ಭಾಗಮಂಡಲ, ಆ. ೧೦: ಭಾಗಮಂಡಲ ಗ್ರಾಮ ಪಂಚಾಯಿತಿ ವತಿಯಿಂದ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಭಾಗಮಂಡಲ ಬಳಡ್ಕ ಕುಟುಂಬಸ್ಥರ ಗದ್ದೆಯಲ್ಲಿ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ.

ಹಗ್ಗಜಗ್ಗಾಟ, ಓಟದ ಸ್ಪರ್ಧೆ, ದಂಪತಿಗೆ ಸಮಭಾರ ಓಟ, ಮಕ್ಕಳಿಗೆ ಅಡಿಕೆ ಹಾಳೆ ಎಳೆಯುವುದು, ವಿಷದ ಚೆಂಡು ಸ್ಪರ್ಧೆ ನಡೆಯಲಿದೆ. ಆಕರ್ಷಕ ನಗದು ಬಹುಮಾನ ನೀಡಲಾಗುವುದು. ತಾ. ೧೪ ರ ಮಧ್ಯಾಹ್ನ ೧೨ ಗಂಟೆಯೊಳಗೆ ತಂಡವನ್ನು ನೋಂದಾಯಿಸಿ ಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ೯೪೪೯೪೦೨೩೫೧, ೯೪೮೭೩೦೦೯೫ ಅನ್ನು ಸಂಪರ್ಕಿಸಬಹುದು.