ ಜೆ.ಬಿ. ಮನು ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದರು. ನಾಲ್ಕೇರಿ ಪಂಚಾಯಿತಿಯಲ್ಲಿ ಒಟ್ಟು ೭ ಸದಸ್ಯರಲ್ಲಿ ಬಿಜೆಪಿ ೪, ಕಾಂಗ್ರೆಸ್ ೩ ಸದಸ್ಯರು ಬಲ ಹೊಂದಿದೆ.

ಹರದೂರು ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಸೋಮವಾರಪೇಟೆ: ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಉಷಾ ಟಿ.ಪಿ. ೭ ಮತ ಪಡೆದು ವಿಜಯಿ ಯಾದರು ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಕುಸುಮ ೫ ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಸಲಾಂ (ಸಲೀಂ ಹೊಸತೋಟ) ಇವರು ೯ ಮತ ಪಡೆದು ವಿಜಯಿಯಾದರು. ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಪದ್ಮನಾಭ ೨ ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಸೋಮವಾರಪೇಟೆ ತಹಶೀಲ್ದಾರ್ ಎಸ್.ಎನ್. ನರಗುಂದ್ ಕಾರ್ಯನಿರ್ವಹಿಸಿದರು.

ಬಾಳೆಲೆ ಗ್ರಾಮ ಪಂಚಾಯಿತಿಗೆ ಆಯ್ಕೆ

ಗೋಣಿಕೊಪ್ಪಲು: ಬಾಳೆಲೆ ಗ್ರಾಮ ಪಂಚಾಯಿತಿಯ ೨ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಮುಕ್ಕಾಟಿರ ಜಾನಕಿ ಕಾವೇರಪ್ಪ ಹಾಗೂ ಉಪಾಧ್ಯಕ್ಷರಾಗಿ ಕಳ್ಳಿಚಂಡ ರಕ್ಷಿತ್ ಕುಶಾಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು ೧೩ ಸದಸ್ಯರನ್ನೊಳಗೊಂಡ ಬಾಳೆಲೆ ಪಂಚಾಯಿತಿಯಲ್ಲಿ ಚುನಾವಣೆಯ ವೇಳೆ ೧೨ ಸದಸ್ಯರು ಹಾಜರಿದ್ದರು. ಓರ್ವ ಸದಸ್ಯರು ಗೈರು ಹಾಜರಾಗಿದ್ದರು. ಬಿಜೆಪಿ ಬೆಂಬಲಿತ ಸದಸ್ಯರು ಈ ಪಂಚಾಯಿತಿಗೆ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ೨ ಸ್ಥಾನಗಳಿಗೂ ಯಾವುದೇ ಅಡ್ಡಿ ಇಲ್ಲದೆ ಅವಿರೋಧ ಆಯ್ಕೆ ಸುಲಲಿತವಾಗಿ ನಡೆಯಿತು.

ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ನಂದೀಶ್ ಚುನಾವಣಾಧಿಕಾರಿಯಾಗಿ ಗೋಣಿಕೊಪ್ಪಲು: ಬಾಳೆಲೆ ಗ್ರಾಮ ಪಂಚಾಯಿತಿಯ ೨ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಮುಕ್ಕಾಟಿರ ಜಾನಕಿ ಕಾವೇರಪ್ಪ ಹಾಗೂ ಉಪಾಧ್ಯಕ್ಷರಾಗಿ ಕಳ್ಳಿಚಂಡ ರಕ್ಷಿತ್ ಕುಶಾಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು ೧೩ ಸದಸ್ಯರನ್ನೊಳಗೊಂಡ ಬಾಳೆಲೆ ಪಂಚಾಯಿತಿಯಲ್ಲಿ ಚುನಾವಣೆಯ ವೇಳೆ ೧೨ ಸದಸ್ಯರು ಹಾಜರಿದ್ದರು. ಓರ್ವ ಸದಸ್ಯರು ಗೈರು ಹಾಜರಾಗಿದ್ದರು. ಬಿಜೆಪಿ ಬೆಂಬಲಿತ ಸದಸ್ಯರು ಈ ಪಂಚಾಯಿತಿಗೆ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ೨ ಸ್ಥಾನಗಳಿಗೂ ಯಾವುದೇ ಅಡ್ಡಿ ಇಲ್ಲದೆ ಅವಿರೋಧ ಆಯ್ಕೆ ಸುಲಲಿತವಾಗಿ ನಡೆಯಿತು.

ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ನಂದೀಶ್ ಚುನಾವಣಾಧಿಕಾರಿಯಾಗಿ ಎಂ. ವಿನು ಚಂಗಪ್ಪ, ಎ.ಎಸ್. ನವೀನ್, ಕಳ್ಳಿಚಂಡ ಬಿ. ಕುಶಾಲಪ್ಪ, ಪಣಿಯರ ಸಿಂಗ, ಪಿ.ಜಿ. ಜಾನಕಿ, ಪಂಜರಿ ಎರವರ ಗೌರಿ, ಪಿ.ಗೌರಿ, ತೋಲಗಂಗೆ, ಪುಷ್ಪಾವತಿ ಬಿ.ಕೆ. ಪಣಿ ಎರವರ ಪುಟ್ಟಮ್ಮ ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಆದ ನಂತರ ಪಕ್ಷದ ಪ್ರಮುಖರಾದ ಕಿಲನ್‌ಗಣಪತಿ ಆಳಮೇಯಂಗಡ ಬೋಸ್, ಅಡ್ಡೆಂಗಡ ಅರುಣ್, ಸುಕೇಶ್ ಭೀಮಯ್ಯ, ಅಡ್ಡೆಂಗಡ ಅಜೇಯ್, ಕಾಂಡೇರ ಶಮಿ, ಶ್ರಿಕಂಠಪ್ಪ, ಗಜಾನನ, ಅರಮಣಮಾಡ ರಂಜನ್ ಚಂಗಪ್ಪ, ಆದೇಂಗಡ ತಿಮ್ಮಯ್ಯ, ಮಂದೆAಡ ಬೋಸ್ ಗಣಪತಿ, ಶಾಶ್ವತ್, ಚಂದ್ರಶೇಖರ್ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.

ನರಿಯಂದಡ - ಅವಿರೋಧ ಆಯ್ಕೆ

ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ೨ನೇ ಅವಧಿಯಲ್ಲಿ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪೆಮ್ಮಂಡ ಕೌಶಿ ಕಾವೇರಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮೀಸಲು ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಕೋಡಿರ ವಿನೋದ್ ನಾಣಯ್ಯ ಮಾತ್ರ ನಾಮಪತ್ರ ಸಲ್ಲಿಸಿದರು.

ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಶಿಕ್ಷಣಾಧಿಕಾರಿ ಅಕ್ಷರ ದಾಸೋಹದ ಹೇಮಂತ್ ಕಾರ್ಯನಿರ್ವಹಿಸಿದರು.ಕೂಡಿಗೆ ಗ್ರಾಮ ಪಂಚಾಯಿತಿ - ಅಧ್ಯಕ್ಷರಾಗಿ ಗಿರೀಶ್

ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗಿರೀಶ್ ಕುಮಾರ್, ಉಪಾಧ್ಯಕ್ಷರಾಗಿ ಜಯಶ್ರೀ ಆಯ್ಕೆಯಾದರು.

ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಗಿರೀಶ್ ಕುಮಾರ್, ಅನಂತ್, ಅರುಣ್ ರಾವ್, ಶಿವಕುಮಾರ್, ಹೆಚ್.ಎಸ್. ರವಿ ನಾಮಪತ್ರ ಸಲ್ಲಿಸಿದ್ದರು. ಬಿಸಿಎಂ ಎ ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಜಯಶ್ರೀ ಮಾತ್ರ ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರವನ್ನು ಹೆಚ್.ಎಸ್. ರವಿ ಹಿಂಪಡೆದರು. ಈ ಪೈಕಿ ಗಿರೀಶ್ ಕುಮಾರ್‌ಗೆ ೮ ಮತಗಳು, ಅನಂತ್‌ಗೆ ೭ ಮತಗಳು ಲಭಿಸಿದವು.

ಉಪಾಧ್ಯಕ್ಷೆಯಾಗಿ ಜಯಶ್ರೀ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ೧೫ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು.

ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನಾಸದೇವಿ, ಕಾರ್ಯದರ್ಶಿ ಪುನೀತ್, ಚುನಾವಣಾ ಪ್ರಕ್ರಿಯೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ತಾಲೂಕು ಅಧ್ಯಕ್ಷ ಮನು ರೈ ಸೇರಿದಂತೆ ಇನ್ನಿತರರು ಹಾಜರಿದ್ದರು. ಬಳಿಕ ಸಿಹಿ ಹಂಚಿ, ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಾಚರಿಸಿದರು.

ಅರ್ವತ್ತೋಕ್ಲು ಗ್ರಾ.ಪಂ. ಅಧ್ಯಕ್ಷೆಯಾಗಿ ಶರೀಫ