ಗೋಣಿಕೊಪ್ಪ ವರದಿ, ಆ. ೧೦: ಕೊಡವ ಕೂಟಾಳಿ ಯಡ ಕೂಟ ಸಂಘಟನೆ ವತಿಯಿಂದ ಕೊಡವ ಜನಾಂಗದ ಮಕ್ಕಳಿಗಾಗಿ ಆಯೋಜಿಸಿದ್ದ ಕೊಡಗ್‌ರ ಚುಪ್ಪಿ ಕೋಗಿಲೆ -೨ ಎಂಬ ಆನ್‌ಲೈನ್ ಗಾಯನ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ತಮ್ಮ ಕಂಠದಾನದ ಮೂಲಕ ಗಮನ ಸೆಳೆದರು.

ಚಿಯಕ್‌ಪೂವಂಡ ಸ್ವರ ತಂಗಮ್ಮ ಪ್ರಥಮ, ಕಾಂಡAಡ ಪರಿಧಿ ಪೂವಮ್ಮ ದ್ವಿತೀಯ, ತಾಪಂಡ ಹರ್ಷಿತ್ ಪೊನ್ನಪ್ಪ ತೃತೀಯ ಸ್ಥಾನ ಪಡೆದುಕೊಂಡರು.

ಚೆಯ್ಯಂಡ ದೇಶಿಕ್ ನವೀನ್, ಕೊಟ್ಟಂಗಡ ಅನ್ವಿತ ಬೊಳ್ಳಮ್ಮ, ಕಾಂಡAಡ ಯಶ್ನ ಪೊನ್ನಕ್ಕ, ನೆಲ್ಲಚಂಡ ಪೊನ್ನಮ್ಮ, ಮಾದಂಡ ದೀತ್ಯಾ ಕಾವೇರಿ, ಬಾಚಿರ ಅದ್ವಿಕ ಕುಶಾಲಪ್ಪ, ಬಾಚಂಗಡ ಕೀರ್ತನ್ ಕರುಂಬಯ್ಯ ಟಾಪ್‌ಟೆನ್ ಸ್ಪರ್ಧಿ ಸ್ಥಾನ ಅಲಂಕರಿಸಿದರು. ಅಭಿನಂದನಾ ಪತ್ರ, ನಗದು ಬಹುಮಾನ ನೀಡಲಾಯಿತು.

ಪ್ರಮೀಳ, ಕಬ್ಬಚ್ಚಿರ ಸುಮಾ ನಾಚಪ್ಪ, ಚೆಯ್ಯಂಡ ಶಿಲ್ಪ ನವೀನ್ ಧನ ಸಹಾಯದ ಮೂಲಕ ಪ್ರೋತ್ಸಾಹ ನೀಡಿದರು. ಚೇಂದಿರ ನಿರ್ಮಲ ಬೋಪಣ್ಣ, ಮೇವಡ ಕಾವೇರಿ ಸೋಮಯ್ಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಕೂಟದ ಕಾರ್ಯಕ್ರಮ ಸಂಚಾಲಕರಾಗಿ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ನಿರ್ದೇಶಕ ಕಾಂಗಿರ ಸಂತೋಷ್ ದೇವಯ್ಯ ಕಾರ್ಯನಿರ್ವಹಿಸಿದರು. ಕೂಟದ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್ ಜವಬ್ದಾರಿ ನಿಭಾಯಿಸಿದರು.