ಸುಂಟಿಕೊಪ್ಪ, ಆ. ೧೦: ಏಳನೇ ಹೊಸಕೋಟೆ ನಿವಾಸಿ ಪ್ರಮೋದ್ ಅವರ ಮನೆಯೊಳಗೆ ಸೇರಿಕೊಂಡಿದ್ದ ವಿಷಪೂರಿತ ಹಾವನ್ನು ಉರಗ ಪ್ರೇಮಿ ಸ್ನೇಕ್ ಶಾಜಿ ಅವರು ರಕ್ಷಿಸಿ ಆನೆಕಾಡು ಅರಣ್ಯಕ್ಕೆ ಬಿಟ್ಟಿದ್ದಾರೆ.

ನಾಗರ ಹಾವಿಗಿಂತಲೂ ವಿಷ ಪೂರಿತವಾದ ಈ ಹಾವನ್ನು ಕಂಡ ಮನೆಯವರು ಭಯ ಭೀತರಾಗಿದ್ದು ಕೂಡಲೇ ಸ್ನೇಕ್ ಶಾಜಿ ಅವರಿಗೆ ಕರೆ ಮಾಡಿದ್ದಾರೆ. ಹಾವು ನೋಡಲು ಸುಂದರವಾಗಿದ್ದು, ಇದೊಂದು ಕೋರಲ್ ಹಾವಾಗಿದ್ದು, ಈ ಹಾವುಗಳು ಕಾಡು ಮತ್ತು ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ನಾಗರ ಹಾವಿಗಿಂತಲೂ ಮೂರುಪಟ್ಟು ವಿಷಕಾರಿ ಎಂದು ಶಾಜಿ ತಿಳಿಸಿದ್ದಾರೆ.