ಸೋಮವಾರಪೇಟೆ, ಆ. ೧೦ : ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಆಟಿ ಮಾಸದ ಅಂಗವಾಗಿ ದುರ್ಗಾದೀಪ ನಮಸ್ಕಾರ ಪೂಜೆ ನೆರವೇರುತ್ತಿದ್ದು, ತಾ.೧೫ರಂದು ವಿಶೇಷವಾದ ಚಂಡಿಕಾ ಮಹಾಯಾಗ ನಡೆಯಲಿದೆ.
ಕಳೆದ ಜುಲೈ ೧೭ರಿಂದ ಆರಂಭವಾಗಿರುವ ಭಗವತಿ ದೇವಿಗೆ ದುರ್ಗಾದೀಪ ನಮಸ್ಕಾರ ಪೂಜೆಯು ನಿರಂತರವಾಗಿ ಪ್ರತಿನಿತ್ಯ ಅರ್ಚಕರಾದ ಜಗದೀಶ್ ಉಡುಪ ನೇತೃತ್ವದಲ್ಲಿ ನಡೆಯುತ್ತಿದ್ದು ತಾ. ೧೬ ರಂದು ಸಂಪನ್ನಗೊಳ್ಳಲಿದೆ. ಕಳೆದ ೨೧ ವರ್ಷಗಳಿಂದ ನಿರಂತರವಾಗಿ ದುರ್ಗಾದೀಪ ನಮಸ್ಕಾರ ಪೂಜೆಯು ನಡೆಸಿಕೊಂಡು ಬರಲಾಗುತ್ತಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್ಕುಮಾರ್ ತಿಳಿಸಿದ್ದಾರೆ.
ಭುವನೇಶ್ವರಿ ದೇವಿಯು ಪ್ರಧಾನ ದೇವತೆಯಾಗಿ ನಿರ್ಮಾಲ್ಯದಲ್ಲಿ ಸರಸ್ವತಿಯಾಗಿ, ಉಷಾ ಪೂಜೆಗೆ ಲಕ್ಷಿö್ಮಯಾಗಿ ಹಾಗೂ ಪ್ರದೋµ À(ಸಂಜೆ) ಪೂಜೆಯಲ್ಲಿ ಮಹಾಕಾಳಿಯಾಗಿ ಭಕ್ತರಿಗೆ ದರ್ಶನ ನೀಡುತ್ತಿರುವುದು ಕ್ಷೇತ್ರದ ವಿಶೇಷವಾಗಿದೆ. ಅಲ್ಲದೆ ಕಂಕಣಭಾಗ್ಯ ಬಯಸುವವರು ಸ್ವಯಂವರ ಪುಷ್ಪಾಂಜಲಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿಕೊಂಡು ಬಂದಲ್ಲಿ ವಿವಾಹ ಯೋಗ ಕರುಣಿಸುವುದು ಈ ಕ್ಷೇತ್ರದ ಮತ್ತೊಂದು ವಿಶೇಷತೆ ಎಂದು ವಿನೋದ್ಕುಮಾರ್ ಹೇಳಿದ್ದಾರೆ.
ಕ್ಷೇತ್ರದಲ್ಲಿ ತಾ. ೧೫ ರಂದು ಚಂಡಿಕಾ ಮಹಾಯಾಗ ಜರುಗಲಿದ್ದು, ತಾ.೧೬ರಂದು ಶತ್ರು ಸಂಹಾರ ಪೂಜೆ ಜರುಗಲಿದೆ. ಶತ್ರುಪೀಡೆ, ಕ್ರತ್ರಿಮ ಭಾದೆ ನಿವಾರಣೆಗಾಗಿ ಭಕ್ತಾದಿಗಳು ಪೂಜೆ ಸಲ್ಲಿಸುವುದು ವಿಶೇಷವಾಗಿದೆ.
ಕ್ಷೇತ್ರಕ್ಕೆ ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆಯಿಂದಲೂ ಭಕ್ತಾದಿಗಳು ಆಗಮಿಸುತ್ತಿದ್ದು, ಕಳೆದ ೨೧ ವರ್ಷಗಳಿಂದ ಆಟಿ ಮಾಸದಲ್ಲಿ ಒಂದು ತಿಂಗಳು ಕಾಲ ಪ್ರತಿನಿತ್ಯ ಭಗವತಿ ದೇವಿಗೆ ದುರ್ಗಾದೀಪ ನಮಸ್ಕಾರ ಪೂಜೆ ಜರುಗುತ್ತಿದೆ. ಸಂಜೆ ಪ್ರತಿನಿತ್ಯ ೬ ಗಂಟೆಯಿAದ ಸಹಸ್ರನಾಮ ಪಠಣ ನಡೆಯುತ್ತಿದ್ದು, ನಂತರ ಭಕ್ತಾದಿಗಳ ಪ್ರಸಾದ ವಿತರಣೆ, ಅನ್ನದಾನ ನಡೆಸಿಕೊಂಡು ಬರಲಾಗುತ್ತಿದೆ.
ತಾ. ೧೨ ರಂದು ಶ್ರೀ ಅಯ್ಯಪ್ಪಸ್ವಾಮಿಗೆ ಮಹಾನಿರಾಂಜನ ಸೇವೆ ವಿಶೇಷವಾಗಿ ಜರುಗಲಿದೆ ಎಂದು ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ತಿಳಿಸಿದ್ದಾರೆ.