ಸುಂಟಿಕೊಪ್ಪ, ಆ. ೧೦: ಮೂಲತಃ ಸುಂಟಿಕೊಪ್ಪದವರಾದ ಪ್ರಸ್ತುತ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಂಥನ್ ಎ., ಎನ್.ಸಿ.ಸಿ. ಮೂಲಕ ನಡೆದ ರಾಷ್ಟಿçÃಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಬೆಂಗಳೂರಿನ ಇಂಟರ್ ಡೈರಕ್ಟರೇಟ್ ಶೂಟಿಂಗ್ ತರಬೇತಿ ವತಿಯಿಂದ ಕೇರಳದ ಪಟ್ಟಿವೂರ್‌ಕಾವ್ ಎಂಬಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಮಂಥನ್ ಈ ಸಾಧನೆ ಮಾಡಿದ್ದಾರೆ. ಸುಂಟಿಕೊಪ್ಪ ನಿವಾಸಿಗಳಾದ ಟಿ.ಜಿ. ಅಶ್ವಥ್ ಹಾಗೂ ಜ್ಯೋತಿ ಅವರ ಪುತ್ರ ಮಂಥನ್ ಅವರು ರೇವ ಯೂನಿವರ್‌ರ್ಸಿಟಿಯಲ್ಲಿ ಮೊದಲ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದು, ಪೋಷಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.